ಪುಟ:ದಕ್ಷಕನ್ಯಾ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ದ ಕ ಕ ನ್ಯಾ ಮಾಡಿದಳು ; ಮತ್ತಿಬ್ಬರಿಗೆ ತಿರುಗಿದಳು. ಅಷ್ಟರಲ್ಲಿ ಆ ದಾರಿಯ ಲ್ಲಿಯೇ ಬರುತಿದ್ದ ಪೊಲೀಸು ಜವಾನನೊಬ್ಬನು (Police Constable) ಅಲ್ಲಿಗೆ ಬಂದು, ಅವಳನ್ನು ತುಬಾಕಿಯೊಡನೆ ಹಿಡಿ ದೆಳೆದೊಯ್ದನು. ಬಲವಂತ-ಅಯ್ಯೋ ! ಇವಳೇ ಅವಳು !! ಈಗ ಏನುಮಾಡಲಿ ? ಎಲ್ಲಿ ರುವಳು ? ಕ-ನರಸಿಂಗ-ಎಲ್ಲಿಯೋ-ರಾಣೆಯಲ್ಲಿರಬೇಕು, ನಾನೂ ಆ ವಿಚಾರವನ್ನು ನಿಮಗೆ ಹೇಳಬೇಕೆಂದು ಎಲ್ಲೆಲ್ಲಿಯೂ ಹುಡುಕಿ ಹುಡುಕಿ ಸಾಕಾ ದೆನು, ಕಡೆಗೆ, ಸೆರೆಮನೆಯ ಬಳಿಯಲ್ಲಿದ್ದರೂ ಇರಬೇಕೆಂದೆಣಿಸಿ, ಅಲ್ಲಿಗೆ ಹೋಗಿ ನೋಡಿದೆನು ; ನೀವೂ ಅಲ್ಲಿರಲಿಲ್ಲ. ಅಲ್ಲದೆ, ಅಲ್ಲಿ ಯೂ ಮತ್ತೊಂದು ವಿಪರೀತವೇ ಕಂಡುಬಂದಿತು. ಬಲವಂತ-ಮತ್ತೇನು ಬಂತಪ್ಪ, ನನಗೆ ವಿಪತ್ತು ! ಕ-ನರಸಿಂಗ-ನಮ್ಮ ಸೆರೆಯಾಳುಗಳಾಗಿದ್ದ ಆ ಮುಸಲ್ಮಾನರಿಬ್ಬರೂ ಇರಲಿಲ್ಲ, ಅವರಿದ್ದ ಮನೆಯ ಗೋಡೆಗೆ ಕಂಡಿಗಳು ಬಿದ್ದಿವೆ ; ಬಾಗಿಲು ತೆರೆದುಹೋಗಿದೆ. ಅವರು ಎಲ್ಲಿಗೆ ಹೋದರೆಂಬುದೇ ಯಾರಿಗೂ ಗೊತ್ತಾಗದಿದೆ. ಬಲವಂತ..-ತಲೆಯನ್ನು ಹೊಡೆದುಕೊಳ್ಳುತ್ತ ಎಕೃತಸ್ವರದಲ್ಲಿ- ಅಯ್ಯೋ! ಇನ್ನೇನುಗತಿಯಪ್ಪ!! ನನಗೇನೋ ಕೇಡುಗಾಲದಂತಿದೆಯಲ್ಲಾ!!!' ಕ-ನರಸಿಂಗ-ನನಗೂ ಹಾಗೆಯೇ ಭಯವಾಯಿತು. ಚಿಕ್ಕ ಬುದ್ದಿಯವ ರಾದರೂ ಸುಖವಾಗಿರಬೇಕೆಂದು ನೆನೆದು, ಅವರನ್ನು ನೋಡಲು ಗುಡ್ಡಕ್ಕೆ ಹೋಗಿ, ಸಂಜೆಯವರೆಗೂ ಕಾದಿದ್ದೆನು ; ಬರಲಿಲ್ಲ, ಈಗ ಮತ್ತೆ ನೋಡಿದಾಗ ಬಂದಿದ್ದರು. ಅವರಿಗೆ ಇದೆಲ್ಲವನ್ನೂ ಹೇಳಿದೆ. ಅದಕ್ಕವರು, ಮೊದಲು ಇಲ್ಲಿಗೆ ಹೋಗಿ ನೋಡಬೇಕೆಂದೂ, ತಾವೂ ಹಿಂದೆಯೇ ಬರುವೆವೆಂದೂ ಹೇಳಿ, ನನ್ನನ್ನು ಇಲ್ಲಿಗೆ ಕಳಿಸಿದರು.