ಪುಟ:ದಕ್ಷಕನ್ಯಾ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೨೭ ಸಿಂಗನನ್ನು ಕಾಣದೆ ನಿರಾಶನಾಗಿ ಬಂದು, ತಂದೆಯ ಬಳಿಯಲ್ಲಿ ನಿಟ್ಟುಸಿರಿ ಡುತ್ತ ಕುಳಿತನು, ಸೇವಕನು ಬಾಗಿಲಬಳಿಯಲ್ಲಿ ಕಾವಲಿಗಾಗಿ ನಿಂತನು. ಬಲವಂತ-ಭಯಕೌತುಕಗಳಿಂದ-' ಅವನು ಸಿಕ್ಕಲಿಲ್ಲವೇ ? ಇಷ್ಟು ಬೇಗ - ಎಲ್ಲಿಗೆ ಹೋಗುವನು ?? ಸುಪಂಧ-ಎಲ್ಲಿ ಹಾಳಾಗಿ ಹೋಗಿರುವನೋ, ಯಾರು ಬಲ್ಲರು ; ಹೇಗೂ ಕೈಕೊಟ್ಟಿರುವನು ! ಬಲವಂತ-ಸಮಾಚಾರವೇನು ? ಹೇಳಬಲ್ಲೆಯಾ? ಸುಸಂಧ-ಅಪ್ಪ ! ಈದಿನ ಬೆಳಗಾಗುವುದಕ್ಕೆ ಮೊದಲೇ ನಾನು, ಗದ್ದೆಗೆ ಹೊರಟುಹೋದೆನಷ್ಟೆ; ಹೋಗಿದ್ದು, ಅಲ್ಲಿಯ ಕೆಲಸಗಳನ್ನು ಮುಗಿ ಯಿಸಿ ಸಾಯಂಕಾಲ ಹಿಂತಿರುಗಿ ಬರುತ್ತಿದ್ದೆನು. ದಾರಿಯಲ್ಲಿಯೇ ಚೌಕದಲ್ಲಿ ನಡೆದ ವಿಚಾರವು ನಮ್ಮವರಿಂದ ತಿಳಿದುಬಂದಿತು. ಆದರೆ, ನಾನು ಅದನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳದೆ, ನಿಮ್ಮನ್ನು ನೋಡಬೇಕೆಂಬ ತವಕದಿಂದ ಗುಡ್ಡಕ್ಕೆ ಬಂದು ನೋಡಿ ದೆನು. ಅಲ್ಲಿ ನೀವು ಇರಲಿಲ್ಲ. ಕಾವಲುಗಾರರನ್ನು ಕೇಳಿದುದಕ್ಕೆ ತಮಗೆ ತಿಳಿಯದೆಂದು ಹೇಳಿದರು. ಅದರಮೇಲೆ ಎಲ್ಲಿಗೋ ಕಾರ ಗೌರವದಿಂದ ಹೋಗಿರಬೇಕೆಂದೂ, ಬೇಗ ಬರಬಹುದೆಂದೂ ಯೋಚಿಸುತ್ತೆ ಅಲ್ಲಿಯೇ ಕುಳಿತು, ನಿಮ್ಮನ್ನೇ ಇದಿರುನೋಡುತ್ತಿ ದೈನು, ಅಷ್ಟರಲ್ಲಿಯೇ ವಿಷ ಹರಪುರದಿಂದ ಬಂದು ಹೇಳಿದ ಈ ಆಳಿನಿಂದ ವಿಚಾರವೆಲ್ಲವೂ ಸ್ಪಷ್ಟವಾಗಿ ತಿಳಿದುಬರಲಾಯಿತು. ಹಾಗೂ ಯೋಚಿಸುತ್ತಿರುವಲ್ಲಿಯೇ ಮುಸಲ್ಮಾನಿ ಸೆರೆಯಾಳುಗಳು ತಪ್ಪಿಸಿಕೊಂಡಿರುವರೆಂದೂ, ನರಸಿಂಗನು ಅವರ ಬಳಿಯಲ್ಲಿ ಮಾತ ನಾಡುತ್ತಿದ್ದುದು, ಒಂದು ಬಗೆಯ ಸಾಂಕೇತಿಕವಾಗಿತ್ತಾದುದ ರಿಂದ ಅವನೇ ಇದಕ್ಕೆ ಕಾರಣನಾಗಿರಬೇಕೆಂದೂ, ಸೆರೆಮನೆಯ ಕಾವಲುಗಾರನು ಬಂದು ಹೇಳಿದನು. ಇನ್ನು ನನಗೆ ಅಲ್ಲಿರಲಾಗ