ಪುಟ:ದಕ್ಷಕನ್ಯಾ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೧೨೧ ಹುಡುಗಿ-ಅಹುದು, ಅದಕ್ಕೆಂದೇ ಬಂದೆನು, ಈ ತುಬಾಕಿ ಮದ್ದಿನಿಂ ದಲೇ ಆಗಬೇಕು, ಇದರಿಂದಲೇ ನಿಂದೆಗೆ ವಿಮೋಚನೆ ! ಬಲವಂತ-ಹೋ ! ತಾಳು ; ಹಾರಾಡಬೇಡ, ಮೊದಲು ನೀನೇಕೆ ಬಂದೆ, ನಿಜವನ್ನು ಹೇಳು ? ಹುಡುಗಿ-ಹೇಳದಿದ್ದರೆ ನೀನೇನು ಮಾಡಬಲ್ಲೆ ? ಬಲವಂತ-ಹಿಡಿದು ಕಟ್ಟಿ ಹಾಕುವೆನು. ಹುಡುಗಿ-ಹಾಗಿದ್ದರೆ ಸಾಹಸಿಯೇ ಸರಿ. ಆದರೂ ಭಯವಿಲ್ಲ ; ಕೇಳು, ಹೇಳುವೆನು, ವಿಂದೆಯು ಒಬ್ಬ ಪ್ರಬಲಪುರುಷನ ಆಶ್ರಯವನ್ನು ಸೇರಿದಳು, ನೀನಿನ್ನು ಅವಳನ್ನು ಕಾಣಲಾರೆ. ನಿನ್ನ ಆಶೆಯನ್ನು ಬಿಡು, ನನ್ನನ್ನು ಕಟ್ಟಿ ಹಾಕುವುದಕ್ಕೆ ನೀನೊಬ್ಬನಲ್ಲ ; ನಿನ್ನ ಗುಂ ಸಿನವರೆಲ್ಲರೂ ಒಟ್ಟಾಗಿ ಬಂದರೂ ಸಾಗುವಂತಿಲ್ಲ. ಸುಮ್ಮನೇಕೆ ಬಳಲುವೆ ? ಬಲವಂತನು ಉತ್ತರವನ್ನು ಕೊಡದೆ, ಪಿಸ್ತೂಲನ್ನು ಕಸಿದು ಕೊಳ್ಳಲು ಕೈಯೆತ್ತಿದನು. ಆದರೆ, ಹುಡುಗಿಯು ಚಿಗರೆಯಂತೆ ಒಂದೇ ಲಂಗನೆಯಿಂದ ಹಿಂದಕ್ಕೆ ಸರಿದುಹೋಗಿ, ಬಾಗಿಲನ್ನೆಳೆದು ಚಿಲಿಕೆಯನ್ನು ತಗುಲಿಸಿ ಬೀಗವನ್ನೂ ಹಾಕಿದಳು. ಬಲವಂತನು ಗಟ್ಟಿಯಾಗಿ ಕೂಗಲಾ ರಂಭಿಸಿದನು. ಹಾಗೂ ಹುಡುಗಿಗೆ ದಯೆಯುಂಟಾಗಲಿಲ್ಲ. ಆಗ್ರಹಆಟೋಪಗಳೇ ಹೆಚ್ಚಿದುವು. ಅವಳು ಕಿಟಿಕಿಯಬಳಿಗೆ ಬಂದು- Pistol) ತುಬಾಕಿಯನ್ನು ತೋರಿಸಿ-' ಹೇಡಿ, ಕಳ್ಳ ; ಕೊಲೆಗೇಡಿ ನಿನ್ನನ್ನು ಈಗಲೇ ಈ ಕೈಕೋವಿಯ ಬೆಂಕಿಯಿಂದಲೇ ಸುಟ್ಟು ಹಾಕುತ್ತಿದ್ದೆನು. ಆದರೆ, ನಿನಗೆ ಈ ಶಿಕ್ಷೆಯು ಸರಿಯಿಲ್ಲವೆಂದೂ, ರಾಜಾಗ್ರಹದ ಕಠಿಣ ಶಿಕ್ಷೆಯಾಗತಕ್ಕುದಿದೆಯೆಂದೂ ಬಿಟ್ಟಿರುತ್ತೇನೆ. ನಾನೇ ಎಂದೆ ! ನೀನು ನಿನ್ನನ್ನೇ ವಂಚಕನೆಂದು ತಿಳಿದು ಹಿಗ್ಗುತ್ತಿದ್ದೆಯಲ್ಲವೆ ? ನಿನ್ನ ನ್ಯೂ ವಂಚಿ ಸಿದ ದೈವಕ್ಕೆ ಈಗೇನು ಹೇಳುವಿಯೋ ಹೇಳಿ, ಬಿದ್ದು ಒದ್ದಾಡುತ್ತಿರು ; ಮುಖ್ಯಿಗೆ ಮುಯ್ಯ ತೀರಿಸಿರುವೆನು.' ಎಂದು ಹೇಳಿ ನಿಲ್ಲದೆ ಮನೆಯ ಹಿಂಗಡೆಗೆ ತಿರುಗಿ ಹೊರಟುಹೋದಳು.