ಪುಟ:ದಕ್ಷಕನ್ಯಾ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸ ತೇ ಹಿ ತೃ ಷಿ ಣಿ ಸರದಾರನು ಸುಹಾಸದಿಂದ ತಲೆದೂಗುತ್ತ ಒಳಹೊಕ್ಕನು ಮಾಸ್ಟರನು ಮಾದೆಯಿಂದ ತನ್ನಿ ದಿರಾಗಿದ್ದ ಕುರ್ಚಿಯಮೇಲೆ ಕುಳ್ಳಿ ಹೇಳಿದುದರಿಂದ, ಅದನ್ನೆಳೆದು ಕುಳಿತನು. ಪೋಸ್ಟ್‌ಮಸ್ಟರ್-ಸರದಾರನನ್ನೇ ನೋಡುತ್ತ ಸಂಕುಚಿತಸ್ವರದಿಂದ ' ಬಂದುದೆಲ್ಲಿಂದಲೋ ? ಯಾವ ಕಾರಗೌರವಕ್ಕೆಂದೋ ? ? ಸರದಾರ್--ಕಿರುನಗೆಯಿಂದ-' ನಾನು ಬಂದುದು ಶ್ರೀನಗರದಿಂದ ; ನನ್ನ ಸ್ವಂತ ಕಾಠ್ಯಕ್ಕಾಗಿಯೇ ಬಂದಿರುವುದು.' ಇವರ ಮಾತಿನ ಮಧ್ಯದಲ್ಲಿಯೇ ಅಂಚೆಗೆ ಕಾಗದಗಳನ್ನು ತಂದಿದ್ದ ಗೋಪಾಲನು, ತನ್ನ ಜತೆಯವರೊಡನೆ ಅಲ್ಲಿಗೆ ಬಂದು, ಪೆಟ್ಟಿಗೆ (Post-box) ಗೆ ಕಾಗದಗಳನ್ನು ಹಾಕಿ, ಬಂದಂತೆಯೇ ಹಿಂದಿರುಗಿ ದನು. ಇದೆಲ್ಲವನ್ನೂ ನೋಡುತ್ತ ಕುಳಿತಿದ್ದ ಸರದಾರನು, ಮರುಮಾತಾ ಡದೆ ಎದ್ದು ಹೊರಗೆ ಹೋಗಿ ನೋಡಿಬಂದು, ಮತ್ತೆ ಮೊದಲಿನಂತೆಯೆ ಕುಳಿತನು. ಪೋಸ್ಟ್‌ ಮಾಸ್ಟರ್‌-ವಿಸ್ಮಯದಿಂದ-' ಇದೇನು, ಮಾತನಾಡುತ್ತಿದ್ದ ತೆಯೇ ಎದ್ದು ಹೋಗಿದ್ದಿರಿ?' ಸರದಾರ-ಮನೆಯಿಂದ ಯಾರೋ ಬಂದಿದ್ದರು ; ಮಾತನಾಡಿ ಕಳುಹಿ ಬಂದೆನು. ಅಷ್ಟೆ ! ಅದಿರಲಿ ; ಎಲ್ಲಿ ? ಈಗ ಪೆಟ್ಟಿಯೊಳಗೆ ಬಿದ್ದ ಕಾಗದಗಳನ್ನು ಹೊರತೆಗೆದು, ವಿಳಾಸವನ್ನು ನೋಡಿ ಹೇಳಿರಿ.' ಪೋಸ್ಟ್ ಮಾಸ್ಟರ್-ಪೆಟ್ಟಿಗೆಯ ಬೀಗವನ್ನು ತೆಗೆದು, ಒಳಗಿದ್ದ ಕಾಗದ ಗಳನ್ನು ಒಂದೊಂದಾಗಿ ಹಿಡಿದು ವಿಳಾಸವನ್ನು ಓದಿಹೇಳುತ್ತ ಕಡೆಗೆ, ಒಂದು ಲಕೋಟೆಯನ್ನು ತೆಗೆದು-' ಗೊಲ್ಲರಪಾಳ್ಯದ ಹೊಟೇಲ್ ಸೌಬಲರಾಯರಿಗೆ' ಎಂದಿದ್ದ ವಿಳಾಸವನ್ನು ಓದಿ ಹೇಳಿದನು. ಸರದಾರ-ಕೈನೀಡಿ-“ ಅದನ್ನಿತ್ಯ ಕೊಡಿರಿ ; ನೋಡಬೇಕಾಗಿದೆ.'