ಪುಟ:ದಕ್ಷಕನ್ಯಾ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ೧ ಸ ತಿ ಹಿ ತೈ ಷಿ ಣಿ ಧರ್ಮಪಾಲ-ಕೈಯೆತ್ತಿ • ಆಪ್ತರೇ ! ಈ ವಿದ್ರೋಹಿಗಳ ಕೈಕಾಲುಗ ೪ಗೆ ಸಂಕಲೆಗಳನ್ನು ತೊಡಿಸಿರಿ, ಈ ಅಧಮಾಧಮನಾದ ಗೋಪಾ - ಲನನ್ನು, ಹಿಂಗಟ್ಟು-ಮುಂಗಟ್ಟುಗಳಿಂದ ಬಿಗಿದು, ಬಂಡಿಯಲ್ಲಿ ಹಾಕಿರಿ. ಎಲ್ಲಿ ? ಬಂಡಿಗಳೂ, ಬೇಡಿಗಳೂ ಬೇಗ ಬರಲಿ.' ಧರ್ಮಪಾಲನ ಆಜ್ಞೆಯಾದ ನಾಲ್ಕಾರುನಿಮಿಷಗಳಲ್ಲಿಯೇ ಬಂದಿದ್ದ ಭಟರು, ಒಬ್ಬೊಬ್ಬ ಕಳ್ಳನಿಗೂ ಇಬ್ಬಿಬ್ಬರಂತೆ ಮುತ್ತಿ, ದೊಣ್ಣೆ ಗಳನ್ನು ಕಸಿದು, ಕೈಕಾಲುಗಳಿಗೆ ಬೇಡಿಗಳನ್ನು ತೊಡಿಸಿದರು. ಅಷ್ಟರ ಲ್ಲಿಯೇ ಬಂಡಿಗಳೂ ಬಂದು ಸೇರಿದುವು, ಕೈಕಾಲುಮುರಿದು, ಗಾಯಗೊಂ ಡಿದ್ದವರು ಬಂಡಿಯೊಳಗೆ ಹಾಕಲ್ಪಟ್ಟರು. ಗೋಪಾಲನ ಅವಸ್ಥೆಯನ್ನು ಹೇಳುವಂತಿರಲಿಲ್ಲ. ಬಲಗೈ ಸುಟ್ಟು ಹೋಗಿ, ಯಾತನಾವೇಗದಿಂದ ಕ್ಷಣ ಕ್ಷಣಕ್ಕೂ ಮೂರ್ಛಿತನಾಗುತ್ತಿದ್ದನು. ಹಾಗೆಯೇ ಭಟರು, ಅವನ ಕೈಯಲ್ಲಿ ರಕ್ತವು ಸುರಿಯದಂತೆ ತಡೆಕಟ್ಟಿ, ಬಂಡಿಯಲ್ಲಿ ಮಲಗಿಸಿದರು. ಧರ್ಮಪಾಲನು ಸಂಭ್ರಮದಿಂದ ಕೃತಾಂತನ ಕೈಹಿಡಿದು ' ಕೃತಾಂತ ! ನಿನ್ನ ಸಾಹಸ-ಕರಕೌಶಲಾದಿಗಳು ಸ್ತುತ್ಯಗಳಾಗಿವೆ, ನೀನು ನಿಜವಾದ ಕೃತಾಂತನೇ ಸರಿಯೆಂದು ಭಾವಿಸುತ್ತೇನೆ.' ಕೃತಾಂತ-ಸಂಕುಚಿತಭಾವದಿಂದ ತಲೆಬಾಗಿ, ' ಇದೇಕಿಷ್ಟರಸ್ತುತಿ ? ಗುರುದತ್ತವಾಗಿ ಬಂದ ವಿದ್ಯೆಯನ್ನು, ಗುರುಸಮ್ಮುಖದಲ್ಲಿ ತೋರಿ ಸುವುದು ತಪ್ಪೇನು ? ಈಗ ನಾನು ಮಾಡಿರುವ ಅದ್ಭುತಕಾರವಾ ದರೂ ಏನಿದೆ ? ಕೃತಾಂತನಾಗಬೇಕಾದರೆ, ಉದ್ದೇಶವೆಲ್ಲವೂ ಕೈಸೇರಿದ ಬಳಿಕಲ್ಲವೇ ?? ಧರ್ಮಪಾಲ-- ಕೃತಾಂತನ ಬೆನ್ನು ತಟ್ಟಿ, ಭಲೆ ! ಮೇಲುಮಾತು ; ಒಪ್ಪಿ ದೆನು, ಆಗಲಿ ; ಇಂದಿನ ಐಂದ್ರಜಾಲವೇನೂ ಅಷ್ಟು ಹೆಚ್ಚಾದು ದಲ್ಲ, ಮುಂದಕ್ಕಿದೆ; ನೋಡುವ, ಇನ್ನು ಇಂದಿಗೆ ಇಷ್ಟು ಸಾಕಾ ಗಿರಲಿ.' ಎಂದು ಹೇಳಿ, ಬಂದ ಬಂಡಿಯಲ್ಲಿಯೇ ಇಬ್ಬರೂ ಕುಳಿತು,