ಪುಟ:ದಕ್ಷಕನ್ಯಾ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧LL 4 ತಿ ಹಿತ್ಯ ಸಿ ಣಿ ಕೆಮಾಡಬೇಕೆಂದೂ ಆತುರದಿಂದ ಬಂದು ಇಲ್ಲಿ ಕುಳಿತೆನು, ನನಗಿ ನ್ಯಾವುದೂ ತಿಳಿಯದು. ಯಶವಂತ-ಇರಲಿ ; ಅದೇನು ? ನಿನ್ನ ಅಂಗಿಯ ಕಿಸೆಯಲ್ಲಿ ಕಾಣು ತಿರುವುದು ? ವಿಷಕಂಠ-ಹಿಂದುಮುಂದು ನೋಡದೆ, ಕಿಸೆಗೆ ಕೈಹಾಕಿ, ಕೈಗೆಸಿಕ್ಕಿದ ಕಾಗದದ ಚೀಲವೊಂದನ್ನು ತೆಗೆದು ಮುಂದಿರಿಸಿ, ಭ್ರಾಂತನಂತೆ ನಿಂತನು. ಯಶವಂತ- ಚೀಲವನ್ನು ಕೈಕೊಂಡು-ಅದರೊಳಗಿದ್ದ ಸೀಸೆಯೊಂದನ್ನು ಹೊರತೆಗೆದುನೋಡಿ, ಜಮೀನ್ದಾರನ ಮುಂದೆ ಕೈನೀಡಿ-'ಸ್ವಾಮಿ! ಪರೀಕ್ಷಿಸಬಹುದು ! ಇದಾವದ್ರಾವಕವೋ ? ಇವನಲ್ಲಿಗೆ ಬರಲು ಕಾರಣವೇನೋ ?' ವಿಷಕಂಠ-ನಡುನಡುಗುತ್ತ ' ಮಹಾಸ್ವಾಮಿಾ ! ದೇವರಾಣೆಗೂ, ಈ ಪಾದಸಾಕ್ಷಿಯಾಗಿಯೂ, ನಾನು ಯಾವ ತಪ್ಪನ್ನೂ ಮಾಡಿದವ ನಲ್ಲ, ಇದೆಲ್ಲಿಂದಬಂದಿತೋ, ನನಗೆ ಗೊತ್ತಿಲ್ಲ.' ತಾರಾಪತಿ-ಹಲ್ಲನ್ನು ಕಡಿಯುತ್ತ ' ಮೋಸಗಾರ ! ನೀನು ತಿಳಿಯದೆ ಯೇ-ಇದು ನಿನ್ನಲ್ಲಿಗೆ ಬಂದಿತ್ತಲ್ಲವೇ ? ಆಗಲಿ, ನಿದ್ರೋಹಕ್ಕೆ ಫಲವನ್ನು ಅನುಭವಿಸುವಾಗಲ್ಲವೇ ತಿಳಿಯಬೇಕು.' ಗಂಗೆ-ಏನಮ್ಮ ? ಯಮುನೆ ! ನೀನೇನುಹೇಳುವೆ ? ನಿನ್ನನ್ನೂ ಶೋಧಿ ಸಬೇಕಾಗಿ ಬಂದಿದೆಯಲ್ಲ ? ಯಮುನೆಯು, ಮರುಮಾತಿಲ್ಲದೆ, ಸೀರೆಯನ್ನು ಕೊಡಹಿ ದಳು, ಉಡಿಯೊಳಗಿದ್ದ ಸಣ್ಣ ಬಟ್ಟೆಯಗಂಟೊಂದು ಕೆಳಗೆ ಬಿದ್ದಿತು. ಭಯಕುತೂಹಲಗಳಿಂದ ಅದೇನಿರಬಹುದೆಂದು ಬಿಚ್ಚಿ ನೋಡಿದಳು. ಚಂದ್ರ ಮತಿಯ ಪೆಟ್ಟಿಗೆಗಳ ಬೀಗದಕೈಗಳು ಅದರಲ್ಲಿದ್ದುವು. ಯಮುನೆಗೆ ತಲೆ ತಿರುಗಿತು ; ಬುದ್ದಿಮಾಂದ್ಯವಾಯಿತು; ನಿಂತಂತೆಯೇ ಸ್ತಬ್ದಳಾದಳು.