ಪುಟ:ದಕ್ಷಕನ್ಯಾ .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಸ ತಿ ಹಿ ತ ಷಿ ಣಿ ಸುನಂದ-ಹಾಗೆಂದೇ ಧೈರವನ್ನು ಹಿಡಿದಿರುವೆನು. ಆದರೂ ಒಂದೊಂದು ಬಾರಿ ಮಿತಿಮೀಾರಿ ಬರುವದು. ಅಧಿಕಾರಿ ನೀವು ಮುಂದೆ ಹೊರಡುವುದಾವಾಗ ? ಸುನಂದೆ-ಈಗಲೇ ಹೋಗಬೇಕೆಂದು ಆಳುಗಳು ಹಟತೊಟ್ಟಿರುವರು. ನನಗೆಮಾತ್ರ ಮನಸ್ಸು ಹಿಂತೆಗೆಯುತ್ತಿರುವುದು. ಅಧಿಕಾರಿ-ಹೊರಟರೆ ಪ್ರಮಾದವೇನೂ ಕಾಣುತ್ತಿಲ್ಲ. ಇರಲಿ ; ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡಿದ್ದು ಬಳಿಕ, ಹೊರಡುವೆ ; ಒಳಗೆ ನಡೆ. ಮೋಹನ_' ಅಪ್ಪಯ್ಯ ! ಈಗ ನಾನು ಹೋಗಲೊಲ್ಲೆ ; ನಿನ್ನಲ್ಲಿಯೇ ನಿಲ್ಲುವೆನು. ಅಧಿಕಾರಿ ಹಾಗೆಯೇ ಮಾಡು.” ಸುನಂದೆಯ ಕಡೆಗೆ ತಿರುಗಿ- ಸುನಂ ದಾ ! ಪಯಣಕಾಲದಲ್ಲಿ, ಹಾಗೂ ಈ ಅವೇಳೆಯಲ್ಲಿ, ಮಗು ವನ್ನು ಹೀಗೆ ಕರೆತಂದಿರುವದೂ, ನೀನೂ ಶಾಖವಾಗಿ ಹೊದ್ದಿ ರದೆ, ಗಾಳಿಗೆ ಮೈಯೊಡ್ಡಿ ನಿಂತಿರುವುದೂ ದೇಹಕ್ಕೆ ಅಪಾಯಕರ ವಲ್ಲವೇ ? ಇರಲಿ ; ಈಗ ಹಾಗೆಯೇ ಒಳಗೆ ನಡೆ, ಸ್ವಲ್ಪ ಹೊತ್ತು ವಿಶ್ರಮಿಸಿದ್ದು, ಆ ಬಳಿಕ ಸರಿಯಾದ ರೀತಿಯಿಂದ ಹೊರಡ ಬಹುದು, ಸುನಂದೆಯು ಸಮ್ಮತಿಸಿ, ಮಗನೊಡನೆ ಗುಡಾರದೊಳಹೊ ಕ್ಕಳು, ಗೋಪಾಲನು ತ್ವರೆಯಿಂದೋಡಿಬಂದು, ' ಸ್ವಾಮಿ ! ಇದೇ ನಿದು ? ಹೀಗೆ ಅವರನ್ನು ನಡುದಾರಿಯಲ್ಲಿಳಿಸುವುದು ಸರಿಯಲ್ಲ. ಹೊತ್ತು ಮಾರುತ್ತಿದೆ. ಗೊತ್ತಾದಸ್ಥಳಕ್ಕೆ ಹೋಗಿ-ತಂಗಬೇಕಲ್ಲದೆ, ಯಜಮಾನರ ಮಾತಿಗೆ ವಿರೋಧವಾಗಿ ನಡೆಯಲು, ನಾವು ಸಮ್ಮತಿಸಲಿಕ್ಕಿಲ್ಲ. ಜಾಗ್ರತೆ ಯಾಗಿ ಕಳುಹಿರಿ.' ಅಧಿಕಾರಿ--ದರ್ಪದಿಂದ ' ಏನೆಂದೆ ? ಸಮ್ಮತಿಸಲಿಕ್ಕಿಲ್ಲ ! ಹುಚ್ಚ ! ಚೆನ್ನಾಗಿ ಯೋಚಿಸಿ ಮಾತನಾಡು, ಬಂಡಿಯಬಳಿಯಲ್ಲಿ ಕಾದಿರು