ಪುಟ:ದಕ್ಷಕನ್ಯಾ .djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಸ ತಿ ಹಿ ತ ಷಿ ಣಿ ಧರ್ಮಪಾಲ-ಮತ್ತೊಂದು ವಿಚಾರ-ಇಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕ, ನೀನು ನನ್ನ ಮನೆಯಲ್ಲಿಯೇ ಕೆಲವು ದಿನಗಳವರೆಗೆ, ಗೋಪ್ಯವಾಗಿರಬೇಕಾದೀತು ? ಎಂದೆ-ಹೇಳಿದಂತೆ ಕೇಳುವೆನು. ಆದರೆ, ಇಲ್ಲಿ ಒಂದು ಗಳಿಗೆಯಾದರೂ ಇರಲಾರೆನು. ಧರ್ಮಪಾಲ ಇರಲಿ ; ಚಿಂತಿಸಬಾರದು, ನಾನಿನ್ನು ಹೋಗುವೆನು. ನೀನು ನಾಳೆಯೇ ತಪ್ಪದೆ ಗೊತ್ತು ಮಾಡಿರುವ ಸ್ಥಳಕ್ಕೆ ಬಂದರೆ, ಕಾದಿದ್ದು ಕರೆದೊಯ್ಯುವೆನು, ಆ ವರೆಗೂ ಈ ಪಿಸ್ತೂಲನ್ನು ನಿನ್ನ ಉಡಿಯ ಮರೆಯಲ್ಲಿ ಬಡ್ತಿಡಬೇಕು. ಎಂದೆ-ವ್ಯಾಕುಲದಿಂದ-' ಈ ರಾತ್ರಿಯೆಲ್ಲಾ ಇಲ್ಲಿ ಹೇಗಿರಲಿ ?” ಧರ್ಮಪಾಲ-ಹಾಗಿರದಿದ್ದರೆ ಯತ್ನ ವಿಲ್ಲ, ಆದರೂ, ನಾನಿಲ್ಲಿಯೇ ಕಾದಿ ರುವೆನೆಂದು ತಿಳಿದು ಸಮಾಧಾನದಿಂದಿರು. ಅದಿರಲಿ ; ನೀನು ಶ್ರೀದತ್ತ ಕುಮಾರನನ್ನು ಮರೆತಿರುವೆಯಾ ? ಎಂದೆ-ವಿಸ್ಟಾರಿತನೇತ್ರಳಾಗಿ ನೋಡುತ್ತ-' ಇಲ್ಲ, ತಾತನ ಇದಿರಿಗೆ, - ಆತನು ನನ್ನ ವಿದ್ಯಾ ವ್ಯಾಸಂಗವನ್ನು ಪರೀಕ್ಷಿಸಿ, ಬಹುಮಾನಿಸಿದು ದನ್ನು ಎಂದಿಗೂ ಮರೆಯುವಂತಿಲ್ಲ, ಏಕೆ ? ಆತನೇನಾಗಬೇಕು ?' ಧರ್ಮಪಾಲ-ನಗುತ್ತ-'ಮತ್ತೇನೂ ಬೇಕಾಗಿಲ್ಲ, ನಿನಗಾ ತನು ಚಿರಸ್ಕರ ಣೀಯನಾಗಿದ್ದರೆ, ಈಗ ನಿನ್ನಲ್ಲಿ ಮಾತನಾಡುವವನು ಅವನೆಂದೇ ತಿಳಿದು ಭರವಸೆಯನ್ನಿಡು ; ನನಗಿನ್ನು ಸಮ್ಮತಿಯನ್ನು ಕೊಡು ; ಈ ರಾತ್ರಿಯನ್ನು ಸಾರಾಸಾರ ವಿಚಾರದಲ್ಲಿ ಕಳೆಯುತ್ತಿರು.' ವಿಂದೆಯು ವಿಸ್ಮಯಾನಂದ ಕೌತುಕಗಳಿಂದ ನೋಡುತ್ತ ನಿಂತಳು, ಧರ್ಮಪಾಲನು ಮತ್ತೊಮ್ಮೆ ಎಂದೆಗೆ ಅಭಯವಿತ್ತು, ಬಾಗಿ ಲನ್ನು ತೆರೆದು ಹೊರಗೆ ಬಂದು ಮತ್ತೆ ಬೀಗಹಾಕಿ, ಆ ನಟ್ಟಿರುಳಲ್ಲಿ ಕಣ್ಮ ರೆಯಾದನು. 0.