೧೨L ಸ ತಿ ಹಿ ತ ಷಿ ಣಿ ಬಲವಂತ-ನರಸಿ೦ಗ ! ನಾವು ಮಾಡಬೇಕೆಂಬುದು ಒಂದಾಗಿದ್ದರೆ, ಆಗುವುದೇ ಬೇರೊಂದಾಗಿದೆ ! ಹೀಗಾದರೆ ಇನ್ನು ನಮ್ಮ ಯತ್ನ | ವೇನು ? ಕ-ನರಸಿಂಗ-ಬುದ್ದಿ! ಕಾಲವೇ ನಮಗೆ ಪ್ರತಿಕೂಲವಾದರೆ, ಏನುಮ ಡುವುದು ? ಇವರ ಮಾತು ಮುಗಿಯುವುದಕ್ಕೆ ಮೊದಲೇ, ಹೊರಗೆ ಯಾರೋ ಮಾತನಾಡಿದಂತೆ ಕೇಳಿಸಿತು. ಕಪಟನರಸಿಂಗನು-' ಬುದ್ದಿ ! ಯಾರೋ ಬರುವಂತಿದೆ ; ನೋಡಿ ಬೇಗ ಬರುತ್ತೇನೆ, ಸ್ವಲ್ಪ ಕುಳಿತಿರಿ.' ಎಂದು ಹೇಳಿ ಹೊರಹೊರಟು, ಎಲ್ಲಿಯೋ ಕಣ್ಮರೆಯಾದನು. ಈತನು ಹೊರಟುಹೋದ ಒಂದೆರಡು ನಿಮಿಷದಲ್ಲಿಯೇ ಸೇವಕನಿಂದ ದೀಪವನ್ನು ತೆಗೆಯಿಸಿಕೊಂಡು ಬಂದ ಸುಸಂಧನು ಮುಂದೆ ನಿಂತನು. ಬಲವಂತ-ಮಗನ ಕೈಹಿಡಿದು, ತೊದಲು ನಾಲಿಗೆಯಿಂದ- ಮಗು ! ಇನ್ನು ನಮ್ಮ ಪಾಡೇನು ? ಹೇಳು ; ಇದೇಕೆ, ನೀನೂ ಹೀಗೆ ಕೆರಳಿ ನೋಡುತ್ತೀಯೆ ?' ಸುಪಂಧ-ನಿಟ್ಟುಸಿರಿಟ್ಟು- ಅಪ್ಪ ! ಅದೆಲ್ಲಾ ಆ ಬಳಿಕಾಗಲಿ, ಮೊದಲು ಕಪಟನರಸಿಂಗನೆಲ್ಲಿ ಹೋದನೋ ಹೇಳಿರಿ, ಅವನಿಲ್ಲಿಗೆ ಬಂದುದಾಗಿ ನಮ್ಮ ವರು ಹೇಳಿದರು. ಈಗಲೇ ಅವನನ್ನು ಹಿಡಿಯಬೇಕಾಗಿದೆ.' ಬಲವಂತ-ವಿಸ್ಮಯದಿಂದ-' ಅವನು ಕಪಟಿಯೇ ? ಹೇಗೆ ಹೇಳುವೆ !? ಸುಸಂಧ-ಅದೆಲ್ಲವನ್ನೂ ನಿಧಾನವಾಗಿ ಹೇಳುವೆನು, ಈಗಾತನೆಲ್ಲಿ ? ಬಲವಂತ-ಇದೇ, ಈಗಲೇ ಯಾರೋ ಬರುತ್ತಾರೆ, ನೋಡಿ ಬರುತ್ತೆ ನೆಂದು ಹೇಳಿಹೋದನು ; ಇನ್ನೂ ಬಂದಿಲ್ಲ. ಸುಸಂಧು, ಉಸಿರೆತ್ತದೆ, ಅದೇ ನಿಮಿಷದಲ್ಲಿಯೇ ಸೇವಕನೊ ಡನೆ ಹೊರಟು, ವನಪ್ರದೇಶವನ್ನೆಲ್ಲಾ ಚೆನ್ನಾಗಿ ಹುಡುಕಿಯ ಕಪಟನರ
ಪುಟ:ದಕ್ಷಕನ್ಯಾ .djvu/೧೩೯
ಗೋಚರ