ಪುಟ:ದಕ್ಷಕನ್ಯಾ .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3, ದ್ರೋಹಿಗಳ ಅಪಕೃತಿಯಿಂದುಂಟಾದ ಕಷ್ಟನಷ್ಟಗಳೇ ಮೂರ ನೆಯ ಸಮಾಧಾನವು. 4, ದೇಹಪರಿಶ್ರಮದಿಂದಾದ ಶಾರೀರಕ ಮತ್ತು ಮಾನಸಿಕ ಕ್ಷೇಶ ಗಳೇ ನಾಲ್ಕನೆಯ ಸಮಾಧಾನವು. _1, ಇವುಗಳಲ್ಲಿ ಯಾವುದನ್ನು ನಾವು ಮುಂದಿಡಬಹುದು ? ಮುದ್ರಾ ಲಯದವರ ಮೇಲೆ ಅಪವಾದವನ್ನು ಹೊರಿಸಿದ ಮಾತ್ರಕ್ಕೆ, ನಿಜವೆಂದು ನಂಬಿ ಶಾಂತರಾಗುವರಾರು ? " ಮುದ್ರಾಲಯದ ಸ್ಥಾಪನೆಯ ಉದ್ದೇ ಶವೇ ಪತ್ರ ಮತ್ತು ಪುಸ್ತಕಪ್ರಕಾಶಕ್ಕೆಂದಾಗಿರುವಲ್ಲಿ, ಅವುಗಳ ಮೇಲೆ ಯೇ ಅಪವಾದವೇ ? ಮುದ್ರಾಲಯದವರಲ್ಲಿ ಅವಿಧೇಯತೆ-ಅಲಸತೆಆಶಾಪರತೆಗಳೇ ತುಂಬಿದ್ದರೆ, ಮುದ್ರಾಲಯಗಳಾದರೂ ಹಾಳುಬಿದ್ದು ಹೋಗದಿರುವುದೇ ? ಅಂತವುಗಳ ನಾಶಕ್ಕೆ ಅವುಗಳ ವ್ಯವಸ್ಥಾಪಕರೇ ಕಾರಣರಾಗುವರಲ್ಲವೇ ? ಹೀಗೆಂಬ ಆಕ್ಷೇಪಣೆಗಳೇ ನಮ್ಮ ತಲೆಯ ಮೇಲೆ ಬೀಳುವುದು ನಿಜ ! ನಮ್ಮಲ್ಲಿ ಕರ್ತವ್ಯ ಕ್ಷಮತೆಗೆ ಮೂಲಾಧಾರ ವಾದ ಸತ್ಯಸಂಧತೆಯೂ, ಅನುವರ್ತನಗುಣವೂ, ಜಾಗರೂಕತೆಯ, ನಿರಂ ತರೋದ್ಯಮಶೀಲತೆಯ ಚೆನ್ನಾಗಿದ್ದ ಪಕ್ಷದಲ್ಲಿ, ಮುದ್ರಾಲಯದವರ ಮೇಲಿನ ಅಪವಾದಾರೋಪಕ್ಕೆ ಅವಕಾಶವೇ ಇರುವುದಿಲ್ಲ, ನಮ್ಮ ಉತ್ಸಾ ಹಶಕ್ತಿಯನ್ನು ನೋಡಿ, ಅವರೂ ನಮ್ಮ ಆಸ್ತ ಬಾಂಧವರಾಗಿ ನಿಂತು, ನಮ್ಮ ಕಾಠ್ಯವನ್ನು ತೃಪ್ತಿಕರವಾಗಿ ನಡೆಯಿಸುವುದರಲ್ಲಿ ಹಿಂತೆಗೆಯುವು ದಿಲ್ಲ. ಹಾಗಿಲ್ಲದೆ, ನಮ್ಮಲ್ಲಿ ಅಭಿಮಾನ-ಆಲಸ್ಯ -ಉದಾಸೀನಗಳೇ ಮುಂ ದಾಗಿರುವುದಾದರೆ, ಅವರು ಮಾಡುವುದಾದರೂ ಏನಿರುವುದು ? ನಮ್ಮ ಅಜಾಗರೂಕತೆಯ ಮುಂದೆ, ಅವರ ಶ್ರದ್ಧಾಭಕ್ತಿಗಳಾದರೂ ಹೇಗೆ ಪ್ರಕಾಶಿಸಬೇಕು ? ಹೀಗಿರುವುದರಿಂದ ಮೊದಲನೆಯ ಸಮಾಧಾನದ ಮಾ ತನ್ನೇ ಕಟ್ಟಿಡಬೇಕಾಯಿತು. 2. ಇನ್ನು ದೇಶಕ್ಕೂ, ದೇಶಿಯರಿಗೂ ಹೊರಿಸಿದ ಅಪವಾದವುಅದಾದರೂ ಒಪ್ಪತಕ್ಕುದೋ ? " ಹೇಗೆ ? ಕರ್ಣಾಟಕದಲ್ಲಿ ವಾಚನಾಭಿ