ಪುಟ:ದಕ್ಷಕನ್ಯಾ .djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಸ ಸ ತಿ ಹಿ ತೃ ಷಿ ಣಿ ಪೋಸ್ಟ್‌ ಮಾಸ್ಟರ್‌-ಅವರ ಉದ್ದೇಶಕ್ಕೊಳಪಟ್ಟ ಯಾವುದೇ ಕಾರವಾ - ದರೂ ವ್ಯರ್ಥವೆನಿಸಲಾರದು. ಆದರೆ, ಈಗ ನನ್ನಿಂದಾಗಬೇಕಾದ ಕಾರವೇನಿದ್ದರೂ ಹೇಳಬಹುದಲ್ಲವೆ ? ಸರದಾರ-ಮತ್ತೇನೂ ಅಲ್ಲ, ಇಂದಿನಂತೆಯೇ, ಇದೇ ವಿಳಾಸಕ್ಕೆ ಹೋ ಗುವ ಪ್ರತಿಯೊಂದು ಪತ್ರಿಕೆಯನ್ನೂ ಉಪಾಯಾಂತರದಿಂದ ತಿಳಿದುಕೊಳ್ಳಬೇಕಲ್ಲದೆ, ನನಗೊ ತಂತಿ (Telegram) ಮೂಲಕ ತಿಳಿಸುತ್ತಿರಬೇಕು, ಅಲ್ಲದೆ, ಈ ಆಫೀಸಿಗೆ ಸಂಬಂಧಿಸಿದ ಇತರ ಆಶ್ರಿತಭಾಗ (Branch-office) ಗಳಲ್ಲಿಯೂ ತೋರಿಬರುವ ಹುಳುಕುಗಳನ್ನು ತಕ್ಕ ಮಟ್ಟಿಗೂ ಕಂಡುಹಿಡಿದು, ನ್ಯಾಯವನ್ನು ದ್ದ ರಿಸುವುದೂ, ನಿಮ್ಮ ಆಫೀಸಿಗೆ ಸಂಬಂಧಿಸಿದ ಪ್ರತಿಯೊಬ್ಬರ ಯೋಗ್ಯತೆಗಳನ್ನು ಪರೀಕ್ಷಿಸುವುದೂ, ದುರ್ಮಾರ್ಗಿಗಳ ದ್ರೋಹ ಚಿಂತನೆಗಳಿಗೆ ಇಲ್ಲಿ ಸ್ವಲ್ಪವೂ ಅವಕಾಶವಿರದಂತೆ ಎಚ್ಚರಿಸಬೇಕಾ ದುದೂ ನಿಮ್ಮ ಕರ್ತವ್ಯದಕ್ಷತೆಯ ಮುಖ್ಯಾಂಗಗಳಾಗಿವೆ. ಇದು ಚೆನ್ನಾಗಿ ನೆನಪಿರಲಿ. ಪೋಸ್ಟ್ ಮಾಸ್ಟರ್-ಒಂದುಬಾರಿ ತೂಕಡಿಕೆಯಿಂದ ಹಳ್ಳಕ್ಕೆ ಬೀಳುತ್ತಿ ದವನು ಮತ್ತೆಯ ತೂಕಡಿಸಿ ಬೀಳುವನೆ ? ಇನ್ನು ನಾನು ಕರ್ತವ್ಯವನ್ನು ಚೆನ್ನಾಗಿ ಗಮನಿಸುವೆನು, ಇದೊ ವಂದನೆ. ಸರದಾರನು ಪ್ರತಿವಂದನೆ, ನಾನಿನ್ನು ಹೊರಡುವೆನು' ಎಂದು ಹೇಳಿ ಹೊರಟುಹೋದನು, “ ಅವನಾರು, ವಿಚಾರವೇನು, ಅಂಚೆಗೆ ಕೊಟ್ಟ ಸೂಚನೆಯ ಉದ್ದೇಶವೇನು ?” ಎಂಬಿವನ್ನು ತಿಳಿಯಬೇ ಕಾದರೆ, ತಾಳ್ಮೆಯಿಂದಿರಬೇಕು, ಮುಂದೆ ತಾನಾಗಿ ಹೊರಬೀಳು ವದು.