ಪುಟ:ದಕ್ಷಕನ್ಯಾ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭ ದ ಕ ಕ ನ್ಯಾ ಹೇಳಿಕೊಳ್ಳಲು ಕಾರಣವೇನು ? ಪತ್ರವನ್ನು ಬರೆದವರಾರು ? ಇವನ್ನು ನಾನು ಕೇಳಬಹುದೇ ?' ಧರ್ಮಪಾಲ-ಹೇಗೆ-ಏನು-ಯಾರು-ಎಂದರೆ ಹೇಳುವುದೇನು ? ಪ್ರತಿ ಜ್ಞಾಪರಿಪಾಲನೆಗಾಗಿ ನಾನೇ, ಅಲ್ಲಲ್ಲಿ ಗೂಢಚಾರರನ್ನಿಟ್ಟು ವರ್ತ ಮಾನವನ್ನು ತರಿಸುತ್ತಿರುವುದರಿಂದ ತಿಳಿಯಿತು. ಕಾರ ಸಾಧನೆ ಗಾಗಿ ಹೊರಟವನಿಗೆ ವಿಷಹರಪುರಕ್ಕೆ ಹೋಗುತ್ತಿದ್ದ ನರಸಿಂಗ ನೆಂಬವನು ಸಿಕ್ಕಿ, ಅವನನ್ನು ಬೆದರಿಸಿ ಇಲ್ಲಿಯ ಸಂಗತಿಗಳನ್ನು ಆದ್ಯಂತವಾಗಿ ತಿಳಿದು, ಅವನಂತೆಯೇ ವೇಷಹಾಕಿಕೊಂಡು ಬಂದು ಇವರನ್ನು ಮೋಸಪಡಿಸಿ, ನಿನ್ನನ್ನು ಕಂಡೆನು. ನಾನು ಬಂದಿರುವುದನ್ನು ನಿನಗೆ ತಿಳಿಸಿ, ಧೈಯ್ಯದಿಂದಿರ ಹೇಳಬೇಕೆಂದು ನಾನೇ ಪತ್ರವನ್ನು ಬರೆದಿಟ್ಟು ಹೋದೆನು, ಮತ್ತೇನು ? ನಿನಗೆ ಮೊದಲೇ ಇಲ್ಲಿ ಸೆರೆಯಾಗಿ ಬಿದ್ದಿದ್ದ ನಿಮ್ಮ ತಂದೆಮನೆಯ ಪಹರೆಯವರನ್ನೂ ಈ ರಾತ್ರಿಯೇ ಬಿಡಿಸಿ ಬಂದಿರುವೆನು.' ಎಂದೆ-ಆತುರದಿಂದ-“ ನನಗೆ ಬಿಡುಗಡೆ ಯಾವಾಗ ? ಧರ್ಮ-ಈಗಲೇ ಆದರೂ ಆಗಬಹುದು, ಆದರೆ, ನಿನ್ನ ವಿದ್ಯಾ-ಬದ್ದಿ... ಮನಸ್ಸೆ, ರೈಗಳಿಗೆ ಇದು ಕಳ್ಳತನವಾಗಿ ಪರಿಣಮಿಸುವುದರಿಂದ ಸರಿಯಾಗಿ ಕಾಣುತ್ತಿಲ್ಲ, ನಿನ್ನ ಕರಕೌಶಲ, ವಾಕ್ಷೌರುಷಗಳಿ೦ - ದೆಯೇ ನೀನಿವರನ್ನು ಜಯಿಸಿ ಬರಬೇಕೆಂಬುದು ನನ್ನ ಸಂಕಲ್ಪ ! ವಿಂದೆ ಹೇಗೆ ? ಧರ್ಮಪಾಲ-ಇದೇ ಇಲ್ಲಿರುವ ಗಂಟನ್ನು ಬಿಚ್ಚಿ ನೋಡಿದರೆ, ಎಲ್ಲವೂ ಗೊತ್ತಾಗುವುದು, ಅದರಂತೆ ನಡೆಯುವುದು ನಿನ್ನ ಕೆಲಸವಾಗಿ ರುವುದು, ನಿನ್ನ ಬೆಂಬಲಕ್ಕೆ ನಾನಿದ್ದೇ ಇರುವೆನು, ಅಧೈರ್ ದಿಂದ ದುಡುಕಿ, ಕೆಲಸವನ್ನು ಕೆಡಿಸಿಕೊಳ್ಳುವುದು ಸರಿಯಲ್ಲ. ಎಂದೆ ನಿಮ್ಮ ಸಹಾಯವಿದ್ದರೆ ಭಯವೇನು ?