ಪುಟ:ದಕ್ಷಕನ್ಯಾ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ತೃತೀಯಪರಿಚ್ಛೇದ. Wಆಆಆಆಟ (ಅಭಯಪ್ರದಾನ.) ಜಿಹೇ ಇನಿದೆ )ಯೆ ! ನಿನ್ನ ಸಾಮರ್ಥ್ಯವೇ ಸಾಮರ್ಥ್ಯ ! ನೀ ಓsಅತಿ ನೆಂದೆಂದೂ, ಯಾರಿಗಾದರೂ ಅವಶಳಾಗಿಯೂ, 'ಅಬದ್ಧಳಾಗಿಯೂ ಇದ್ದು, ನಿನ್ನೀ ಮೋಹಬಲೆ " ಯಲ್ಲಿ ಎಂದಾದರೂ, ಹೇಗಾದರೂ, ಪ್ರಾಣಿಗಳನ್ನು ವಶಪಡಿಸಿಕೊಳ್ಳದಿರಲಾರೆಯಲ್ಲವೆ ! ನೀನು ಯಾರನ್ನೂ ಗಣಿಸಲೊಲ್ಲೆ ; ಮತ್ತು ಕಾಲಾಕಾಲಗಳನ್ನಾಗಲೀ, ಸ್ಟಾನಪ್ರಸ್ಥಾನಗಳನ್ನಾಗಲೀ ನೀನು ಗಣಿಸಲಾರೆ. ಎಲ್ಲಿ, ನೀನು ಯಾರನ್ನು, ಯಾವವೇಳೆಯಲ್ಲಿ ಗುರಿಕಟ್ಟಿನೋ ಡುವೆಯೋ, ಅಲ್ಲಿಯೇ ಅವರು, ಮತ್ತಾವುದನ್ನೂ ನೆನೆಯದೆ ಮೈಮರೆತು ಮಲಗುವಂತೆ ಮಾಡುವೆ. ಹಾಗಿಲ್ಲದಿದ್ದರೆ, ಮಧ್ಯಾಹ್ನದಲ್ಲಿ ಮಲಗಿದ ವಿಂದೆಯು, ರಾತ್ರಿ ಹತ್ತು ಗಂಟೆ ಹೊಡೆದುಹೋಗಿದ್ದರೂ, ಎಚ್ಚರವೇ ಇಲ್ಲದೆ ಜಡಳಾಗಿ ಮಲಗಿರುತ್ತಿದ್ದಳೇನು ? ಚಿಃ, ನೀನೆಷ್ಟರ ಧೂರ್ತಳಾಗಿರುವೆ ! ನಡೆ ದೂರ ; ಬಳಿಸಾರದಿರು, ನಮ್ಮನ್ನೂ ನಿನ್ನ ಬಲವತ್ಪಾಶದಲ್ಲಿ ಬಂಧಿ ತರನ್ನಾಗಿ ಮಾಡಬೇಕೆನ್ನುವೆಯೋ ? ಬೇಡಬೇಡ, ಹಾಗೆ ಯೋಚಿಸಲೇ ಬೇಡ, ಕರ್ತವ್ಯದಲ್ಲಿ ಜಾಗ್ರತರಾಗಿರುವಂತೆ ಮಾತ್ರ-ನಮ್ಮನ್ನು ಉಲ್ಲಾ ಸಗೊಳಿಸುತ್ತಿದ್ದರೆ ಸಾಕು. ಮುಳಿಯಬೇಡಿರಿ ; ಪ್ರಿಯಪಾರಕರೇ ! ಮುಳಿದು ಕೂಗಾಡಬೇ ಡಿರಿ, ನಿಮ್ಮ ಹರಕೆಯೇ ಕೈಕೂಡಿತು ! ಅದೇನೋಡಿರಿ ; ಕೆಟ್ಟ ಗೂಬೆ ಯೊಂದು ಮನೆಯಮೇಲೆಯೇ ಕುಳಿತು, ಕಕ್ಕಸದನಿಯಿಂದ ಕೂಗುತ್ತಿದೆ. ס