ಪುಟ:ದಕ್ಷಕನ್ಯಾ .djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಕ ೩ ಹಿತ ಷಿ ಣಿ ನೋಡಿದನು. ಎಂದೆಯ ಶಬ್ದವಿರಲಿಲ್ಲ ; ಮುಂದೆಬಂದು ಮತ್ತೆ ಚೆನ್ನಾಗಿ ನೋಡಿದನು, ಮಂಚದಮೇಲೆ ಅವಳ ಸೀರೆ ಕುಪ್ಪಸಗಳು ಬಿದ್ದಿದ್ದುವು ; ಅವಳು ಅಲ್ಲೆಲ್ಲಿಯೂ ಕಾಣಲಿಲ್ಲ. ಬಲವಂತನು ದಿಗಿಲುಬಿದ್ದು, ಅಡ್ಡ ಗೋಡೆ-ಬಚ್ಚಲು-ಹಿಂದಿನಕೋಣೆ ಮೊದಲಾದೆಡೆಯಲ್ಲಿಯೂ ನೋಡಿದನು. ಅಲ್ಲಿಯ ನಿಂದೆಯನ್ನು ಅವನು ಕಾಣಲಿಲ್ಲ. " ಮನೆಗೆ ಬೀಗವು ಹಾಕಿದಂತೆಯೇ ಇತ್ತು, ಆದರೂ, ಅವಳು ಯಾವಮಾಯೆಯಿಂದ-ಎಲ್ಲಿಗೆ ಹೋದಳು ? ಹೋಗಲು ದಾರಿಯಲ್ಲಿತ್ತು ? ಕರೆದೊಯ್ದವರಾರು ?' ಹೀಗೆ ಯೋಚಿಸುತ್ತ ಬಾಗಿಲಬಳಿಗೆ ಬಂದನು ; ತಲೆಯೆತ್ತಿ ಬೀದಿಯ ಕಡೆಗೆ ನೋಡಿದನು. ಬಾಗಿಲಿಗೆ ಅಡ್ಡವಾಗಿ ನಿಂತು, ಕರಿಯ ತುಪಟದ ಉಡುಗೆ ಯನ್ನುಟ್ಟು, ತಲೆಯಿಂದ ಕಾಲಿನವರೆಗೂ ಇಳಿಬಿದ್ದಿರುವ ಕಂಬಳಿಯಿಂದ ವೇಷವನ್ನು ಮರೆಯಿಸಿ, ಕೈಯಲ್ಲಿ ಸಣ್ಣ ತುಬಾಕಿ (Pistol) ಯೊಂದ ನ್ನು ಹಿಡಿದು, ಬಿರಬಿರನೆ ನೋಡುತ್ತಿದ್ದ ಹನ್ನೆರಡು ವರ್ಷದ ಹುಡುಗಿಯೊ ಬೃಳನ್ನು ಕಂಡನು ; ಭಯಭ್ರಾಂತನಾಗಿ ನಿಂತಲ್ಲಿಯೇ, ಉಸಿರೆತ್ತದೆ ಕುಳಿ ತುಬಿಟ್ಟನು. ಹುಡುಗಿ-ಪರಿಹಾಸದಿಂದ-' ಮೂರ್ಖ ! ಇನ್ನೂ ನಿನಗೆ ಕಾಲಬಂದಿಲ್ಲ. ನಿನ್ನ ಅಕಾರದಫಲವನ್ನು ನೀನು ಅನುಭವಿಸಬೇಕು; ಏಳು, ಏಳು.' ಬಲವಂತ -ಧಿಗ್ಗನೆದ್ದು ನಿಂತು-' ಏನು ಏನು ! ಅಕಾರ್!! ಫಲಾನುಭವ !!! ಯಾರಿಗೆ ? ನೀನಾರು ?' ಹುಡುಗಿ-ಮತ್ತಾರಿಗೂ ಅಲ್ಲ ; ನಿನಗೇ, ನಾನು ನಿನ್ನ ಭಾಗದ ಮೃತ್ಯುವೇ! ಬಲವಂತ-ಏನು ? ಮೃತ್ಯುವಾಗಿದ್ದರೆ, ಹಾಗಿರು, ಎಂದೆಯೆಲ್ಲಿ ? ಮೊದ ಲುಹೇಳು. ನೀನಿಲ್ಲಿಗೇಕೆ ಬಂದೆ ? ನಿನ್ನನ್ನು ಕರೆದವರಾರು ? ಹುಡುಗಿ- ನಾನು ಅವಳ ಉಪಾಸ್ಯದೇವತೆ, ನನ್ನನ್ನು ಅವಳೇ ಕರೆದಳು. ಅವಳನ್ನು ಬಿಡಿಸುವುದಕ್ಕೆಂದೇ ನಾನಿಲ್ಲಿಗೆ ಬಂದುದು, ಇನ್ನೂ ತಿಳಿಯಲಿಲ್ಲವೋ ? ಬಲವಂತ-ಬಿಡಿಸಬಂದೆಯಾ ! ಹೇಗೆ ? ಯಾರನ್ನು ?