ಪುಟ:ದಕ್ಷಕನ್ಯಾ .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಪರಿಚ್ಛೇದ. K (ಐಂದ್ರಜಾಲ ) ಹನ್ನೆ ರಡುಘಂಟೆ ಹೊಡೆದುಹೋಯಿತು. ಹೊರಬೇತೀರಬೇ ಎಸಿ ಕೆಂದು ಹಟತೊಟ್ಟಿರುವೆಯಾಗಿ, ಇನ್ನು ವಿಳಂಬಿಸಬಾರದು ; %9535. ಸಹಾಯಕ್ಕೆ ಬೇಕಾದರೆ, ನಮ್ಮವರನ್ನೂ ಕರೆದುಕೊಂಡು

    • ಹೊರಡು.'

“ ಏಕೆ ? ಈಗೆ ಬಂದಿರುವವರೇ ಸಾಕು, ಬರತಕ್ಕುದನ್ನು ಯಾರಿ ದರೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಭಗವತ್ಯವೆಯೊಂದಿದ್ದರೆ, ಯಾರೂ ಬರಬೇಕಾದುದಿಲ್ಲ, ಇದೇ ನನ್ನ ಮನೋಗತವಾಗಿದೆ.' “ ಅದು ಸರಿಯಾದ ಮಾತು, ಇನ್ನು ಹೊರಡು, ಸರ್ವಾಂಗವೂ ಶಾಖವಾಗಿರುವಂತೆ, ಶಾಲನ್ನು ಹೊದ್ದು, ಗಾಡಿಯನ್ನೇರಬೇಕು, ದಾರಿ ಯಲ್ಲಿ ಮತ್ತೆಲ್ಲಿಯೂ ಇಳಿಯಬೇಕಾದುದಿಲ್ಲ, ನೆಟ್ಟನೆ ಊರನ್ನೇ ಸೇರಲು ನಿಶ್ಚಯಿಸಿರಿ, ನಾವೂ ನಾಲ್ಕಾರುದಿನಗಳಲ್ಲಿ ಬಂದು ಸೇರುವೆವು, ಎಚ್ಚ ರಿಕೆಯಲ್ಲಿ ನೋಡುತ್ತಿರಬೇಕು.” ಹೀಗೆ ತಂದೆಯಿಂದಪ್ಪಣೆಗೊಂಡ ಸುನಂದೆಯು, ಮಗನೊಡನೆ, ತಂದೆಯ ಸಲಹೆಯಂತೆ ಹೊದಿಕೆಯಿಂದ ದೇಹವನ್ನು ಮರೆಯಿಸಿ, ಮೆಲ್ಲನೆ ಬಂದು ಬಂಡಿಯನ್ನೇರಿ ಕುಳಿತಳು ರಣಸಿಂಗನು ಪೆಟ್ಟಿಗೆಯೊಂದನ್ನು ತಂದು, ಸುನಂದೆಯ ವಶಕ್ಕೊಪ್ಪಿಸಿದನು. ಅವಳ ತಂದೆಯಾದ ಅಧಿಕಾ ರಿಯು, ಗೋಪಾಲನನ್ನು ಕುರಿತು ' ಅಯ್ಯ ! ಎಲ್ಲಿಯೂ ನಿಲ್ಲದೆ, ಜಾಗ ರೂಕತೆಯಿಂದ ಪಯಣಮಾಡಬೇಕು, ಇನ್ನು ಹೊರಡಿರಿ.' ಗೋಪಾಲನು, ಸಂತೋಷದಿಂದ ಬಂಡಿಯಮೇಲೆ ಹಾರಿ ಕುಳಿತು, ಕುದುರೆಗಳ ಬೆನ್ನು ತಟ್ಟಿ ಹುರುಡಿಸಿದನು, ಕುದುರೆಗಳೂ ನಾಗಾಲೋಟ