ಪುಟ:ದಕ್ಷಕನ್ಯಾ .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುತೂಹಲವು ಬಲವಾಗುತ್ತಿರುವುದು. ಆದರೆ, ಕರ್ಣಾಟಕ ನಂದಿಸಿಯ ವಿಚಾರವಾಗಿ, ತಮ್ಮೆಲ್ಲರ ಅಭಿಪ್ರಾಯವೆಂತಿರುವುದೆಂಬುದು ಸ್ಪಷ್ಟಪಡು ವವರೆಗೂ, ಅದು ಸಾಧ್ಯವಾಗುವಂತಿಲ್ಲ, ಇದಕ್ಕಾಗಿ ತಾವೆಲ್ಲರೂ ಉದಾ ರಮನಸ್ಸಿನಿಂದ ತಮ್ಮ ನಿಜವಾದ ಅಭಿಪ್ರಾಯವನ್ನು ಲಿಖಿತಮೂಲಕ ವಾಗಿ ಕಳುಹಲು, ಸಂಪ್ರಾರ್ಧಿತರಾಗಿಯೇ ಇರುವಿರಿ, ಇನ್ನೇನು ಹೇಳುವ? ದೇಶಭಾಷಾಭಿಮಾನದಿಂದಲೂ, ಮಾತೃ ಪ್ರೇರಣೆಯಿಂದಲೂ ತಾವು, ಇಂದಿನವರೆಗೂ, ಹಿತೈಷಿಣಿಯನ್ನು ಪ್ರೋತ್ಸಾಹಿಸಿದಂತೆ ಮುಂದೆಯ, ಎಂದೆಂದಿಗೂ ಇವಳನ್ನು ಅನಾದರಿಸದೆ, ಶುದ್ಧಾಂತಃಕರಣದಿಂದ-ಪ್ರೋತ್ಸಾ ಹಿಸುತ್ತಿರುವಿರೆಂದೂ, ಹಿತೈಷಣಿಯ ವ್ರತಸಿದ್ಧಿಗೆ ನೀವೇ ಸಹಕಾರಿ ಗಳಾಗಿದ್ದು, ಕಾಲೋಚಿತವಾದ ಪಿತಸೂಚನೆಗಳಿಂದ ಎಚ್ಚರಿಸುವ ಸುಯ್ಯ ಇುಗಳಾಗಿರುವರೆಂದೂ ನಂಬಿರುವೆವು. ಈ ನಮ್ಮ ನಂಬಿಕೆಗೆ ಭಂಗತಾರದೆ, ಬಳಿಗೆ ಒಂದ ದಕ್ಷ ಕನ್ಯ ಯನ್ನು ವಾತ್ಸಲ್ಯದಿಂದೆತ್ತಿಯಾಡಿಸಿ, ಮುಂದೆ, ತಿಂಗಳೆರಡರಲ್ಲಿ ನಿಮ್ಮೆಡೆಗೆ ಒರಲಿಕ್ಕಿರುವ ಮಾತೃನಂದಿನಿಯ ಮತ್ತು ರಮಾನಂದ-ವಿಕ್ರಮರ ಅಭ್ಯು ದಯಕ್ಕಾಗಿ ಈಗಳಿಂದಲೇ ಸ್ವಸ್ತಿವಾಚನದಿಂದ ನರವೇರಿಸುತ್ತಿರಬೇಕೆಂದೂ ಮನವಿಮಾಡಿರುವೆವು, ಮಾಡಿರುವ ಮನವಿಯನ್ನು ಮಾನ್ಯ ಮಾಡುವುದೂ, ಬಿಡುವದೂ ನಿಮ್ಮ ಮೇಲೆ ಬಿದ್ದ ಹೊರೆಯಾಗಿದೆ. ಇಷ್ಟಲ್ಲದೆ ಸದ್ಯದಲ್ಲಿ ಮತ್ತೇನನ್ನೂ ಹೇಳಲಾರೆವು | ನಂಜನಗೂಡು, ಇತಿ ಕಾರ್ಯದರ್ಶಿ, 14-10-1915. J ಸತೀಹಿತೆ ೩ಣೀ ಮಾತೃ ಮಂದಿರ.