೧೫೧ ದ ಕ ಕ ನ್ಯಾ ಸುನಂದೆ-ಯಾರು ? ರಣಸಿಂಗನೇ ! ಇಲ್ಲಿಗೆ ಯಾವಾಗಬಂದಿರಿ ? ರಣಸಿಂಗ್-ನಾವು ಈ ದಿನ ಪ್ರಾತಃಕಾಲದಲ್ಲಿಯೇ ಬಂದೆವು. ಇನ್ನೂ ಇಲ್ಲಿಯೇ ಮೂರು ನಾಲ್ಕು ದಿನಗಳು ನಿಲ್ಲಬೇಕಾಗುವುದು. ಸುನಂದೆಯು ಮಗನೊಡನೆ ಕೆಳಗಿಳಿದು, ಅವಕುಂರನವನ್ನು ಸರಿಯಾಗಿ ಹೊದ್ದು, ಮಗನೊಡನೆ ಹೊರಟಳು. ರಣಸಿಂಗನು ಇಬ್ಬ ರನ್ನೂ ಅಧಿಕಾರಿಯ ಬಳಿಗೆ ಕರೆತಂದನು. ಅಧಿಕಾರಿಯು ಇಬ್ಬರನ್ನೂ ನೋಡಿ, ಸಂಭ್ರಮದಿಂದ ಕೇಳಿದನು,- ತಾಯಿಾ ! ನೀವು ಹೊರಡುವಾಗ ಎಷ್ಟು ಹೊತ್ತಾಗಿದ್ದಿತು ?? ಸುನಂದೆ- ಅಪ್ಪ ! ಎಂಟುಗಂಟೆ ಹೊಡೆದುಹೋಗಿದ್ದಿತು. ಅಧಿಕಾರಿ-ನಿನ್ನ ಸ್ವಾಮಿಯು, ಬರಲಿಲ್ಲವೇಕೆ ? ಸುನಂದೆ ನಾನು ಹೊರಡಬೇಕಾದರೆ, ನಾಲ್ಕಾರುದಿನಗಳು ಬೇಕಾ ದೀತು, ಆವರೆಗೂ ನಿಮ್ಮನ್ನು ನಿಲ್ಲಿಸಿಕೊಳ್ಳುವುದು ಸರಿಯಾದು ದಲ್ಲ.' ಎಂದು ಹೇಳಿ, ನನ್ನನ್ನು ಕಳುಹಿದರು. ಅವರೂ ಒಂದೆ ರಡು ವಾರದೊಳಗೆ ಬರುವರಂತೆ, ಅಧಿಕಾರಿ-ತಾಯಿಾ ! ನಿನ್ನ ತಾಯಿಯ ದೇಹಸ್ಥಿತಿಯು ಒಂದೇರೀತಿ ಯಲ್ಲಿರುವುದೆಂದೂ, ಪ್ರಾಣಭಯವಿಲ್ಲವೆಂದೂ, ವೈದ್ಯರು ಹೇಳು ತಿರುವರೆಂದು ಈ ದಿನ ಬಂದ ಸಮಾಚಾರದಿಂದ ತಿಳಿದಿದೆ. ನೀನೂ ಹೋಗಿ ಸೇರಿದರೆ, ಜಾಗ್ರತೆಯಾಗಿಯೇ ಗುಣವಾಗಬಹು ದೆಂದು ನಂಬಿಕೆ. ಸುನಂದೆ-ಗದ್ದ ದಸ್ವರದಿಂದ ' ಅಪ್ಪ ! ಅಲ್ಲಿಂದ ನಿಂದೆಯೊಡನೆ ಹೊರಟು ಬಂದ ನಾನು, ಈಗ ಅವಳನ್ನು ಕಳೆದುಕೊಂಡು ಹೋಗಬೇಕಾ ಯಿತು. ಹೀಗಾಗುವುದೆಂದು ಕನಸಿನಲ್ಲಾದರೂ ತಿಳಿದಿರಲಿಲ್ಲ ! ಅಧಿಕಾರಿ-ತಾಯಿಾ ! ಕಳವಳಿಸಬಾರದು, ದೈವಕೃಪೆಯಿಂದ ಎಲ್ಲವೂ ಅನುಕೂಲಿಸುವುದು ; ಸಮಾಧಾನದಿಂದಿರು.
ಪುಟ:ದಕ್ಷಕನ್ಯಾ .djvu/೧೬೪
ಗೋಚರ