ಪುಟ:ದಕ್ಷಕನ್ಯಾ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ದ್ವಿತೀಯಪರಿಚ್ಛೇದ. ಸ್ಥಿ (ಪೂರ್ವಸ್ಮರಣೆ.) ಎಂದೆಯು ಹಾಸಿಗೆಯಿಂದೆದ್ದು ಬಂದು, ಕಿಟಕಿಯಿಂದ ಕೆಳಗೆ hಾ ಬಿದ್ದ ಪತ್ರವನ್ನು ಕೈಕೊಂಡು, ಕಿಟಕಿಯಲ್ಲಿ ಮುಖ ಇತಿ ಎಟ್ಟು, ಒಂದುಬಾರಿ ಹೊರಗಡೆಯನ್ನು ಚೆನ್ನಾಗಿ 36 ನೋಡಿದಳು ; ಯಾರೂ ಇರಲಿಲ್ಲ. ಮನಸ್ಸಿಗೆ ಧೈಯ್ಯ ವಾಯಿತು, ಮಿಣಗುಟ್ಟುತ್ತಿದ್ದ ದೀಪದ ಬತ್ತಿಯನ್ನೆತ್ತಿ, ಅದರ ಬಳಿ ಯಲ್ಲಿ ಕುಳಿತು, ಕುತೂಹಲ, ಭಯ, ವಿಸ್ಮಯಗಳಿಂದ ಪತ್ರವನ್ನು ಓದಿದಳು. (ಪತ್ರವು ಈ ಬಗೆಯಾಗಿ ವಿಲಿಖಿತವಾಗಿದ್ದಿತು.) * ಸುನಂದಾನಂದನೆ ! ಬಂಧನವೆಂಬುದು ಯಾರಿಗೂ ತಪ್ಪಿದುದಲ್ಲ. ಮೊದಲು ಸೀತೆಯ ವನವಾಸ, ಚಂದ್ರಮತಿಯ ದಾಸ್ಯ, ಪಾಂಚಾಲಿಯ ಅಜ್ಞಾತವಾಸ ಇವು ಗಳನ್ನು ನೀನು ಚೆನ್ನಾಗಿ ಓದಿ ತಿಳಿದೇ ಇರುವೆಯಲ್ಲವೆ ? ಆದುದರಿಂದ, ಈಗ ನಿನಗಾಗಿರುವ ಬಂಧನ ಕ್ಷೇಶಗಳನ್ನು ಕುರಿತು, ನೀನು ನಿರಾಶಳಾಗು ವುದು ಸರಿಯಲ್ಲ. ಸತ್ಯಕ್ಕೆ ಯಾವಾಗಲೂ ಜಯವೇ ಸಿದ್ಧವಾಗಿರುವುದು, ಈಗ ನೀನು ದ್ರೋಹಿಗಳ ಕೈಗೆ ಸಿಕ್ಕಿರುತ್ತೀಯಾದರೂ, ಸತ್ಯಸಂಧರೂ, ಭಗವ ದೃಕ್ಕರೂ ಆದ ನಿನ್ನ ತಾಯ್ತಂದೆಗಳ ಮತ್ತು ಗುರುಜನರ ಅನುಗ್ರಹದಿಂ ದೆಯೂ, ನಿನ್ನ ಸೌಶೀಲ್ಯ ಪ್ರಭಾವದಿಂದೆಯೂ ನಿನ್ನಲ್ಲಿ ದೈವಬಲವು ಸಿದ್ಧ ವಾಗಿರುವುದು, ಕಾಲಬಲವು ಸಂತಾಪವನ್ನು ೦ಟುಮಾಡಬಹುದಾದರೂ,