ಪುಟ:ದಕ್ಷಕನ್ಯಾ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩ ದ ಕ ಕ ನ್ಯಾ ಹೊರಸೂಸುತ್ತಿರುವಂತೆ, ಕಪ್ಪುಹಿಡಿದಿರುವುದು, ಗಂಗೆಯ ಸುನಂದೆಯ ಸುಖ-ದುಃಖಗಳಲ್ಲಿ ಸಮಭಾಗಿನಿಯಾಗಿರುವಳು. ವಿಂದಾವಿರಹ ಸಂತಾ ಪವು ಸುನಂದೆಯನ್ನು ಅಧಿಕವಾಗಿ ಸಂತಪಿಸುತ್ತಿರುವುದು. ಗಂಗೆಯ, ಯಮುನೆಯ ಹತ್ತಿರದಲ್ಲಿದ್ದು ಬಹುವಿಧದಿಂದ ಸಂತಯಿಸುತ್ತಿರುವರು. ಚಂದ್ರಮತಿಗೆ ಸಂತೋಷ-ಸಮಾಧಾನಗಳೆರಡೂ ಸಮವಾಗಿದ್ದರೂ, ಮಗ ನು ಸುಖಸಂಗತಿಗೆ ಪಾತ್ರನಾದನೆಂಬ ಸಮಾಧಾನದಿಂದ ಶಾಂತಿಯನ್ನೇ ಹಿಡಿದಿರುವಳು. ಜಾನ್ಮಾರನು, ಮಗಳ ವಿಷಯಕವಾದ ದುಃಖವು ಅಧಿಕವಾಗಿದ್ದರೂ, ಯಮುನೆ, ದಳವಾಯಿಸಿಂಗ್, ರಾವ್ ಬಹದ್ಭುರ್‌ ಇವರ ಸಮಾಧಾನವಚನಗಳಿಂದ ಅಂತರಂಗ ಕ್ಷೇಶವನ್ನು ಹೊರಪಡಿಸದಿರು ವನು. ಆದರೂ, ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿ ಸುಖ-ಸಂತೋಷ ವೆಂಬುದೇ ಇಲ್ಲದಿದ್ದು, ಈಗ ವಂಶವರ್ಧಕನಾದ ಪುತ್ರನು ದೊರೆತು, ಉತ್ಸವದ ಕಾರಣವನ್ನುಂಟುಮಾಡಿರುವಲ್ಲಿ, ಇಂತಹ ಸುಯೋಗವನ್ನೇಕೆ ಕೆಡಿಸಿಕೊಳ್ಳಬೇಕು ? ಈ ಮೂಲಕವಾಗಿಯೇ ಬಹುಜನ ಬ್ರಾಹ್ಮಣ ಸಂತ ರ್ಪಣೆಯಾದರೂ ಆಗಲೆಂದು ನಿಶ್ಚಯಿಸಿ, ಮಗನ ವರ್ಧಂತಿಯುತ್ಸವವನ್ನು ಸಂಭ್ರಮದಿಂದ ನಡೆಯಿಸಲು, ತಕ್ಕ ಏರ್ಪಾಟುಮಾಡಿದ್ದನು. ಗೃಹಸ್ಸಾ ಮಿಯ ಈ ಬಗೆಯ ನಿಶ್ಚಿತಾರ್ಥದಿಂದ ಉತ್ಸವದ ಕಾಕ್ಯಗಳೆಲ್ಲವೂ ಸುಸೂ ತ್ರವಾಗಿ ನಡೆಯುವಂತಿದ್ದುವು. ಆದರೆ, ' ಶ್ರೇಯಾಂಸಿ ಬಹು ಏಘಾನಿ' ಎಂಬುದೊಂದಿದೆಯಲ್ಲವೇ ! ಆ ಶಂಕೆಯೊಂದು ಮಾತ್ರ ಈ ಉತ್ಸವದ ನಡುವೆ ತಟ್ಟದಿರಬೇಕೆಂದು ಕೋರುವೆವು. ಏಕೆಂದರೆ, ಹಿಂದೆ ಯೇ ಸುಸಂಧನ ಬಾಯಿಂದ ಹೊರಬಿದ್ದ ನುಡಿಯನ್ನು ಕೇಳಿರುವಿರಷ್ಟೆ ! ಭವಿಷ್ಯವನ್ನು ಬಲ್ಲವರಾರು ? ಇರಲಿ, ಜಮೀನ್ದಾರನು ಈಗೆಲ್ಲಿರುವನೆಂಬು ದನ್ನು ವಿಚಾರಮಾಡುವ.

  • ಭಲೆ ! ತಾರಾಪತಿ ! ಭಲೆಭಲೆ !! ರೋಹಿಣೀಸಮೇತನಾಗಿ ಇಲ್ಲಿ ಕುಳಿತಿರುವೆಯಲ್ಲವೆ ? ಆಗಲಿ ; ಪ್ರಕಾಶಿಸುತ್ತಿರು. ಶುಭದಾಯಕನಾದ