ಪುಟ:ದಕ್ಷಕನ್ಯಾ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೧೫೩ ನಡೆ, ಅಷ್ಟೇ ನಿನ್ನ ಕೆಲಸವಲ್ಲದೆ, ಮಾರಿ ಹೇಳುವುದು ಸರಿಯಾ ಗಿಲ್ಲ. ಹಾಗೂ ಮರಾದೆಯನ್ನು ಮಾರಿದರೆ, ನೀನೊಬ್ಬನೇ ಗೊತ್ತಾದೆಡೆಗೆ ಹೊರಟುಹೋಗು, ನಾವು ನಮ್ಮೊಡನೆಯೇ ಇವ ರನ್ನು ಕರೆದೊಯ್ಯುವೆವು. ಗೋಪಾಲ-ಭ್ರಾಂತನಾಗಿ ' ಸ್ವಾಮಿಾ ! ಇಷ್ಟೇಕೆ ಆಗ್ರಹಿಸುವಿರಿ ? ಊಳಿಗದವರಾದ ನಾವು, ನಮ್ಮ ಪಾಲಿಗೆ ಬಂದ ಕೆಲಸವನ್ನು ಸರಿ ಯಾಗಿ ನಡೆಯಿಸಬೇಕಲ್ಲವೇ ?' ಅಧಿಕಾರಿ-ನಿಜ, ಆಗ್ರಹಿಸಲಿಲ್ಲ, ನಿನ್ನ ಕೆಲಸವನ್ನು ಮಾಡಬೇಕಾ ದರೂ, ಮಾನ-ಮತ್ಯಾದೆಗಳನ್ನು ತಿಳಿದು ಮಾಡಬೇಕೆಂದೇ ನಿನಗೆ ಹೇಳಿದೆನು. ಗೋಪಾಲ - ಅವರು ಬರುವುದಕ್ಕೆ ಇನ್ನೂ ಎಷ್ಟು ಹೊತ್ತು ಹಿಡಿಯ ಬಹುದು ? ಅಧಿಕಾರಿ-ಅರ್ಧಘಂಟೆಯಾದರೂ ಬೇಕು, ಹೋಗು ; ಬಂಡಿಯಬಳಿ ಯಲ್ಲಿರು, (ಗೋಪಾಲನು ಮರುಮಾತಾಡಲು ಧೈದ್ಯವಿಲ್ಲದೆ, ಬಂಡಿಯಬಳಿಗೆ ಹೊರಟುಹೋದನು.) ಅಧಿಕಾರಿ-ತನ್ನ ಸೇವಕನನ್ನು ಕರೆದು ' ರಣಸಿಂಗ್ ! ಇಲ್ಲಿಯೇ ಕಾದಿರು. ಸುನಂದಾದೇವಿಯು, ವಿಶ್ರಾಂತಿಹೊಂದಿ ಬರುವವರೆಗೂ, ಯಾರ ನ್ಯೂ ಒಳಗೆ ಬಿಡಬೇಡ.' ಎಂದು ಕಟ್ಟುಮಾಡಿ, ತಾನೂ ಗುಡಾರ ದೊಳಕ್ಕೆ ಹೊರಟುಹೋದನು.