ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Lಶಿ ದ ಕ ಕ ನಾ ತಾರಾಪತಿ - ತಲೆದೂಗುತ್ತ “ ಹೂಂ ! ಆಗಲಿ ; ಏನೇನಾಗುವುದೋ ಆಗಲಿ.” ಎಂದು ಹೇಳುತ್ತ, ಅಲ್ಲಿಂದ ಹೊರಟು, ಯಮುನೆಯ ಕಿರುಮನೆಗೆ ಬಂದು ನೋಡಿದನು. ಯಮುನೆಯಾಗಲೀ, ಅವಳ ಸಾಮಗ್ರಿಗಳಾಗಲೀ ಅಲ್ಲಿರಲಿಲ್ಲ. ಜಮೀನ್ದಾರನಿಗೆ ಸಂಶಯವುಂ ಟಾಯಿತು. ಗಂಗೆಯೊಡನೆ, ತಾಯಿಯ ಕಿರುಮನೆಗೆ ಬಂದು ನೋಡಿದನು. ಕದವು ತೆರೆದಿದ್ದಿತು ; ದೀಪವೂ ಇರಲಿಲ್ಲ. ಅಷ್ಟ ರಲ್ಲಿಯೇ, ಯಶವಂತನು ಲಾಂದ್ರವನ್ನು ತಂದನು. ಜಮಾನಾ ರನು ಪತ್ನಿಯೊಡನೆ ಕಿರುಮನೆಯೊಳಹೊಕ್ಕು ನೋಡಿದನು. ಚಂದ್ರ ಮತಿಯ ಕೈಕಾಲುಗಳಿಗೆ ಹಗ್ಗವು ಬಿಗಿಯಲ್ಪಟ್ಟು, ಬಾಯಿಗೆ ಬಟ್ಟೆ ತುರುಕಲ್ಪಟ್ಟಿದ್ದಿತು. ಪಾಪ ! ಚಲಿಸಲಿಕ್ಕಾಗಲೀ, ಉಸಿ ರಾಡಲಿಕ್ಕಾಗಲೀ ಆಗದೆ-ಚಂದ್ರಮತಿಯು, ಉತ್ಮ ಮಣಾವಸ್ಥೆ ಯಲ್ಲಿ ಬಿದ್ದಿದ್ದಳು. ಗಂಗೆ--ಅತ್ತೆಯನ್ನು ನೋಡಿದಕೂಡಲೇ ಆರ್ತಸ್ವರದಿಂದ-- ಅಯ್ಯೋ ! ಅನರ್ಧ ! ಅನರ್ಧ !! ' ಎಂದು ಕೂಗುತ್ತ-ಅತ್ತೆಯ ಬಳಿಯಲ್ಲಿ ಕುಳಿತು, ಕೈ ಕಾಲು ಬಾಯಿಗಳ ಕಟ್ಟನ್ನು ಬಿಚ್ಚಿದಳು ತಾರಾಪ ತಿರಾಯನೂ, ವಾಕ್ಯಕ್ತಿ ಶೂನ್ಯನಾಗಿ, ತಾಯಿಗೆ ಶೈತ್ಯೋಪಚಾರ ಮಾಡಲಾರಂಭಿಸಿದನು. ಈ ಬಗೆಯಾದ ಮಗ-ಸೊಸೆಯರ ಉಪಚಾರಗಳಿಂದ ಚಂದ್ರ ಮತಿಯು, ಕಾಲುಗಂಟೆಯೊಳಗಾಗಿ ಚೇತರಿಸಿಕೊಂಡು ಮೆಲ್ಲನೆದ್ದು ಕುಳಿತು, ಸುತ್ತಲೂ ನೋಡಿದಳು, ಮುಂದೆ ಕುಳಿತಿದ್ದಿ ವರನ್ನೂ, ಬಾಗಿಲಬಳಿ ನಿಂತಿದ್ದ ಯಶವಂತನನ್ನೂ ನೋಡಿ, ಕುಗ್ಗಿದ ದನಿಯಿಂದ ಕೇಳಿದಳು, “ ಮಗು ! ಮನೆಯಸ್ಟಿತಿ, ಏನಾಗಿದೆ ? ಇನ್ನು ಯಾರಿಗೂ ಏನೂ ಆಗಿಲ್ಲವಷ್ಟೆ ?' ತಾರಾಪತಿ -- ಯಾರಿಗೂ ಏನೂ ಆಗಿಲ್ಲ, ನಿಮ್ಮ ದೇಹಸ್ಥಿತಿ, ಹೇಗಾಗಿದೆ? ಚಂದ್ರಮತಿ-ಆಗುವುದೇನು ? ಮೂಗಿನ ರಂಧ್ರಗಳಲ್ಲಿಯೂ, ಗಂಟಲು, ತಲೆಯ ಮಿದಳು, ಹೊಟ್ಟೆಗಳಲ್ಲಿಯ ಉರಿಗಾಣುತ್ತಿದೆ. ಅಷ್ಟೆ !