ಪುಟ:ದಕ್ಷಕನ್ಯಾ .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೧೪೩ ಪೋಸ್ಟ್‌ ಮಾಸ್ಟರ್‌ ವಿಳಾಸದಾರರಿಗೆ ಮುಟ್ಟಿಸುವುದಲ್ಲದೆ, ಇತರರಿಗೆ ಹೇಗೆ ಕೊಡಬಹುದು ? ಸರದಾರ -- ಹೇಗೆಂಬುದನ್ನು ಆ ಬಳಿಕ ಚರ್ಚಿಸಬಹುದು. ಮೊದಲು, ಕೊಟ್ಟು ಬಿಡುವುದು ಮೇಲು. ಪೋಸ್ಟ್ ಮಾಸ್ಟರ್-ಶಂಕಿತನಾಗಿ ಸ್ವಾಮಿ ! ತಾವು ಎಲ್ಲವನ್ನೂ ತಿಳಿದ ವರು ; ನೀವೇ ಯೋಚಿಸಿ ಹೇಳಿರಿ, ಯಾರೇ ಆಗಲಿ, ನಿಯಮ ವನ್ನು ಮಾರುವುದು ನ್ಯಾಯವೇ ? ಮಿಾರಿ ನಡೆಯಬಹುದೇ ? ಇದರಿಂದ ನಮ್ಮ ಮೇಲೆ ತಪ್ಪಿತವು ಬೀಳಬಹುದಲ್ಲವೇ ? ಅದಕ್ಕೆ ನಾವಲ್ಲದೆ, ಮತ್ತಾರಾದರೂ ಹೊಣೆಗಾರರಿರುವರೇ ?' ಸರದಾರ- -ಅಯ್ಯಾ, ಈಗ ವಿಶೇಷ ವಿಷಯಗಳಿಗೆ ಅವಕಾಶವಿಲ್ಲ. ಇದ ನ್ನು ಪರೀಕ್ಷಿಸಲಿಕ್ಕಾಗಿಯೇ ನಾನು ಬಂದಿರುವೆನು. ಇದರಿಂದ ನಿಮಗೇನೂ ತಪ್ಪಿತವು ಬೀಳುವುದಿಲ್ಲ. ಹಾಗೂ ನಿಮ್ಮ ಮೇಲೆ ಬೇಳಬರುವ ಆರೋಪಗಳಿಗೆ, ಪ್ರಬಲ ಸರ್ಕಾರವೇ ಹೊಣೆಯಾಗಿ ನಿಲ್ಲುವುದೆಂದು ತಿಳಿಯಿರಿ. ಪೋಸ್ಟ್ ಮಾಸ್ಟರ್-ಹಾಗಾದರೆ ಸಂತೋಷ, ಆದರೂ ಕ್ಷಮೆಯಿರಲಿ. ತಾವು ಯಾರಕಡೆಯ ಪ್ರತಿನಿಧಿಗಳಾಗಿ ಬಂದಿರುವಿರೆಂಬುದನ್ನು ನಿರ್ಧಾರಮಾಡಿರಿ, ಆ ಬಳಿಕ ನಿಮ್ಮ ಮಾತಿಗೆ ಪ್ರತಿಯಿರುವುದಿಲ್ಲ. ಸರದಾರ-ಸರ್ದಾರ್‌ ಧಮಪಾಲರನ್ನೇ ಮರೆತಿರೋ ? ಅವರು ನಿಮ್ಮ ನೆನಪಿನಲ್ಲಿದ್ದರೆ, ನಾನು ಅವರ ಪ್ರತಿನಿಧಿಯೆಂದೇ ತಿಳಿಯಬಾರ ದೇಕೆ ? ಹಾಗೂ ಸಂಶಯವಿದ್ದರೆ ಹೇಳಿರಿ. ಪೋಸ್ಟ್‌ಮಾಸ್ಟರ್‌-ಧಿಗ್ಗನೆದ್ದು ಕಾಗದವನ್ನು ಸರದಾರನ ಮುಂದಿಟ್ಟು ವಿನೀತಭಾವದಿಂದ ಹೇಳಿದನು-' ಮಹನೀಯರೇ ! ಕ್ಷಮೆಯಿರಲಿ. ನಾನು, ಸರ್ದಾರ್‌ ಧರ್ಮಪಾಲರ ಆಜ್ಞೆಗೆ ಯಾವವವೂ ವಿಧೇಯನಾಗಿರತಕ್ಕವನು, ನನ್ನಲ್ಲಿ ಸಂಶಯ ಲೇಶಕ್ಕೂ ಕಾರಣ