ಪುಟ:ದಕ್ಷಕನ್ಯಾ .djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೦೭ ದ ಕ ಕ ನ್ಯಾ ಸಂತೋಷವಾರ್ತೆಯನ್ನು ತಿಳಿಸಿ, ಮುಂದಿನ ಕೆಲಸಗಳನ್ನು ಜಾಗ್ರತೆಪಡಿ ಸುವೆನು ; ನೀನಿನ್ನು ಹೊರಡು.' ನರಸಿಂಗನು, ಆಗಲೆಂದೊಪ್ಪಿ ಅಲ್ಲಿಂದಹೊರಟು, ಸ್ವಲ್ಪ ದೂರಹೋಗಿ ಮರದಮರೆಯಲ್ಲಿ ಮರೆಯಾದನು. ಭ್ರಾಂತನಾಗಿದ್ದ ಸುಸಂಧನಿಗೆ ಅದಾ ವುದೂ ತಿಳಿಯಲಿಲ್ಲ ; ಒಂದೇ ಓಟದಲ್ಲಿ ಓಡಿಹೋದನು, ಈತನು ಹೊರಟು ಹೋದ ಉತ್ತರಕ್ಷಣದಲ್ಲಿಯೇ ಮರೆಯಾಗಿದ್ದ ನರಸಿಂಗನು ಮತ್ತೆ ಬಂದು, ಕಿಟಕಿಯಬಳಿಯಲ್ಲಿ ನಿಂತು ಕೂಗಿದನು. ' ವಿಂದಾ ! ವಿಂದಾ !! " ಮಲಗಿದ್ದ ವ್ಯಕ್ತಿ-ಬೆದರಿಬಿದ್ದೆದ್ದು ಕುಳಿತು ಕೇಳಿದಳು-' ಯಾರದು ? ಹೆಸರೆತ್ತಿ ಕೂಗುವರು ? ಇಲ್ಲೇನು ಕೆಲಸ ?? ನರಸಿಂಗ' ಭಯಪಡಬೇಡ ! ನಾನೊಬ್ಬ ರಾಜಕರ್ಮಚಾರಿ, ಉಳಿದ ವಿಚಾರವೆಲ್ಲವೂ, ಈ ಕಾಗದದಿಂದಲೇ ತಿಳಿಯುತ್ತದೆ. ನಿಧಾನಿಸಿ ನೋಡಿ ತಿಳಿ ನಾಳೆಯರಾತ್ರಿ ಮತ್ತೆಯೂ ನಿನಗೆ ಕಾಣಿಸಿಕೊ ಳ್ಳುವೆನು.' ಎಂದು ಹೇಳಿ, ಪಾಗಿನೊಳಗಡೆಯಲ್ಲಿ ಅಡಗಿದ್ದ ಪತ್ರ ವನ್ನು ತೆಗೆದು ಕಿಟಕಿಯಿಂದ ಕೆಳಗೆ ಬಿಸುಟು, ಅಂಗಿಯ ಕಿಸೆಯ ಇದ್ದ ಮೇಣದ ಬಿಲ್ಲೆಯನ್ನು ಹೊರತೆಗೆದು, ಬಾಗಿಲಿಗೆ ಹಾಕಿದ್ದ ಬೀಗಕ್ಕೆ ಒತ್ತಿ, ಅದರ ಆಕಾರವನ್ನು ತೆಗೆದುಕೊಂಡು, ಅಲ್ಲಿ ನಿಲ್ಲದೆ ಹೊರಟುಹೋದನು, ನರಸಿಂಗನಾಮಧಾರಣೆಯಿಂದ ಬಂದಿದ್ದ ದಾರಿಗನಾರೋ, ಅವನ ಈ ಅನ್ವೇಷಣದ ಮೂಲಮಂತ್ರವೆಂತ ಹದೋ, ಮುಂದೆ ತಿಳಿಯಬಹುದಲ್ಲವೇ ? (ಆಗಬಹುದು.) | -+