ಪುಟ:ದಕ್ಷಕನ್ಯಾ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೩೭ ಸುನಂದೆಯು ಶೋಕಾತಿರೇಕದಿಂದ ತಡೆಯಲಾರದೆ, ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು. ಯಮುನೆಯು ಎಷ್ಟೋ ಸಮಾಧಾನವನ್ನು ಹೇಳಿದರೂ ಫಲವಾಗದಿರಲು ಖತಿಗೊಂಡು, ಚಂದ್ರಮತಿಯಿದ್ದಲ್ಲಿಗೆ ಓಡಿಹೋದಳು. ಇಷ್ಟರಲ್ಲಿ ಮೋಹನನಿಗೆ ಪಾರವನ್ನು ಮುಗಿಯಿಸಿ, ಗಂಗೆಯ ಮಗನೆ ಡನೆ ಬಂದು ಸೇರಿ, ಸಮಾಚಾರವೇನೆಂಬುದನ್ನು ಕೇಳಿ ತಿಳಿದು, ಪಶ್ಚಾ ತಾಪಪಡುತ್ತ ಕುಳಿತಳು. ಮೋಹನ-ಅಳುತ್ತಳುತ್ತ ತಂದೆಯ ಗಲ್ಲವನ್ನು ಹಿಡಿದು, ಅಪ್ಪ' ಅಮ್ಮ ಯ್ಯನನ್ನು ನೋಡಲು, ಯಾವಾಗ ಕರೆದುಕೊಂಡುಹೋಗುವೆ ?? ಎಂದು ಕೇಳಿದನು. ತಾರಾಪತಿ-ಮಗನ ಮುಡಿದಡಹಿ ಒಳಿಯಲ್ಲಿ ಕುಳ್ಳಿರಿಸಿಕೊಂಡು- ಮಗು | ನಾಳೆಯೇ ಹೋಗುವ, ಸುಮ್ಮನಿರು ; ಅಳಬಾರದು' ಎಂದು ಸಂತಯಿಸಿ, ಪತ್ನಿ ಯನ್ನು ಕುರಿತು ಕೇಳಿದನು,-' ಪ್ರಾಣೇಶ್ವರ ! ನಿನ್ನ ಇಷ್ಟವೇನು ?? ಸುನಂದೆ-ಗದ್ದ ದಸ್ವರದಿಂದ- ನಾನೇನು ಹೇಳಲಿ ? ಹತ್ತು ವರ್ಷಗ ೪೦ದ ವಿಯೋಗವ್ಯಸನದಲ್ಲಿ ಕೊರಗಿ-ನರಲಿ ಸಾಕಾಗಿದ್ದು, ಈಗ ಒಂದೆಡೆಯಲ್ಲಿ ಸೇರಿ, ಇನ್ನೂ ಒಂದು ಮಾಸಾವಧಿಯಾದರೂ ನಡೆದಿರುವುದಿಲ್ಲ. ಈಗಲೇ ಇದೊಂದುಶೋಕವೃತ್ತಾಂತವು ಬಂದರೆ, ಇನ್ನೇನನ್ನು ಹೇಳಲಾದೀತು ? ನಮ್ಮ ತಾಯಿಯ ನೆನ್ನಿ೦ದ ಅನೇ ಕವೇಳೆ, ತನ್ನ ಅಂತ್ಯಕಾಲದಲ್ಲಿ ನಾನು ಬಳಿಯಲ್ಲಿರುವಂತೆ ಭಾಷೆ ಯನ್ನು ತೆಗೆದುಕೊಂಡಿರುವಳು. ಆದರೆ, ಈಗೇನು ಮಾಡಬೇಕೆಂ ಬುದೇ ನನಗೆ ತಿಳಿಯದಿದೆ, ಮಗಳಿಗಾಗಿ ಅಳುವುದೋ ? ನನ ಗಾಗಿ ಕೊರಗಿ ಪ್ರಾಣಬಿಡುತ್ತಿರುವ ತಾಯಿಗಾಗಿ ದುಃಖಿಸು ವದೋ ? ನಿಮ್ಮನ್ನು ಬಿಟ್ಟಿರುವುದಕ್ಕಾಗಿ ತಪ್ಪಿಸುವುದೋ ? ಏನು ಮಾಡಲಿ ? ?