ಪುಟ:ದಕ್ಷಕನ್ಯಾ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ 5 ತಿ ಓ ತ ಷಿ ಣಿ ಇಷ್ಟರಲ್ಲಿ ಚಂದ್ರಮತಿ, ಯಮುನೆಯರೂ ಬಂದು ಸೇರಿ, ಪಶ್ಚಾತ್ತಾಪಪಡುತ್ತ ಕುಳಿತರು. ತಾರಾಪತಿರಾಯನು ತಾಯಿಯ ಕಡೆಗೆ ತಿರುಗಿ ಕೇಳಿದನು.-' ಅಮ್ಮ ಯಾ ? ಈಗೇನುಮಾಡಬಹುದು ? ಅವರ ಅಂತ್ಯಕಾಲದ ವಾಂಛಿಯನ್ನು ನಡೆಯಿಸಿಕೊಡುವುದೇ ಧರ್ಮವಾಗಿದೆ. ಯಾರ ಸಹಾಯದಲ್ಲಿ ಕಳುಹಬಹುದು ?' ಚಂದ್ರಮತಿ-ಮಗು ! ಸುನಂದೆಯನ್ನೂ, ಮೋಹನನನ್ನೂ ಬಿಟ್ಟು, ಅರೆ ಗಳಿಗೆಯಾದರೂ ನಾನಿಲ್ಲಿ ಇರಲಾರೆನು, ಅವಳನ್ನು ಹೇಗೆ ಕಳಿಸು ವುದು ? ಗಂಗೆ-ಹಾಗೆನ್ನಲಾದೀತೇ ? ಇವರನ್ನು ಬಿಟ್ಟಿರಲು ಯಾರಿಗೂ ಮನವೊ ಡಂಬಡುವಂತಿಲ್ಲ. ಆದರೂ ಈ ವೇಳೆಯಲ್ಲಿ, ಕಳುಹದಿರಲಿಕ್ಕಾ ದೀತೇ ? ಸರಿಯಾದವರೊಡನೆ ಕಳಿಸಿ, ಬೇಗ ಬರುವಂತೆ ಏರ್ಪಾ ಟುಮಾಡುವುದು, ನನ್ನ ಮನಸ್ಸಿಗೆ ವಿಹಿತವಾಗಿ ಕಾಣುವುದು. ಇನ್ನು ಇದರ ಮೇಲೆ ನಿಮ್ಮ ಇಷ್ಟವು ಹೇಗಿದೆಯೋ ? ತಾರಾಪತಿ-ಅದೇ ನನಗೂ ಸರಿಯಾದ ಆಲೋಚನೆಯಾಗಿದೆ. ಯಮುನೆ ಯನ್ನೇ ಸಹಾಯಕ್ಕಾಗಿ ಕಳುಹಬೇಕೆಂದಿರುತ್ತೇನೆ. ಸುನಂದೆ-ಯಮುನೆಯು ನನ್ನೊಡನೆ ಬಂದರೆ, ಇಲ್ಲಿ ಅಮ್ಮಾಯಿಾಯವ ರಿಗೂ, ಗಂಗಾಬಾಯಿಗೂ ತೊಂದರೆಯಾದೀತು. ಗಂಗೆ--ನನಗೇನೂ ತೊಂದರೆಯಿಲ್ಲ. ಅಮ್ಮ ಊಾಯುವ ಕೆಲಸಕ್ಕಾದರೂ ಬೇರೆ ಏರ್ಪಾಟು ಮಾಡಿಕೊಳ್ಳಬಹುದು, ಆದರೆ, ಅವಳು ಮನೆ ಯಲ್ಲಿ ಒಂದು ಗಳಿಗೆಯಿಲ್ಲದಿದ್ದರೂ ಮನೆಯಾಡಳಿತವೇ ಸಡಿಲವಾ ದಂತೆ ತೋರುವುದು, ಇದೊಂದಲ್ಲದೆ ಮತ್ತಾವ ಶಂಕೆಯ ಇಲ್ಲ. ಸುನಂದೆ-ನಿಜ, ಗಂಗೆಯ ಮಾತು ನನಗೂ ಸಹಜವಾಗಿದೆ. ಯಮು ನೆಯು ಇಲ್ಲಿಯೇ ಇರಬೇಕು, ನನ್ನ ಸಹಾಯಕ್ಕೆ ನಂಬಿಕೆಯುಳ್ಳ ಆಳುಗಳನ್ನು ಕಳುಹಿದರೂ ಸಾಕಾದೀತೆಂದು ತೋರುವುದು.