ಪುಟ:ದಕ್ಷಕನ್ಯಾ .djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ದಶಮಪರಿಚ್ಛೇದ. ARYan ೦==0 (ದ್ವೇಷಸಾಧನೆ ) ಸೆದರಿ ಯರೇ : ಗೃಹಸ್ವಾಮಿನಿಯು ಇಲ್ಲದಿದ್ದರೆ, ಆ ಗೃಹದ ಕಾಂತಿಯೇ ಕುಂದುವುದಲ್ಲವೇ ? ಹಾಗೆಯೆ ನಮ್ಮ ಸುನಂದೆಯು ಇಲ್ಲದಿರುವುದರಿಂದ, ಲಕ್ಷ್ಮಿ ನಿಲಯದ ಶೋಭೆಯೇ ಅದೃಶ್ಯವಾಗಿದೆ. ಅವಳು, ತಾಯಿಯನ್ನು ನೋಡಲು, ಪ್ರಯಾಣಮಾಡಿ ಇಂದಿಗೆ ಹದಿನಾಲ್ಕು ದಿನಗಳು ಕಳೆದುಹೋದುವು. ಮನೆಯಲ್ಲಿ ಯಾರ ಮುಖದಲ್ಲಿಯ-ಉತ್ಸಾಹವೆಳ್ಳಷ್ಟೂ ಕಾಣುತ್ತಿಲ್ಲ. ಒಬ್ಬೊಬ್ಬರ ಮುಖದಲ್ಲಿಯೂ, ಒಂದೊಂದು ಚಿಂತೆಯಾವರಿಸಿದ್ದಂತೆ ತೋರುತ್ತಿದೆ. ತಾರಾಪತಿರಾಯನ ಸ್ಥಿತಿಯನ್ನು ಹೇಳುವಂತೆಯೇ ಇಲ್ಲ. ಪತ್ನಿಯು ಹೊರಟುಹೋದುದು ಮೊದಲು, ಈತನು ಲಕ್ಷ್ಮಿ ನಿಲಯದ ಕಡೆಗೆ ತಿರುಗಿ ನೋಡಿದವನಲ್ಲ. ಅಲ್ಲಿಯ ಬಾಗಿಲುಗಳೆಲ್ಲಕ್ಕೂ ಬೀಗಹಾಕಿ ಭದ್ರಮಾಡಿರುವರು. ಒಳಗೆ ಯಾರ ಸುಳಿವೂ ಇರುವಂತಿಲ್ಲ. ತಾರಾಪತಿರಾಯನು ಅಡಿಗಡಿಗೂ ವತ್ರನನ್ನು ನೆನೆನೆನೆದು ಕಳವ ಳಿಸುತ್ತ, ಪತ್ನಿ ಯನ್ನು ಬೇಗ ಕರೆತರಲು ಹೋಗಬೇಕೆಂದು ಯೋಚಿಸುತ್ತಿ ದೈನು, ಇದಕ್ಕಾಗಿ ಬಹು ಪ್ರಯಾಸದಿಂದ ಅವಕಾಶರೊಂದಿ, ನಾಳೆಯೇ ದುರ್ಗಾಪುರಕ್ಕೆ ಹೊರಡುವುದಾಗಿ ನಿಶ್ಚಯಿಸಿರುವನು. ಸಾಮಾನ್ಯವಾಗಿ, ಯಾರೇ ಆಗಲಿ-ಎಲ್ಲಿಗಾದರೂ ಹೊರಡಬೇ ಕೆಂದರೆ, ಮೊದಲುದಿನದಿಂದ ಊಟ-ನಿದ್ರೆಗಳೂ ಬೇಕಾಗುವುದಿಲ್ಲವಷ್ಟೆ ! ಹಾಗೂ, ಮಾವನ ಮನೆಯ ಕಡೆಗೆ, ಹದಿನೈದು ವರ್ಷಗಳಿಂದ ಹೋಗ