ಪುಟ:ದಕ್ಷಕನ್ಯಾ .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಸ ತಿ ಹಿ – ೩ ಣಿ ಗೋಪಾಲ-ಗರ್ವದಿಂದ-' ತಾಯಿಾ ! ಇದೇಕೆ, ಹೀಗೆ ಕೂಗುವಿರಿ ? ನೀವೇನೂ ಹೆದರಬೇಕಾದುದಿಲ್ಲ, ನಾವು ನಿಮ್ಮ ಬೆಂಗಾವಲಿಗಾಗಿ ಬಂದವರಲ್ಲವೇ ? ನಿಮ್ಮ ವಿಚಾರವನ್ನು ತೆಗೆದುಕೊಳ್ಳುವುದು ನಮಗೆ ಮುಖ್ಯವಲ್ಲವೆ ? ಸುಮ್ಮನಿರಿ.' ಎಂದು ಹೇಳಿ, ಕುದು ರೆಗಳ ಬೆನ್ನು ಚಪ್ಪರಿಸಿದನು. ಬಂಡಿಯು ಮುಂದಕ್ಕೆ ಹೊರಟಿತು. ಆದರೆ, ಅಷ್ಟರಲ್ಲಿ ಗುಡಾರದ ಮುಂಗಡೆ ನಿಂತಿದ್ದ ಅಧಿಕಾರಿಯು, ಕೂಗಿ ಹೇಳಿದನು-' ಬಂಡಿ ಯಾರದು? ಹೇಳದೆ ಹೋಗಲಾಗದು.' ಗೋಪಾಲನು ಮಾತಾಡಲಿಲ್ಲ, ಅಧಿಕಾರಿಯು ಕುಪಿತನಾಗಿ ಮುಂದೆ ಬಂದು ತನ್ನ ಸೇವಕನನ್ನು ಕುರಿತು, ಹೇಳಿದನು- ರಣಸಿಂಗ್ ! ಬಂಡಿಯಾರದೋ, ತಡೆದು ವಿಚಾರಿಸು, ಬಂಡಿಯೊಳಗೆ, ನಮ್ಮ ಸುನಂದಾಮೋಹನರ ಕಂರವೇ ಕೇಳುತ್ತಿದೆ, ಅವರೇ ಆಗಿದ್ದರೆ, ಕೆಳಗಿಳಿದು ಬರು ವಂತೆ ತಿಳಿಸು, ಮೊದಲು, ಈ ಬಂಡಿಯವನ ಅಹಂಕಾರವನ್ನು ಮುರಿದು ನಿಲ್ಲಿಸು.' ರಣಸಿಂಗ್-(ಸೇವಕ) ಬಂಡಿಯಬಳಿಗೆ ಬಂದು, ಕುದುರೆಗಳನ್ನು ಹಿಡಿದು ನಿಲ್ಲಿಸಿ, ಗೋಪಾಲನನ್ನು ಕುರಿತು,-' ಯಾರಯ್ಯ, ನೀನು ? ಎಷ್ಟು ಹೇಳಿದರೂ ಕಿವಿಮುಟ್ಟಿಲ್ಲದೇ ?' ಗೋಪಾಲ-ನೀವು ಯಾರೋ, ನಾವೇನುಬಲ್ಲೆವು ! ರಣಸಿಂಗ್-ನಾವು ಯಾರೇ ? ಸರ್ಕಾರದವರು, ತಿಳಿದೆಯೋ ? ಬಂಡಿ ಯಲ್ಲಿರುವವರಾರು ? ಎಲ್ಲಿಗೆ ಹೋಗುವರು ? ಗೋಪಾಲ-ಸಂಕುಚಿತಸ್ವರದಿಂದ ' ಇವರು, ವಿಷಹರಪುರದ ಜಮೀಾನ್ನಾ ರರ ಮನೆಯವರು ; ದುರ್ಗಾಪುರಕ್ಕೆ ಹೋಗುತ್ತಿರುವರು.' ರಣಸಿಂಗ್' ಹಾಗಾದರೆ ಸರಿ.' ಎಂದು ಬಂಡಿಯಬಾಗಿಲನ್ನು ತೆಗೆದು, “ ಕುಮಾರರೇ ! ಮೆಲ್ಲನೆ ಇಳಿಯಿರಿ, ತಾಯಿಾ ! ಯಜಮಾನರು ನಿಮ್ಮನ್ನು ಬರಹೇಳಿ, ಕಾದಿರುವರು ; ಕೆಳಗಿಳಿಯಬೇಕು.'