ಪುಟ:ದಕ್ಷಕನ್ಯಾ .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಸ ತಿ ಹಿ ತ ಷಿ ಣಿ ಮತ್ತೆ ಓದಿದಳು. ಎಷ್ಟು ಸಾರಿ ಓದಿದರೂ ತಣಿಯದೆ, ಅಷ್ಟಷ್ಟಕ್ಕೂ ಆಶೆಯು ಹೆಚ್ಚುತ್ತಲೇ ಇದ್ದಿತು. ತನಗೀವಿಪತ್ತನ್ನು ತಂದೊಡ್ಡಿದ ವಿದ್ರೋ ಹಿಗಳನ್ನು ಶಪಿಸಿದಳು, ತನ್ನ ಬಿಡುಗಡೆಗಾಗಿ ಹೇಳಿರುವ ಮಾತುಗಳನ್ನು ಅಡಿಗಡಿಗೂ ನೋಡಿನೋಡಿ, ನಲಿದಾಡುತ್ತಿದ್ದಳಲ್ಲದೆ, ವಾರದಮೇಲಾದರೂ ತನ್ನ ವಿಷಯದಲ್ಲಿ ಕೃಪೆತೋರಿದುದಕ್ಕಾಗಿ, ಆ ಭಗವಂತನನ್ನು ಭಕ್ತಿ ಪೂರ್ವ ಕವಾಗಿ ವಂದಿಸಿದಳು. ಅನಾಥಬಂಧುವಾಗಿ, ಆಪತ್ಕಾಲದಲ್ಲಿ ಅಭಯ ವಿತ್ತ ಪತ್ರಕಾರನನ್ನು ಮನದಲ್ಲಿಯೇ ನೆನೆನೆನೆದು ಹಿಗ್ಗುತ್ತಿದ್ದಳು. ಕ್ರೋಧ-ವಿಸ್ಮಯ-ಕುತೂಹಲ-ಕೃತಜ್ಞತೆ ಇತ್ಯಾದಿಗಳಿಂದ ಅಧೀರಳಾಗಿ ಕಡೆಗೆ, ಒಂದೆಡೆಯಲ್ಲಿ ನಿಲ್ಲಲಾರದೆ ಬಂದು ಹಾಸಿಗೆಯ ಮೇಲೆ ಮಲಗಿದಳು, ನಿದ್ದೆ ಬಾರದೆ ಒದ್ದಾಡಿದಳು. ಎಷ್ಟು ಹೇಳಿದರೇನು ? ಅವಳು ಆ ರಾತ್ರಿ ಯಲ್ಲಿ ಹೇಗಾಗಿದ್ದಳೆಂದರೆ-ಏಳುವಳು, ಬೀಳುವಳು, ಬೆದರಿನೋಡುವಳು, ಮತ್ತೆ ಪತ್ರವನ್ನು ನೋಡಿ ತಲೆದೂಗಿ ಹಿಗ್ಗುವಳು. ಹೆಚ್ಚೇಕೆ ? ಪರಮಾ ತ್ಮನನ್ನು ಕೊಂಡಾಡುವುದರಲ್ಲಿಯೂ, ಪತ್ರಕಾರರನ್ನು ವಂದಿಸುವುದರ ಇಯ, ಅಹಿತರನ್ನು ಶಪಿಸುವುದರಲ್ಲಿಯ ಆ ರಾತ್ರಿಯನ್ನು ಕಳೆದಳೆಂ ದರೆ ಸಾಕು. ಕಾಲಚಕ್ರವು ಹೇಗಿದ್ದರೂ, ತನ್ನ ನಿಯಮಕ್ಕೆ ಸರಿಯಾಗಿ ಸುತ್ತು ತಿರುವುದನ್ನು ಬಿಡಲೊಲ್ಲದಷ್ಟೆ ! ವಿಂದೆಯ ಈ ವಿಧವಾದ ರೋದನದ ಲ್ಲಿಯೇ ಕತ್ತಲೆಕಳೆದು, ಬೆಳಕು ತಲೆದೋರಿತು. ಪ್ರಭಾತರಾಗವು ತಲೆದೋ ರಿದಬಳಿಕ, ವಿಂದೆಯ ಮನಸ್ಸಿತಿಯೂ ಸ್ವಲ್ಪಮಟ್ಟಿಗೆ ಶಾಂತಿಯನ್ನು ವಹಿಸುವಂತಾಯಿತು. ಮನವು, ಸಮಾಧಾನಸ್ಥಿತಿಗೆ ಬಂದಮೇಲೆ ಎಂದೆಗೆ ಹಸಿವು, ಬಾಯಾರಿಕೆಗಳ ಬಾಧೆಯ ಕಂಡುಬಂದಿತು. ಮಲಗಿದ್ದವಳು, ಹಾಸಿಗೆಯನ್ನು ಳಿದೆದ್ದು ಬಂದು, ಅಡ್ಡಗೋಡೆಯಬಳಿಯಲ್ಲಿದ್ದ ಜಲದ್ದಾ ರದ ಬಳಿಯಲ್ಲಿ ನಿಂತು ಅಲ್ಲಿಯೇ ಪಾತ್ರೆಯಲ್ಲಿದ್ದ ನೀರಿನಿಂದ ಕೈಕಾಲು ಮುಖಗಳನ್ನು ತೊಳೆದುಕೊಂಡಳು, ಮತ್ತೆ ಬಂದು ಹಾಸಿಗೆಯಮೇಲೆ