ಪುಟ:ದಕ್ಷಕನ್ಯಾ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ದ ಕ ಕ ನ್ಯಾ ದಿಂದ ಹೊರಟವು. ಒಂದು ಗಂಟೆಯೊಳಗಾಗಿಯೇ ಮುಳ್ಳುಮೆಳೆಯ ಚೌಕವು ಸವಿಾಪಿಸಿತು ; ಬಂಡಿಯೊಳಕ್ಕೆ ಕಲ್ಲುಗಳೂ ಬಿದ್ದುವು, ಸುನಂ ದೆಯು ಮೋರೆಗೆ ಮುಸುಕಿಟ್ಟು, ಕಂಪಿತಸ್ವರದಿಂದ ಗೋಪಾಲ ! ಇದೇ ಆ ಸ್ಥಳವು ! ಇಲ್ಲಿಯೇ ನನ್ನ ವಿಂದೆ ಕಳುವಾದುದು ? ಅಯ್ಯೋ ! ಕಷ್ಟ ! ಕಷ್ಟ !!! ಕಲ್ಲುಗಳು ಬೀಳುತ್ತಿವೆ ; ಮುಂದೇನುಗತಿ ?” ಎಂದು ಹೇಳುತ್ತ ಬಂಡಿಯ ಕದಗಳನ್ನು ಬಲವಾಗಿ ಹಾಕಿದಳು. ಗೋಪಾಲ-ಬಂಡಿಯಿಂದಿಳಿದು, ಕೈಕೊಡಲಿಯನ್ನು ಮೇಲಕ್ಕೆತ್ತಿ 'ಅಯ್ಯ ಯ್ಯೋ ! ಕಳ್ಳರು !! ಕಳ್ಳರು 111 ” ಎಂದು ಕೂಗುತ್ತ, ಕ್ಷಣಮಾ ತ್ರದಲ್ಲಿಯೇ ಕುದುರೆಗಳನ್ನು ಕಳೆದುಬಿಟ್ಟನು. ಅವನು ಇಳಿದು ದನ್ನು ಕಂಡೊಡನೆಯೇ, ಅವನ ಜತೆಯಾಳುಗಳೂ ಕೆಳಗೆಧುಮ್ಮಿಕ್ಕಿ* ಪ್ರಾಣಾಪತ್ತು! ಅಯ್ಕೆ ಪ್ರಾಣಾಪತ್ತು!!” ಎಂದು ಕೂಗುತ್ತ ಬಂಡಿಯನ್ನು ಸುತ್ತಿದರು. ಅಷ್ಟಾದರೂ ಬಂಡಿಯಲ್ಲಿದ್ದವರು ಕೂಗಲಿಲ್ಲ ; ಬಾಗಿಲನ್ನೂ ತೆಗೆಯಲಿಲ್ಲ, ಒಳಗೆ ಅಡಗಿ ಏನು ಮಾಡುವರೆಂಬುದೇ ಯಾರಿಗೂ ತಿಳಿಯಲಿಲ್ಲ. ಗೋಪಾಲನು, ಕುತೂಹಲದಿಂದ ಬಾಗಿಲನ್ನು ಹಿಡಿದಳೆದನು ; ಬರಲಿಲ್ಲ, ಕೋಪ ದಿಂದ ಕೂಗಿ, ಹೇಳಿದನು,-' ಬಾಗಿಲನ್ನು ತೆರೆದು, ಕೆಳಗಿಳಿದು నిల్లు.' ಉತ್ತರ-ಇಳಿಯಬೇಕಾದ ವೇಳೆಯು ಬರುವುದು, ಈಗಲೇ ಏಕೆ ? ಗೋಪಾಲ-ಹಾಗೋ ? ಬಂಡಿಯಿಂದಿಳಿದರೆ ಜೀವವುಳಿದರೂ ಉಳಿದೀತು. ಇಲ್ಲವಾದರೆ, ನಿಜವಾಗಿಯೂ ಸಾಯುವಿರಿ. ಉತ್ತರ-ಹುಚ್ಚರು ಹೇಳುವುದೇ ಹೀಗಲ್ಲವೇ ? ಆಗಲಿ. ಗೋಪಾಲನು ಸುತ್ತಲೂನೋಡುತ್ತ ಶಿಳ್ಳೆಯನ್ನು ಹಾಕಿದನು. ಶಿಳ್ಳೆಯ ಸದ್ದು ನಿಲ್ಲುವುದರೊಳಗಾಗಿ, ಮುಳ್ಳುಮೆಳೆಯ ಮರೆಯಲ್ಲಿ ಅಡಗಿದ್ದ ೨೦ ಮಂದಿ ಕಳ್ಳರು ಹಾರಿಬಂದು, ಕೋಲಾಹಲದಿಂದ ಬಂಡಿ