ಪುಟ:ದಕ್ಷಕನ್ಯಾ .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೧೧ ದ ಕ ಕ ನ್ಯಾ ಕುಳಿತು ಆಹಾರ ನಿರೀಕ್ಷೆಯಲ್ಲಿದ್ದಳು. ಎಷ್ಟೆಷ್ಟು ತಡೆದರೂ ನಿಲ್ಲದೆ, ಸಂಕ ಟದಿಂದ ಇವಳ ಕಣ್ಣುಗಳಲ್ಲಿ ಬಿಸಿಬಿಸಿಯಾದ ನೀರು ಸುರಿಯುತ್ತಿದ್ದಿತು. ಎಷ್ಟೊಹೊತ್ತಿನಮೇಲೆ, ಹೊರಗಡೆ ಬೀಗವನ್ನು ತೆಗೆವಂತೆ ಶಬ್ದವಾ ಯಿತು. ವಿಂದೆಯು ಭಯದಿಂದೆದ್ದು ಬಂದು, ಬಾಗಿಲಬಳಿಯಲ್ಲಿ ನಿಂತಳು. - ಹೊರಗಡೆಯಲ್ಲಿ ಬೀಗವನ್ನು ತೆಗೆದವನು, ಮೊದಲು ಗುಡ್ಡದಲ್ಲಿ ಕುಳಿತಿದ್ದ ಕರಾಳವದನನಾಗಿದ್ದನು. ಕರಾಳನು ಬೀಗವನ್ನು ತೆಗೆದು ಬಾಗಿ ಲನ್ನು ತಳ್ಳಿದನು. ಅದೂ ತೆಗೆಯಲ್ಪಡಲಿಲ್ಲ ; ಉತ್ತರವೂ ಹೊರಡಲಿಲ್ಲ. ಕರಾಳನು ಕಿಟಕಿಯಬಳಿಗೆ ಬಂದು ಬಗ್ಗಿ ನೋಡಿದನು. ಎಂದೆಯು ಕಣ್ಣಿಗೆ ಬೀಳಲಿಲ್ಲವಾದುದರಿಂದ, ಕೂಗಿಹೇಳಿದನು- .' ಹುಚ್ಚು ಹುಡುಗಿ ' ಸುಮ್ಮ ನೇಕೆ ಹಟಮಾಡಿ ಸಾಯುತ್ತೀಯೆ ? ಭಯಪಡುವುದೇಕೆ ? ಬಾಗಿಲನ್ನು ತೆರೆದು, ಆಹಾರವನ್ನು ತೆಗೆದುಕೊ.' ವಿಂದೆ-ಮರೆಯಾಗಿಯೇ ಇದ್ದು ಹೇಳಿದಳು-' ಈಗಲೇ ನನಗೆ ಆಹಾರವು ಬೇಕಿಲ್ಲ ; ನಾನು ಬಾಗಿಲನ್ನು ತೆಗೆಯಲಾಗಲಿಕ್ಕಿಲ್ಲ.' ಕರಾಳ-ಪ್ರೀತಿವ್ಯಂಜಕಸ್ವರದಿಂದ ಮಗು ! ಹೀಗಾಡಬಾರದು. ಹಸಿ ದುಸಾಯುವುದು ಯಾವಧರ್ಮ ? ಅಂತಹ ವಿಪತ್ತು ನಿನಗೇಕೆ ಒಂದೀತು ? ನಿನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿಯೇ ನೋಡು ವೆವಲ್ಲದೆ, ನಿನಗೆ ಕೆಡುಕೇನನ್ನೂ ಮಾಡುವವರು ನಾವಲ್ಲ, ನನ್ನಲ್ಲಿ ನಿನಗೆ ಭಯಕ್ಕಾದರೂ ಕಾರಣವೇನು ? ನಿನ್ನನ್ನು ಪತ್ರವಧುವ (ಸೊಸೆಯ) ನ್ನಾಗಿ ಮಾಡಿಕೊಳ್ಳ ಬೇಕೆಂದಿರುವ ನನ್ನನ್ನು ನಿನ್ನ ಮಾವನೆಂದೇ ತಿಳಿದು, ನಿಶ್ಯಂಕೆಯಿಂದ ಬಾಗಿಲನ್ನು ತೆರೆ ; ಆಹಾ ರವನ್ನು ತೆಗೆದುಕೊ ; ಸಮಾಧಾನದಿಂದಿರು.' ವಿಂದೆ-ನಾನು, ಈಗ ಮಲಗಿರುವೆನು ; ಏಳಲೊಲ್ಲೆನು. ನನಗೆ ಈಗ ಆಹಾರವೇನೂ ಬೇಕಾಗಿಲ್ಲ, ಯಾವುದನ್ನು ತಂದಿದ್ದರೂ ಕಿಟಿಕಿ ಯಲ್ಲಿರಿಸಿದ್ದರೆ, ಬೇಕಾದವೇಳೆಯಲ್ಲಿ ತೆಗೆದುಕೊಳ್ಳುವೆನು.