ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೪೫ ಸರದಾರ-ಸಂತೋಷ ; ನೀವು ಈ ದಿನ ಮಾಡಿದ ಉದಾರವಾದ ಸಹಾ ಯಕ್ಕಾಗಿ ಧರ್ಮಪಾಲರಿಗೆ ಚಿರಸ್ಮರಣೀಯರಾಗಿರುವಿರಿ, ಪೋಸ್ಟ್‌ ಮಾಸ್ಟರ್‌-ಸ್ವಾಮಿ ! ಧರ್ಮಪಾಲರೇ ನನ್ನ ಅನ್ನದಾತರಾಗಿ ರುನರು, ಅನಾಥನಾಗಿ, ಸೋಮಾರಿತನದಿಂದ ಅಲ್ಲಲ್ಲಿ ಅಲೆದಲೆದು ಸಾಯುತ್ತಿದ್ದ ನನ್ನನ್ನು ಉಚಿತಶಿಕ್ಷಣದಿಂದಲೂ, ತಮ್ಮ ಸತ್ಸಹ ವಾಸ ಬಲದಿಂದಲೂ ವಿದ್ಯಾ-ಬಲ-ಆಶ್ರಯಗಳುಂಟಾಗಿ ನಾಲ್ವ ರಲ್ಲಿ ಗಣ್ಯನಾಗಿದ್ದು, ಜೀವನನಿಲ್ಯಾಹಮಾಡಿಕೊಳ್ಳುವಂತೆ ಉದ್ಧರಿ ಸಿರುವ ಅವರನ್ನು ನಾನು, ನನ್ನ ಇಷ್ಟದೈವವೆಂದೇ ಸಂಭಾವಿಸುತ್ತಿ ರುವೆನು. ಅವರಿಗೆ, ನಾನು ನನ್ನ ಮರಣಾವಧಿ ದಾಸನಾಗಿರಲುಳ್ಳ ವನೆಂದೂ, ನನ್ನ ಈ ದೇಹಾದಿ ಸರ್ವಸ್ವವೂ ತಮ್ಮದೆಂದೇ ತಿಳಿದು, ನನಗೆ ಯಾವಕಾಲ್ಯದಲ್ಲಿ ಬೇಕಾದರೂ ಕಟ್ಟು ಮಾಡಬೇಕೆಂದೂ ತಿಳಿಯಹೇಳಬೇಕಾಗಿರುವುದು. ಸರದಾರ -ಸಂತೋಷದಿಂದ ತಲೆದೂಗಿ-• ಅಗತ್ಯವಾಗಿ ಹೇಳುವೆನು.' ಪೋಸ್ಟ್ ಮಾಸ್ಟರ್ --ಅದು ಸರಿಯೆ ; ಸರ್ಕಾರದ ಕಡೆಯ ಅಧಿಕಾರಿಯಾ ಗಿದ್ದು, ತಾನೇ ಈ ದ್ರೋಹದಲ್ಲಿ ಮುಂದಾಳಾಗಿ ನಿಂತಿರುವ ನೀಚ ನನ್ನು ಈಗಲೇ ಹಿಡಿದುಹಾಕಲು ವಿಳಂಬವೇಕೆ ? ಸರದಾರ- ಯಾವುದೇ ಆದರೂ, ಕಾರಣವನ್ನು ಮುಂದಿಟ್ಟು ಕಾರ್ಯ ವನ್ನು ಮಾಡಬೇಕು, ಇಲ್ಲವಾದರೆ, ಅದು ತೃಪ್ತಿಕರವಾಗಿ ನೆರವೇರ ಲಾರದು, ಇದನ್ನು ಪ್ರತ್ಯಕ್ಷ ಪ್ರಮಾಣದಿಂದ ನಿದರ್ಶನಕ್ಕೆ ತರಬೇ ಕಲ್ಲದೆ, ಬಾಯಿಮಾತಿಂದಾಗದು, ಇದನ್ನರಿತೇ ಧರ್ಮಪಾಲರು, ಇವರು ತಮ್ಮ ಕಾರ ಸಾಧನೆಗೆಂದು ಹೂಡುತ್ತಿರುವ ಮಾಯಾ ಬಲೆಗಳಿಂದ ಇವರನ್ನೇ ಹಿಡಿದು ಬಂಧಿಸಿ, ಸರ್ವನಾಶ ಮಾಡಬೇ ಕೆಂದಿರುವರು. 10