ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಸತೀ ಹಿ ತೈಷಿ ನ ಶ ಸುಪುತ್ರನಿಂದ ಚಿರಕಾಲ ಪ್ರಕಾಶಿಸುತ್ತಿರು. ಆದರೆ, ಈ ನಿನ್ನ ಪ್ರಕಾಶಕ್ಕೆ ಇನ್ನಾದರೂ ನಡುನಡುವೆ ಎಡರುಗಳಿಲ್ಲದಿರಬೇಕು. ಪ್ರಿಯ ಸೋದರಿಯರೇ ! ಸುಸ್ಕಾಂತರಾಗಿ ನೋಡಿರಿ, ಜಮಾನ್ಹಾರ ತಾರಾಪತಿರಾಯನು, ಸುನಂದಾದೇವಿಯೊಡನೆ ಮಾತನಾಡುತ್ತ ಲಕ್ಷ್ಮಿನಿಲಯವನ್ನೇ ಬೆಳಗಿಸು ತಿರುವನು, ಸುನಂದಾದೇವಿಯು, ಮನೋವ್ಯಾಕುಲವೆಷ್ಟಿದ್ದರೂ ಅದ ನೃಡಗಿಸಿ, ಪತಿಯ ಮುಖೋಲ್ಲಾಸಕ್ಕಾಗಿ ಪ್ರಸನ್ನ ಮುಖದಿಂದ ಕುಳಿತಿರು ವಳು. ಇದಲ್ಲವೇ, ಇವಳ ಸ್ವಾಧೀನಶಿಕ್ಷಣದ ಅಕ್ಷಣವು ! ಅದೂ ಹಾಗಿರಲಿ; ಗಂಗಾದೇವಿಯನ್ನಿದೊ ನೋಡಿರಿ !! ಮೋಹನದತ್ತಕುಮಾರನಿಗೆ ಪಾಠವನ್ನು ಕಲಿಸುತ್ತಿರುವ ಕ್ರಮವನ್ನಾ ದರೂ ನೋಡಿ ತಲೆದೂಗಿರಿ !!! ಇವಳ ಬೋಧನಾಶಕ್ತಿ, ಅಭಿಮಾನೋತ್ಕರ್ಷತೆಗಳನ್ನು ಸಾಧಾರಣ ನಾರಿ ಯರಲ್ಲಿ ನೋಡಲಾಗುವುದೇನು ? ಇಲ್ಲ, ಎಂದಿಗೂ ಇಲ್ಲ ! ಏಕೆಂದರೆ, ಕುಮಾರನು ತನ್ನ ಹೆತ್ತ ತಾಯಿಯನ್ನು ಮರೆವಷ್ಟರ ಮಮತಾಪೂರ್ಣತೆ ಯಿಂದಿರುವ ತನ್ನ ಕಿರುತಾಯಿಯಲ್ಲಿ ವಿನೀತನಾಗಿರುವನೆಂದರೆ, ಕೌತುಕ ವೇನು ? ಕೇಳಿಲ್ಲವೇ ? " ಲಾಲಿಸಿದಲ್ಲಿ ಮಕ್ಕಳು; ಪೂಜಿಸಿದಲ್ಲಿ ದೇವರು. ' ಸಾಧು ! ಗಂಗಾದೇವಿ ! ಸಾಧು ಸಾಧು !! ಮಕ್ಕಳಿಲ್ಲದ ಬಂಜೆತನವಿನ್ನೆ ನಗೇಕೆಂದು, ಕಕ್ಕುಲಿತೆಯಿಂದ ಮುಸುಕಿಟ್ಟು ಮಲಗಿರದೆ, ಇದ್ದ ಮಕ್ಕಳೇ ತನ್ನ ವೆಂದೆಣಿಸಿ, ನಲಿಯುತ್ತಿರುವ ನಿನ್ನೀ ನಗೆ ನಮ್ಮ ಸಾಧುವಾದನ ಗಳಿರಲಿ.' ಸಾಕಿನ್ನು, ಇತ್ತ ಗಮನವಿರಲಿ. ಸುನಂದಾಸಹಿತನಾಗಿ ಕುಳಿತಿದ್ದ ತಾರಾಪತಿರಾಯನಲ್ಲಿಗೆ ಯಮು ನೆಯು ಬಂದು ವಿನೀತೆಯಾಗಿ ನಿಂತು, ಅಂಟುಹಾಕಿದ್ದ ಪತ್ರವೊಂದನ್ನು ಮುಂದಿಟ್ಟು- ಪತ್ರವನ್ನು ತಂದ ದೂತನು ಬಾಗಿಲಲ್ಲಿರುವನು' ಎಂದು ಹೇಳಿ ಸರಿದುನಿಂತಳು. ತಾರಾಪತಿಯು ಪತ್ರವನ್ನು ತೆಗೆದು ಓದಲು ಮೊದಲುಮಾಡಿದನು.