ಪುಟ:ದಕ್ಷಕನ್ಯಾ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೧೫ ಎಂದೆ-ಹಾಗೆಂದರೆ ಸಾಲದು. ಸರಿಯಾದ ಹೆಸರುಬೇಕು. ಉತ್ತರ-ನಿನ್ನೆ ಯ ರಾತ್ರಿಯಲ್ಲಿ ಪತ್ರವನ್ನು ತಂದಿದ್ದವನೇ ರಾಜಕಮ್ಮ ಚಾರಿ, 'ಇನ್ನು ವಿಳಂಬಿಸದೆ, ನನ್ನಲ್ಲಿ ಸಂಶಯಪಡದೆ ಬಾಗಿಲನ್ನು ತೆಗೆ, ನನ್ನಿಂದ ನಿನಗಾವ ಅರಿಷ್ಟವೂ ಉಂಟಾಗುವುದಿಲ್ಲ. - ವಿಂದೆಯು ಪತ್ರವನ್ನು ನೆನೆದು, ಬಿಡುಗಡೆಗೆ ಸಹಾಯವಾ ಝಿಂಬ ಧೈಯ್ಯದಿಂದ ಬಾಗಿಲನ್ನು ತೆರೆದಳು. ಒಡನೆಯೇ ಕಳೆದ ರಾತ್ರಿ ಯಲ್ಲಿ ನರಸಿಂಗನ ವೇಷಧರನಾಗಿ ದಾರಿಗನಂತೆ ಬಂದಿದ್ದವನೇ ಇಂದು, ವೀರಭ೬ನಂತೆ ಎಡಗೈಯಲ್ಲಿ ಪಿಸ್ತೂಲನ್ನೂ, ಬಲಗೈಯಲ್ಲಿ ಲಾಂದ್ರವನ್ನೂ, ಬಗಲೊಳಗೆ ಗಂಟೊಂದನ್ನೂ ತಂದಿದ್ದ ಕರ್ಮಚಾರಿಯು ಒಳಹೊಕ್ಕು, ಬಾಗಿಲನ್ನು ಮುಚ್ಚಿ, ಅಗಣಿಯನ್ನು ಬಲವಾಗಿ ತಗಲಿಸಿದನು ; ಕಿಟಿಕಿಗೆ ಕೆಳಗೆ ಸೀಳಿಬಿದ್ದಿದ್ದ ಹಲಗೆಗಳನ್ನು ಮತ್ತೆ ಮುಚ್ಚಿ, ಮೊಳೆಗಳನ್ನು ಹೊಡೆದು ಹೊರಗೆ ತೆಗೆಯಲಾಗದಂತೆ ಬಲಪಡಿಸಿದನು, ಆ ಬಳಿಕ ಬಗ ಲೊಳಗಿದ್ದ ಗಂಟನ್ನು ಕೆಳಗಿಟ್ಟು, ಲಾಂದ್ರವನ್ನೆತ್ತಿ ನಿಂದೆಯ ಮುಖಕ್ಕೆ ತೋರಿಸಿ, ತನ್ನ ಕಾಕ್ಯಗಳಿಗೆ ಶಂಕೆಗೊಂಡು ನೋಡುತ್ತಿದ್ದವಳ ಮನೋ ಭಾವವನ್ನು ತಿಳಿದು ತಲೆದೂಗಿ ನಸುನಗುತ್ತ, ಪಿಸ್ತೂಲನ್ನು ಮುಂದಕ್ಕೆ ನೀಡಿ ಹೇಳಿದನು-' ವಿಂದಾ ! ಇದೇ ನೋಡು, ನಿನ್ನ ಆತ್ಮ ರಕ್ಷಣಾರ್ಧ ವಾಗಿ ನಿನ್ನಲ್ಲಿ ಭದ್ರವಾಗಿಡಬೇಕಾದ ಸಾಧನವು, ಇಂದಿನ ನನ್ನ ಕೆಲಸ ಗಳಿಂದ ನೀನು ಶಂಕೆಗೊಂಡಂತೆ ಕಾಣುವುದು ? ನನ್ನ ವಿಷಯದಲ್ಲಿ ನೀನು ಸಂಶಯಪಡಲಾಗದು. ಇನ್ನು ಇದನ್ನು ನಿನ್ನಲ್ಲಿ ಗೋಪ್ಯವಾಗಿಟ್ಟು ಕೋ. ಇದರಿಂದ ನಿನಗೆ ಇತರರ ಭಯವೇ ಇಲ್ಲವಾಗುತ್ತದೆ.' ಎಂದು ಹೇಳಿ ಅದನ್ನು ಪ್ರಯೋಗಿಸುವ ವಿಧಾನವನ್ನೂ ತಿಳಿಯಪಡಿಸಿದನು. ಎಂದೆ ಕರ್ಮಚಾರಿಯ ಮುಖವನ್ನು ನೋಡಿ, ಯಾರನ್ನೋ ಜ್ಞಾಪಿಸಿ ಕೊಂಡು ಆತುರದಿಂದ ಹೇಳಿದಳು-' ಮೊದಲು, ಸ್ಪಷ್ಟ ಪರಿಚಯ ವಾಗಬೇಕು ; ಉಳಿದ ಆಯುಧಗಳಮಾತು ಆಬಳಿಕಾಗಬಹುದು.'