ಪುಟ:ದಕ್ಷಕನ್ಯಾ .djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೧ ದ ಕ ಕ ನಾ ಬಲವಂತ--ಹಾಗಿದ್ದರೆ ಈಗೇನುಮಾಡುವ ? ಸುಪಂಧ-ಮಾಡುವುದೇನು ? ಮೊದಲು, ನಮ್ಮ ಸ್ಥಾನಗಳನ್ನೂ -ಕಾರಕ ಮಗಳನ್ನೂ ಬದಲಾಯಿಸಿ, ಬೇರೆಕಡೆಯಲ್ಲಿ ಗೊತ್ತು ಮಾಡಿಕೊ ಳ್ಳಬೇಕು, ವಿಷಹರಪುರಕ್ಕೆ ತಕ್ಕಂತೆ ಉತ್ತರವನ್ನು ಬರೆದುಕಳುಹ ಬೇಕು. ಆ ಕಪಟನರಸಿಂಗ-ಪತ್ತೇದಾರನನ್ನು ಸರ್ವಪ್ರಯತ್ನ ದಿಂ ದಲೂ ಕಂಡುಹಿಡಿದು, ಆ ಬಳಿಕ ನಿಂದೆಯನ್ನು ಹುಡುಕಬೇಕು. ಇಷ್ಟು ಮಾಡಿದಲ್ಲದೆ, ನಮ್ಮ ಉದ್ದೇಶವು ಫಲಕಾರಿಯಾಗಲಾ ರದು. - ಇವನ ಮಾತು ಮುಗಿವುದಕ್ಕೆ ಸರಿಯಾಗಿ, ಮನೆಯ ಮೇಗ ಡೆಯಿಂದ ಘನಗಂಭೀರಘರ್ಜನೆಯಲ್ಲಿ ಈ ಬಗೆಯ ವಾಬ್ಯಾಲೆಯು ಹೊರಟಿತು. “ ಇಲ್ಲ ! ನಿಖಾ ದುರುದ್ದೇಶವು ಎಂದಿಗೂ ಫಲಕಾರಿ ಯಲ್ಲ !! ವಂಚಕರ ಹುಬ್ಬನ್ನೇ ನಾಶಮಾಡಲು ಹೊಂಚಿಕೆ ಯಲ್ಲಿರುವ ನೃ ಪಂಚಮುಖನು ಎಲ್ಲೆಲ್ಲಿಯೂ ವ್ಯಾಪಿಸಿರುವನು. ನೀವೆಲ್ಲಿ ಅಡಗಿದರೂ ಪ್ರಾಣದಿಂದ ಉಳಿಯಲಾರಿರಿ ! ಚೆನ್ನಾಗಿ ತಿಳಿದೆಚ್ಚತಿಗೆ !!” ಮೂವರ ಹೃದಯವೂ ಚದರಿಹೋಯಿತು. ನಡುನಡುಗುತ್ತ ಮೂವರೂ ಮನೆಯ ಮುಂಗಡೆಗೆ ಬಂದು, ಮೇಲೆ ನೋಡಿದರು, ಇವರು ನೋಡುತ್ತಿದ್ದಂತೆಯೇ ಮೇಲಿಂದ ಕಪಟನರಸಿಂಗನು ಕೆಳಗೆ ಧುಮ್ಮಿಕ್ಕಿ, ಸೇವಕನನ್ನು ಒಮ್ಮೆ ಒದ್ದು ಸರಿದನು, ಸೇವಕನು ಚೀರುತ್ತ, ಕಪಟನರಸಿಂ ಗನನ್ನು ಹಿಡಿಯಲು ಓಡಿದನು. ಸುಸಂಧ, ಬಲವಂತರೂ-' ಹಿಡಿ ಹಿಡಿ ; ಬಿಡಬೇಡ !” ಎಂದು ಕೂಗುತ್ತ ಓಡಿಬಂದರು. ಆದರೇನು ? ಕುಶಲ ಕಲಾನಿಪುಣನಾದ ನರಸಿಂಗವೇಷಧಾರಿಯು, ಅವರ ಕೈಗೆ ಸಿಕ್ಕುವನೇನು ? ಎಂದಿಗೂ ಇಲ್ಲ ! ಸುಪಂಧನ ತಲೆಕೂದಲನ್ನೆಳೆದು ನಿಲ್ಲಿಸಿ, ಬೆನ್ನಿನ ಮೇಲೆ ಬಲವಾಗಿ ಗುದ್ದಿ, ಮುಂದಕ್ಕೆ ತಳ್ಳಿದನು, ಪಾಪ ! ಸುಪಂಧನು ವಿಕೃತ ಬ ಎ