ಪುಟ:ದಕ್ಷಕನ್ಯಾ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೩೯ ತಾ ತಾರಾಪತಿ-ಹಾಗೆಯೇ ಮಾಡಬೇಕು. ನಾನೇ ನಿನ್ನನ್ನು ಕರೆದುಕೊಂಡು ಹೋಗಿ ಬಿಟ್ಟು, ಅವರನ್ನೂ ಕಣ್ಣಾರ, ನೋಡಿಬರಬೇಕೆಂಬ ಇಷ್ಟವಿದೆ. ಆದರೆ, ನಿಂತಂತೆಯೇ ಹೊರಡಲಿಕ್ಕಾಗದು, ಹೊರಡ ಬೇಕೆಂದರೆ, ಮೂರುನಾಲ್ಕು ದಿನಗಳಾದರೂ ಬೇಕಾಗುವುದು. ಅಷ್ಟರವರೆಗೂ, ನಿನ್ನನ್ನು ತಡೆದಿರುವುದೂ ಸರಿಯಾಗಿಲ್ಲ, ಭವಿತವ್ಯ ವನ್ನು ಕಂಡು ಹೇಳುವವರಿಲ್ಲ, ಹೇಗೂ ನಾಳೆಯೇ ಪ್ರಯಾಣ ಮಾಡುವರೆಂದು ಉತ್ತರವನ್ನು ಬರೆದು ಕಳುಹುವೆನು. ದೈವೇಚ್ಛೆ ಯಿದ್ದಂತಾಗಲಿ. ಎಲ್ಲರೂ ಸುಮ್ಮನಾದರು. ತಾರಾಪತಿರಾಯನು ಹೊರಟು ಬಂದು, ಆಗಲೇ ಉತ್ತರವನ್ನು ಬರೆದುಕೊಟ್ಟು ಕಳುಹಿದನು. ದೂತನೂ ಉತ್ತರಪತ್ರವನ್ನು ಕೈಕೊಂಡು ಹೊರಟುಹೋದನು, ವಾಯುವೇಗದಿಂದ ಹಾರಿಹೋಗುತ್ತಿದ್ದ ಅಶ್ವಗತಿಯನ್ನು , ಕರಕೌಶಲದಿಂದ ಧಟ್ಟನೆ ಹಿಡಿದು ಕಟ್ಟಿದಂತೆ, ಜಾನ್ದಾರನ ಮನೆಯ ಉತ್ಸವಕಾರವು ಇದೊಂದು " ಪುನ ರ್ವಿಯೋಗಶಂಕೆ' ಎಂಬ ವಿಧ್ಯದಿಂದ ಧಟ್ಟನೆ ಹಿಡಿದು ನಿಲ್ಲಿಸಲ್ಪಟ್ಟಿತು. ಇದನ್ನೇ ಅಲ್ಲವೇ ' ದೈವೀವಿಚಿತಾ ಗತಿಃ ' ಎಂದು ಹೇಳುವುದು ? ಇದಕ್ಕೆಂದಲ್ಲವೇ ನಾವು ಹಿಂದೆಯೇ ಭಯ-ಸಂಶಯಾವಿಷ್ಟರಾಗಿ ಸೂಚಿಸಿ ದುದು ? ಭಗವತಿಯೊಕ್ಕೆಯಿಂದ ವಿಘ್ನ ನಿವಾರಣೆಯಾಗಿ, ಸುಖಸಂಗತಿಯು ಸಂಗಡಿಸಲಿ. ---