ಪುಟ:ದಕ್ಷಕನ್ಯಾ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸ ತಿ ಹಿ ತೃ ಷಿ ಣಿ ಇನ್ನಿ ಹರ ಕೂಗನ್ನು ಕೇಳಿ, ಹನ್ನೆರಡುವರ್ಷದ ಬಾಲಿಕೆಯಾದ ನಮ್ಮ ಎಂದೆಯು ಹೇಗೆ ಸಹಿಸಬೇಕೋ-ನೀವೇ ಊಹಿಸಿ ಹೇಳಿರಿ? - ಚಿಃ ! ಕೆಟ್ಟ ಗೂಬೆ ! ನೀನಿಲ್ಲಿಗೇಕೆ ಬಂದೆ ? ಹೀಗೇಕೆಕೂಗಿದೆ ? ಸುಖನಿದ್ರೆಯಲ್ಲೊರಗಿದ್ದ ಸುಕುಮಾರಿಯ ವಿರತಿಸುಖಕ್ಕೆ, ನೀನೇಕೆ, ವಿಘ್ನ ಕಾರಿಯಾಗಿ ಪರಿಣಮಿಸಿದೆ ? ಸರಿಸರಿ ! ನಿನ್ನೀಕಠಿಣತೆಗಾಗಿಯೇ ನಿನ್ನನ್ನು ಕೇಡಿಗನೆಂದೆಲ್ಲರೂ ಕಂಡಕಂಡಲ್ಲಿ ಬಡಿದಟ್ಟುತ್ತಿರುವರು. ಸಾಕುಸಾಕು, ತೊಲಗತ್ಯ ; ಕೂಗದಿರು, ನಿಂದೆಯನ್ನು ಸಂತಯಿಸುವೆವು. ಪಾಪ ! ವಿಂದೆಯು ಗೂಬೆಯ ಕೂಗಿಗೆ ದಿಗಿಲುಬಿದ್ದೆದ್ದು ಕುಳಿತು, ಸುತ್ತಲೂ ನೋಡಿದಳು. ನಟ್ಟಿರುಳು ; ಕಗ್ಗತ್ತಲೆ , ಸಾಲದುದಕ್ಕೆ ಸುತ್ತ ಮುತ್ತಲೂ ಸಂಚರಿಸುವ ಕಾಡುಮೃಗಗಳ ಕೂಗಾಟ, ಇಂತಿವುಗಳಿಂದ ಅವಳ ಮನಸ್ಸು ಹೊಡೆದುಕೊಳ್ಳತೊಡಗಿತು ; ತಲೆಯ ಮಿದುಳೇ ಹಾರಿ ಹೋದಂತಾಯಿತು. ಸಂಕಟವನ್ನು ತಡೆಯಲಾರದೆ ಅಳುತಳು-ಗಟ್ಟಿ ಯಾಗಿ ಕೂಗಿ ಮೊರೆಯಿಟ್ಟಳು-” ಅಯ್ಯೋ ದೇವರೇ ! ನಿನಗೆ ಕಣ್ಣ ಇವೇ ? ಕೂಗಿದರೂ ಕೇಳುವುದಿಲ್ಲವೇ ? ಕರುಣವೆಳ್ಳಷ್ಟೂ ಬೇಡವೇ ? ಸಾಕು, ನನಗೀಸುಖವು ಇಷ್ಟಕ್ಕೇ ಸಾಕು ! ಇನ್ನಾದರೂ ಪ್ರಸನ್ನ ನಾಗ ಲೊಲ್ಲೆಯಾ ?? ಎಂದೆಯ ಆರ್ತಾಲಾಪಕ್ಕೆ ಉತ್ತರವಾಗಿ ಕಿಟಕಿಯಿಂದ ಪ್ರಸನ್ನ ನಾಗಿರುವನು ; ಶಾಂತಳಾಗಿರು.' ಎಂಬ ಸ್ವರವು ಹೊರಟಿತು. ನಿಂದೆಯ ಬಾಯಲ್ಲಿ ಮಾತು ಹೊರಡಲಿಲ್ಲ. ಮೌನದಿಂದೆದ್ದು ಬಂದು ಬಾಗಿಲಬಳಿಯಲ್ಲಿ ನಿಂತಳು, ಮತ್ತೆ, ಅದೇಸ್ವರದಿಂದೆಯೇ, 'ವಿಂದಾ! ಬಾಗಿಲನ್ನು ತೆಗೆ.' ಎಂದು ಯಾರೋ ಹೊರಗೆ ಕೂಗಿದರು. ಕೂಗಿದೆ ಡನೆಯೇ ಬೀಗವೂ ತೆಗೆಯಲ್ಪಟ್ಟಂತಾಯಿತು. ಎಂದೆಯು ಸಂಶಯದಿಂದ ಮೆಲ್ಲನೆ ಕೇಳಿದಳು-' ಕೂಗುವವರಾರು ?? ಉತ್ತರ-ನಾನೊಬ್ಬ ರಾಜಕರ್ಮಚಾರಿ.