ಪುಟ:ದಕ್ಷಕನ್ಯಾ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ಸ ತಿ ಹಿ 3 ಷಿ ಣಿ ಮಲಗಿದೆನು ; ಈಗಲೇ ಎಚ್ಚರವಾದುದು, ನಿಮ್ಮ ಹೊಸ ಪದ್ಧತಿ ಯನ್ನು ನಾನು ತಿಳಿದಿಲ್ಲವಾದುದರಿಂದ ಬಾಗಿಲನ್ನು ಹಾಕಿ ಮಲ ಗಿದ್ದೆನು. ಇದರಲ್ಲಿ ತಪ್ಪೇನು ? ತಾರಾಪತಿ- ತಲೆದೂಗಿ ಅದರಲ್ಲಿ ತಪ್ಪೇನೂ ಇರುವುದಿಲ್ಲ; ಹಾಗೆಯೇ ಮಾಡಬೇಕು, ಆದರೆ, ಬೀದಿಯ ಬಾಗಿಲನ್ನು ಮಾತ್ರ ತೆರೆದು ಹಾಕಿದ್ದವರು ಯಾರೆಂಬುದೇ ತಿಳಿಯಲಿಲ್ಲ.' ಗಂಗೆ--ಕೋಳಿ ಕೂಗುತ್ತಿದೆ. ಯಾರೋ ಎದ್ದು ಹೋಗಿರಬೇಕು. ಆ ವಿಚಾರವೇ ನನಗೆ ತಿಳಿಯಲು ಕಾರಣವಿಲ್ಲವಷ್ಟೆ ! ತಾರಾಪತಿ--'ಹೊರಗೆ ಹೋಗುವವರು ಬಾಗಿಲನ್ನು ಬರಿದೆ ಹಾಕಿರಬೇಕು ; ಇದರಲ್ಲಿ ನನಗೇನೋ ಸಂಶಯವುಂಟಾಗುತ್ತಿದೆ. ಇರಲಿ ; ಪರೀ ಕ್ಷಿಸುವೆನು.' ಎಂದು ಹಿಂತಿರುಗಿದನು. ಗಂಗೆಯ ಬಾಗಿಲನ್ನೆ ಳೆದು ಹೊರಗೆ ಬೀಗಹಾಕಿ, ಪತಿಯ ಹಿಂದೆ ಹೊರಟಳು. - ಇಬ್ಬರೂ, ಉಪ್ಪರಿಗೆಯಿಂದಿಳಿದುಬಂದು, ಹಿತ್ತಿಲ ಕಡೆಯ ಮನೆಗೆ ಬಂದರು. ಅಲ್ಲಿಯೇ ಯಶವಂತನೂ, ಉಳಿದವರೂ ಮಲಗುತ್ತಿ ದ್ದರು, ತಾರಾಪತಿರಾಯನು ನೋಡಿದನು ; ಬಾಗಿಲಚಿಲಕವು ಹೊರಗಡೆ ಸಿಲುಕಿದ್ದುದನ್ನು ಕಂಡು, ಕುತೂಹಲದಿಂದದನ್ನು ತೆಗೆದು, ಕಿರುಮನೆಯೊ ಳಹೊಕ್ಕು ನೋಡಿದನು. ಎಲ್ಲರೂ ದೇಹಸ್ಮರಣೆಯಿಲ್ಲದೆ ಮಲಗಿ ಗೊರಕೆ ಗಳನ್ನು ಹೊಡೆಯುತ್ತಿದ್ದರು, ತಾರಾಪತಿರಾಯನು ವಿಸ್ಮಿತನಾಗಿ ಕೂಗಿ ಹೇಳಿದನು,-" ಏನಿದು, ನಿದ್ರೆ ! ಹೀಗೂ ಮಲಗುವ ಪರುಷರುಂಟೇ ? ಚೆನ್ನಾಗಿದೆ ! ಬೀದಿಯ ಬಾಗಿಲನ್ನು ಹಾಕದೆಯೇ ಮಲಗಿದಿರೇನು ?' ಯಶವಂತ-ತೇಜೋಹೀನನಾಗಿ ತತ್ತರಗೊಳ್ಳುತ್ತ ತೊದಲು ನಾಲಿಗೆ ಯಿಂದ-' ಹಾಗೆಂದರೇನು ? ನಾನು, ಮಲಗುವುದಕ್ಕೆ ಮೊದಲು ಬಾಗಿಲುಗಳೆಲ್ಲವನ್ನೂ ಹಾಕಿಯೇ ಬಂದು, ಮಲಗಿದೆನು; ಇನ್ನೂ ಎದ್ದು ಹೋಗಿಲ್ಲ.'