ಪುಟ:ದಕ್ಷಕನ್ಯಾ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ದ ಕ ಕ ನಾ ಬಲವಂತನು ಮತ್ತೆ ಕೂಗಿಹೇಳಿದನು ; ಆದರೂ ಫಲವಾಗ ಲಿಲ್ಲ, ಹೇಳಿಹೇಳಿ ಬೇಸತ್ತನು ; ನಿಂತುನಿಂತು ಕಾಲುಗಳೂ ಸೋತುಹೋ। ದುವು, ನಿಂದೆಯ ಹಟವು ತಗ್ಗಲಿಲ್ಲ, ಕಡೆಗೆ ಉದಾಸೀನದಿಂದ * ಹೇಗಾ ದರೂ ಮಾಡು ; ಹಟಮಾರಿಗೆ ಯಾರೇನುಮಾಡಲಾದೀತು ? ' ಎಂದು ಹೇಳಿ ತಂದಿದ ಎರಡುರೊಟಿಗಳನು ಕಿಟಕಿಯಿಂದೆಸೆದು, ಹಾಲಿನಕುಡಿಕೆ ಯನ್ನು ಕಿಟಕಿಯಲ್ಲಿರಿಸಿ, ಮತ್ತೆ ಬೀಗಹಾಕಿಕೊಂಡು ಹೊರಟುಹೋದನು. "ವಿಂದೆಯ ಆತ್ಮನು, ಕ್ಷುದ್ರಾಧೆಯಿಂದ ಬಳಲಿದ್ದ ಕಾರಣ ಬಲವಂ ತನು ಹೊರಟುಹೋಗುವುದನ್ನೇ ನಿರೀಕ್ಷಿಸುತ್ತಿದ್ದು ಅವನತ್ತ ಹೋದುದನ್ನು ಕಂಡು, ಎದ್ದು ಬಂದು ಕುಡಿಕೆಯಲ್ಲಿದ್ದ ಹಾಲನ್ನು ಮಾತ್ರ ಕುಡಿದು, ರೊಟ್ಟಿಯನ್ನು ಕಡೆಗಣ್ಣಿಂದಾದರೂ ನೋಡದೆ, ಹಾಸಿಗೆಯಮೇಲೆ ಮಲ ಗಿದಳು, ಒಂದು ಪಾವು ಹಾಲಿಂದ ಇವಳ ಹಸಿವು, ಬಾಯಾರಿಕೆ, ಬಳಲಿಕೆ ಗಳಿ೦ಗಲಿಲ್ಲ. ಪಾಪ ! ಹನ್ನೆರಡು ವರ್ಷದ ಹುಡುಗಿಗೆ ಹಸಿವನ್ನು ತಡೆಯ ಬೇಕೆಂದರೆ, ಹೇಗಾದೀತು ? ವಿಂದೆಯು ಬಡಕುಟುಂಬದಲ್ಲಿ ಹುಟ್ಟಿದವಳಲ್ಲ ; ಆಗರ್ಭ ಶ್ರೀಮಂ ತರ ಮನೆತನದಲ್ಲಿ ಹುಟ್ಟಿದವಳು ; ಸುಧಾರಕ ಮಂಡಲಿಯಲ್ಲಿ ಪ್ರಖ್ಯಾತ ನಾದ, ಶ್ರೀಮಂತನ ಪ್ರೇಮಾತಿಶಯದಿಂದಲೇ ಬೆಳೆದವಳು. ಇಂತಹ ಸುಕು ಮಾರಿಯು, ತನಗೆ ಈಗ ಬಂದೊದವಿದ ಸಂಕಟವನ್ನು ಹೇಗೆ ಸಹಿಸಬೇಕು ? ಆಪ್ಡೇಷ್ಟರನ್ನೂ ತೊರೆದು, ಹೆತ್ತವರಿಗೆರೆವಾಗಿ, ಎಂದೂ ಕಂಡು-ಕೇಳದ ನರಳುವಾಗ ಹೇಗಾಗಿರಬೇಕೋ ! ಅನು ಭವಶಾಲಿಗಳೇ ತಿಳಿದು ಹೇಳಬೇಕು. ವಿಂದೆಯು, ತನ್ನ ತಾ ತನಬಳಿಯಲ್ಲಿ ತಾನು ಹೊಂದುತ್ತಿದ್ದ ಸುಖ ಸಂತೋಷಗಳನ್ನೂ, ತನ್ನ ವ್ಯಾಸಂಗದಿಂದ ನಲಿನಲಿದು ಮುದ್ದಿಸುತ್ತಿದ್ದ ಆಪತ್ಬಾಂಧವರ ಅವ್ಯಾಜವಾತ್ಸಲ್ಯವನ್ನೂ ಸ್ಮರಿಸಿಸ್ಕರಿಸಿ ಹಂಬಲಿಸುತ್ತ, ತನ್ನನ್ನು ಈಗಾಗಿರುವ ಕಷ್ಟದಿಂದ ಪಾರುಮಾಡಿ, ಕಾಪಾಡೆಂದು ಭಗ ವಂತನನ್ನು ಕುರಿತು ದೈನ್ಯದಿಂದ ಬೇಡುತ್ತಿದ್ದಳು. ಇವಳ ಈ ಬಗೆಯ ಭಕ್ತಿ ಪುರಸ್ಟರವಾದ ಭಗವದ್ಗಾ ನದಿಂದ ಮನಸ್ಸು ಪರವಶವಾಗಿ, ಇವಳು ಮೈಮರೆತು ಮಲಗಿ ನಿದ್ದೆ ಹೊಂದಿದಳು. =-