ಪುಟ:ದಕ್ಷಕನ್ಯಾ .djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಸJ ಹಿತ್ಯ ಷಿ ಣಿ ಸುಹೃದರೇ ! ಹನ್ನೆರಡು ವರ್ಷದ ಬಾಲೆಯಿಂದ ಇಷ್ಟು ಸಾಹಸಕಾಧ್ರಗಳಾಗು ವುದು ಅಸಂಗತವೆಂದೂ, ಅವಳ ಬಾಯಿಂದ ಇಷ್ಟು ಭಾವಗರ್ಭಿತವಾದ ವಾಕ್ಯಗಳು ಹೊರಡಲಾರವೆಂದೂ ಆಕ್ಷೇಪಿಸುವಿರೇನು ? ಸುಶಿಕ್ಷಣೆ, ಸಾಧನೆ, ಪ್ರತ್ಯಕ್ಷವಿಚಾರವಿಮರ್ಶೆಗಳಿಂದ ಬೆಳೆದ-ಹಾಗೂ ಸುಧಾರಕಾ ಗ್ರಣಿಗಳಾದ ಶ್ರೀಮಂತರ ಮಗಳಾಗಿರುವ ನಿಂದೆಗೆ ಧೈರ, ಸೈಯ್ಯ, ಸಾಹಸಗಳಿಗೇನು ಅಭಾವವು ? ಹಾಗೂ ಇವಳ ಬುದ್ದಿ, ಸ್ವಭಾವಗಳೂ ಸಾಮಾನ್ಯವಾಗಿಲ್ಲ, ಇವಳು ತನ್ನ ಹತ್ತು ಹನ್ನೊಂದನೆಯ ವರ್ಷ ದಲ್ಲಿಯೇ ಈಡಿಗೆ ಮಿಂಚಿದ ಬುದ್ದಿ(Precocious) ವಿಶೇಷದಿಂದ ಪ್ರಧ ಮಪರೀಕ್ಷೆಯಲ್ಲಿ ತೇರಿದ್ದಳು, ಅಲ್ಲಿಂದೀಚೆಗೆ ಇವಳು ಸಂಸ್ಕೃತ, ಕನ್ನಡ, ಆಂಗ್ಲಯ (English) ಭಾಷೆಗಳನ್ನು ಸಮತುಲನವಾಗಿ ಅಭ್ಯಾಸ ಮಾಡುತ್ತಿದ್ದಳು. ಇದಲ್ಲದೆ ತಾಯಿ, ಮತ್ತು ತಾಯಿಯ ತಾಯಿ ಇವರ ಗೃಹಕಾರ ಶಿಕ್ಷಣೆಯೂ, ಕುಶಲಕಲಾಬೋಧನೆಯು, ಕಾಲೋಚಿತವಾದ ಹಿತಸೂಚನೆಯೂ ಇವಳನ್ನು ತಕ್ಕಮಟ್ಟಿಗೂ ಸುಧಾರಣೆಗೆ ತಂದಿದ್ದುವು. ಹೀಗಿದ್ದವಳ ಮನಸ್ಟ್ Pವು ಹೇಗಿರಬೇಕು ? ಹಾಗೂ ಆಕಸ್ಮಿಕ ವಾಗಿ ಕೂರರ ಕೈಗೆ ಸಿಕ್ಕಿ, ಪ್ರಾಣವನ್ನೇ ತೊರೆಯಬೇಕೆಂದು ದೃಢ ಮಾಡಿದ್ದವಳಿಗೆ, ಕುಶಲಮತಿಯಾದ ಶ್ರೀದತ್ತ ಕುಮಾರನೇ ಪ್ರತ್ಯಕ್ಷವಾಗಿ ಬಂದು, ಹೇಳಿ, ತೋರಿಸಿ, ಕಲಿಸಿಕೊಟ್ಟ ಉಪಾಯ (ಸಾಧನ) ಗಳಿ೦ ದಲೂ, ಅಭಯಪ್ರದಾನದಿಂದಲೂ ಇವಳು ಹೀಗೆ ನಿರ್ಭಿತಳಾಗಿ ಹೋರಿ, ಕಷ್ಟದಿಂದ ಪಾರಾದುದರಲ್ಲಿ ಆಶ್ಚರ ವೇನಿದೆ ? ಇಂತಹ ಸಾಹಸಕಾರ ಗಳನ್ನು ಮಾಡಿ-ಮಾಡುತ್ತಿರುವ ಬಾಲೆಯರನ್ನು ಈ ಕಾಲದಲ್ಲಿಯೇ ನಾವು ನೋಡಬಹುದಲ್ಲವೇ ? ಹೇಗೂ, ಇವಳಿಂದ ಮುಯಿ ತೀರಿಸಲ್ಪಟ್ಟಿತೆಂಬ ಸಂತೋಷವುಂಟಾದುದೇ ಸದ್ಯಕ್ಕೆ ಸಾಕಲ್ಲವೇ ?