ಪುಟ:ದಕ್ಷಕನ್ಯಾ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಸ ತಿ ಹಿ ಷಿ ಣಿ ಎಲ್ಲ, ನನ್ನ ಕರ್ತವ್ಯವನ್ನು ನಾನು, ಸತ್ಯದ ಏಕನಿಷ್ಟೆಯಲ್ಲಿ ನೆರವೇ ರಿಸಬೇಕಾದುದು ಸಹಜವಾದುದರಿಂದ, ಇಷ್ಟು ದೂರ ಚರ್ಚಿಸಿ ದೆನು, ಅನ್ಯಧಾ ಭಾವಿಸಲಾಗದು.' ಸರದಾರ-ಕಾಗದವನ್ನು ಕೈಕೊಂಡು ತಲೆದೂಗಿ ನಗುತ್ತ- ಅಷ್ಟು ಉಪ ಚಾರೋಕ್ತಿಯೇಕೆ ? ಹೀಗಿರುವುದು ಸಂತೋಷಪ್ರದವೇ ಸರಿ.' ಎಂದು ಹೇಳಿ, ಮೇಲೆ ಗಾಜೆನಪಾತ್ರೆಯಲ್ಲಿದ್ದ ನೀರಿನಿಂದ, ಆ ಲಕೋಟೆಗೆ ಹಾಕಿದ್ದ ಅಂಟನ್ನು ಬಿಡಿಸಿ, ಉಪಾಯದಿಂದ ಅಂಚೆಯ ಚೀಟಿ (Postage stamp) ಯನ್ನು ತೆಗೆದಿರಿಸಿ, ಕಾಗದವನ್ನು ತೆಗೆದು ತನ್ನಲ್ಲಿಯೇ ಓದಿ ವಿಷಯಗಳನ್ನು ತಿಳಿದು, ಮತ್ತೆ ಕಾಗದ ವನ್ನು ಪೋಸ್ಟ್ ಮಾಸ್ಟರ ಕೈಗಿತ್ತು ಹೇಳಿದನು- ಇದನ್ನು ನೀವೂ ಒಂದುಬಾರಿ ನೋಡಿ ತಿಳಿದುಕೊಳ್ಳಿರಿ.' ಪೋಸ್ಟ್ ಮಾಸ್ಟರ್-ಕಾಗದವನ್ನು ಒಂದುಬಾ' ಓದಿ, ಮತ್ತೆ ಸರದಾರನ ಕೈಗಿತ್ತು-' ಮುಂದೆ ಉಪಾಯವೇನು ?' ಸರದಾರ ಉಪಾಯವಿದೇ ಆಗುವುದು.' ಎಂದು ಹೇಳಿ, ಕಾಗದವನ್ನು ಮೊದಲಿದ್ದಂತೆಯೇ ಮಡಿಸಿ, ಲಕೋಟೆಗೆ ಅಂಟುಹಾಕಿ, ತಲೆ ಚೀಟಿ (Postage stamp) ಯನ್ನು ಅಂಟಿಸಿ ಪೋಸ್ಟ್ ಮಾ ಸ್ವರ ಕೈಗಿತ್ತು. ಇದನ್ನು ನಿಮ್ಮ ನಿಯಮಾನುಸಾರವಾಗಿ ವಿಳಾಸ ದಾರರಿಗೆ ಕಳುಹಿಸಿ.' ಎಂದು ಸುಮ್ಮನಾದನು ಪೋಸ್ಟ್ ಮಾಸ್ಟರು ಕಾಗದಕ್ಕೆ ಮುದ್ರೆಯನ್ನೋ ತಿ ಕಳುಹುವಂತೆ ಮುತ್ಸದ್ಧಿಯ (Clerk) ವಶಕ್ಕೊಪ್ಪಿಸಿ, ಮತ್ತೆ ಸರದಾರನ ಬಳಿಯಲ್ಲಿ ಕುಳಿ ತನು. ಸರದಾರ- ಈಗಲಾದರೂ ನ್ಯಾಯವಿಮರ್ಶೆಯನ್ನು ಗ್ರಹಿಸಬಲ್ಲಿರಷ್ಟೆ ? ಪೋಸ್ಟ್ ಮಾಸ್ಟರ್-ಬಲ್ಲೆನು. ಆದರೆ, ಅದೂ ಧರ್ಮಪಾಲರ ಅಂತಃಕ ರುಣಪ್ರಭಾವದಿಂದ.