ಪುಟ:ದಕ್ಷಕನ್ಯಾ .djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೦೯ ದೈವಬಲವನ್ನು ಅದು ಹೇಗೂ ಪ್ರತಿಭಟಿಸಲಾರದು, ಸತ್ಯಾತ್ಮರಿಗೊದವಿದ ಅಪದವೂ, ದುರಾತ್ಮರಿಗುಂಟಾದ ಸಂಪದವೂ ಅತ್ಯಲ್ಪ ಕಾಲದಲ್ಲಿಯೇ ಅದೃಶ್ಯವಾಗುವುವೆಂಬ ಸೂಕ್ತಿಯು ಎಂದಿಗೂ ತಪ್ಪಾಗಲಾರದು, ಇದನ್ನ ರಿತು ಧೈಯ್ಯದಿಂದಿರು. ಮಿತ್ರವಿಂದಾ | ಈಗ ನಿನಗೊದವಿದ ಸಂಕಟವನ್ನು ತಿಳಿದು ಅನುತಾಪಪಡುವೆನಲ್ಲದೆ, ನಿನ್ನ ಬಂಧಮೋಚನಕ್ಕೂ, ವಿಧರ್ಮಿಗಳನ್ನು ನಾಶಮಾಡುವುದರಿಂದಾಗುವ ಶ್ರೇಯೋಭಿವೃದ್ಧಿಗೂ ಇದೇ ಸಹಕಾರಿಯಾಗಿ ಪರಿಣಮಿಸುವುದೆಂಬ ನೂತನ ಶಕ್ಯುತ್ಸಾಹದಿಂದ ನಿನ್ನ ಬಿಡುಗಡೆಗಾಗಿ ಪ್ರಯತ್ನವನ್ನೂ ಮಾಡುತ್ತಿರು ವೆನು, ಈಗಾಗಲೇ ತಕ್ಕ ಏರ್ಪಾಟುಗಳೂ ನಡೆದು-ನಡೆಯುತ್ತಿರುವುವು. ಮತ್ತು ಇಷ್ಟರಲ್ಲಿಯೇ ಅಹಿತರು ಸಿಕ್ಕಿ ಬಿದ್ದು, ಪ್ರಯತ್ನ ಕಾರವೂ ಫಲಿಸುವ ಸೂಚನೆಯು ಕಾಣುತ್ತಿರುವುದು. ಮತ್ತೊಂದುವಿಚಾರ ನಿನಗೆ ಇಂದು ಪತ್ರವನ್ನು ತಂದಿತ್ತವನೇ। ನಾಳೆಯ ರಾತ್ರಿಯಲ್ಲಿಯೂ ನಿನಗೆ ಕಾಣಿಸಿಕೊಳ್ಳುವನು, ಆ ವೇಳೆಯಲ್ಲಿ, ನೀನು ಕೂಗಿಕೊಳ್ಳುವುದಾಗಲೀ, ಹಟಮಾಡುವುದಾಗಲೀ ಸರಿಯಲ್ಲ. ಆದರೆ, ಆ ಬರುವವನು ತನ್ನ ನೈಜವಾದ ಸ್ವರೂಪದಲ್ಲಿಯೇ ಬರದೆ ವೇಷಾಂತರದಿಂದ ಬರುವನಾದುದರಿಂದ, ಪತ್ರದ ವಿಚಾರವನ್ನೆ ಇದೆಯೇ ನೀನು ಬಾಗಿಲನ್ನು ತೆರೆಯಲಾಗದು. ನಿನ್ನನ್ನು ನೋಡಬರುವಾತನೇ ನಿನ್ನ ಬಿಡುಗಡೆಗೆ ಉಪಾಯವನ್ನೂ, ಮತ್ತು ನನ್ನ ಪರಿಚಯವನ್ನೂ, ಸೂಚಿಸು ವನು, ಈ ವಿಚಾರಗಳನ್ನು ಚೆನ್ನಾಗಿ ನೆನಪಿಟ್ಟು, ಎಚ್ಚರಿಕೆಯಿಂದಿರು.

  • ಇತಿ ನಿನ್ನ ಶ್ರೇಯೋಭಿಲಾಷಿ.' ಪತ್ರಾಲೋಕನದಿಂದ ನಿಂದೆಯ ಮನಸ್ಸಿಗುಂಟಾದ ಆನಂದವನ್ನು ಇಲ್ಲಿ ವಿವರಿಸಲಿಕ್ಕಾಗಲಾರದು. ಹತಾಶರಾಗಿ ಬಿದ್ದಿದ್ದವರಿಗೆ, ಸುಖಮ ಯಸ್ವರೂಪವೇ ಪ್ರತ್ಯಕ್ಷವಾದಂತಾದರೆ, ಹೇಳುವುದೇನು ? ಹೇಗೂ ಇರಲಿ, ಎಂದೆಯು ಪತ್ರವನ್ನು ಮತ್ತೊಮ್ಮೆ ಓದಿದಳು ; ತಣಿಯಲಿಲ್ಲ, ಮತ್ತೆ