ಪುಟ:ದಕ್ಷಕನ್ಯಾ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷ ಆ ನಾ ೧೬೫ ಟನು, ಯಶವಂತನೂ, ಹಿಂದೆಯೇ ನಡೆತಂದನು. ಎಲ್ಲರೂ ಬೀದಿ ಯಬಳಿಗೆ ಬಂದು, ಬಾಗಿಲನ್ನು ತೆರೆದು ನೋಡಿದರು, ವಿಷಕಂ ರನು, ಜಗಲಿಯಮೇಲೆ ಕುಳಿತು, ಭ್ರಾಂತನಂತೆ ಮೇಲೆನೋಡು ತಿದ್ದನು. ಯಮುನೆಯು, ಶಂಕಾತಂಕಗಳಿಂದ ಕಳವಳಿಸುತ್ತವೆ ಆಗಲೇ ಪ್ರಾಕಾರದ ಬಾಗಿಲನ್ನು ತೆರೆದುಕೊಂಡು ಬಂದು, ಹಂತದ ಬಳಿಯಲ್ಲಿ ನಿಂತಳು. ಇವರಿಬ್ಬರ ಮುಖವನ್ನೂ ನೋಡಿ, ಜಮೀ ನ್ಯಾರನು ಕಿಡಿಕಿಡಿಯಾಗಿ ಕೇಳಿದನು, ಎಲ್ಲಿಗೆ ಹೋಗಿದ್ದೆ ? ಯಮುನೆ !? ಯಮುನೆ – ಪುಷ್ಕರಣಿಗೆ ಹೋಗಿದ್ದೆ. ತಾರಾಪತಿ-ಯಾವಮಾರ್ಗವಾಗಿ ಹೋಗಿದ್ದೆ ? ಯಮುನೆ- ಹಿತ್ತಿಲಬಾಗಿಲಿಂದಲೇ ಹೋದೆನು. ತಾರಾಪತಿ-ಹಾಗಾದರೆ, ಹಿತ್ತಿಲದಾಗಿಲನ್ನು ಹಾಕಿದ್ದವರಾರು ? ಈ ಬಾಗಿಲನ್ನು ತೆರೆದುಹೋದವರಾರು ? ಯಮುನೆ-ಚಕಿತೆಯಾಗಿ ' ಬೀದಿಯಬಾಗಿಲನ್ನು ತೆರೆದವರಾರೋ ನನಗೆ ತಿಳಿಯದು, ನಾನು ಎಂದಿನಂತೆ ಈ ದಿನವೂ ಪುಷ್ಕರಣಿಗೆ ಹೋಗಿ ಮತ್ತೆ ಬಂದು ನೋಡುವಷ್ಟರಲ್ಲಿ, ಹಿತ್ತಿಲಬಾಗಿಲನ್ನು ಯಾರೋ ಹಾಕಿದ್ದರು. ಕೂಗಿಕೂಗಿ ಸಾಕಾದೆನು. ಬಾಗಿಲನ್ನು ಯಾರೂ ತೆರೆಯಲಿಲ್ಲವಾದುದರಿಂದ ಹಿತ್ತಿಲ ಹೊರಬಾಗಿಲಿಂದ ಹೊರಟು, ಈ ಕಡೆಯಲ್ಲಿ ಬಂದೆನು. ಇಷ್ಟಲ್ಲದೆ ನನಗಿನ್ನಾವುದೂ ತಿಳಿಯದು. ತಾರಾಪತಿ-ವಿಷಕಂ ! ನೀನೂ ಇಲ್ಲಿರದೆ ಎಲ್ಲಿಗೆ ಹೋಗಿದ್ದೆ ? ವಿಷಕಂಠ-ಮಹಾಸ್ವಾಮಿ ! ನಾನು ಇಲ್ಲಿಯೇ ಮಲಗಿದ್ದೆನು, ಆದರೆ ಎಚ್ಚರವಾಗಿ ಕಣ್ಣೆರೆದು ನೋಡಿದಾಗ-ಪ್ರಾಕಾರದ ಆಚೆ, ಚರಂಡಿ ಯಲ್ಲಿ ಬಿದ್ದಿದ್ದೆನು. ಹೀಗಾಗಲು ಕಾರಣವೇನೆಂಬುದನ್ನು ತಿಳಿಯದೆ ಇದೇನೊ ವಿಪರೀತವಾಗಿದೆಯೆಂದೂ, ಇದನ್ನು ಸನ್ನಿಧಾನಕ್ಕೆ ಅರಿ