ಪುಟ:ದಕ್ಷಕನ್ಯಾ .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೭ ದ ಕ ಕ ನ್ಯಾ ಗಂಗೆ-ಬೀಗದಕೈಗಳನ್ನು ತೆಗೆದು ಅತ್ತೆಯಕ್ಕೆಯಲ್ಲಿತ್ತು, " ಅಮ್ಮಾಯಿಾ! ಈಗಲಾದರೂ ನೋಡಿ ಹೇಳಬಾರದೇ ? ಇವಳ ಸತ್ಯಸಂಧತೆ ಯನ್ನು !' ಚಂದ್ರಮತಿ-ಯಮುನೆ ! ನಿನಗೀದುರ್ಬುದ್ಧಿಯುಂಟಾಯಿತೇಕೆ ? ಇದೇಕೆ ಹೀಗೆ ಮಾಡಿದೆ ? ಯಮುನೆ-ಅಮ್ಮಾಯಾ ! ನಾನು, ಯಾವದ್ರೋಹವನ್ನೂ ಮಾಡಿರುವು ದಿಲ್ಲ, ನನ್ನ ಮನೋನೈರ್ಮಲ್ಯವು-ಆ ಪರಮಾತ್ಮನಿಗೆ ಮಾತ್ರವೇ ಗೊತ್ತು, ಉಳಿದವರು, ಯಾರು ಹೇಗೆಬೇಕಾದರೂ ಹೇಳಿಕೊಳ್ಳ ಬಹುದು. ಇದು ನನ್ನಿಂದ ನಡೆದುದಲ್ಲ. ತಾರಾಪತಿ-ಸಾಕು ; ಯಮುನೆ ! ನೀನೆ ನಿನ್ನ ನಂಬಿಕೆಗೆ ಕಂಟಕವನ್ನೂ ಡಿದೆ. ನೀವಿಬ್ಬರೂ ಸಹಕಾರದಿಂದ ಈ ಕಳುವನ್ನು ಮಾಡಿರುವಿ ರೆಂಬುದು, ಈಗ ನಿರ್ಧರವಾಯಿತು ಆಗಲಿ, ಜ್ಞಾನಮಂಟಪ ದಲ್ಲಿಯೇ ನಿಮಗೆ ಇದರ ಅನುಭವವಾದೀತು. ಯಮುನೆ-ಅಪ್ಪ ! - ಸತ್ಯಕ್ಕೆ ಸಾವಿಲ್ಲವಷ್ಟೆ ! ಇಂದಿನ ದ್ವೇಷಸಾಧನೆ ಗೆಂದು ಮಾಡಲ್ಪಟ್ಟ ಈ ಮಾಟವು, ಮುಂದೆ ತಾನಾಗಿಯೇ ವ್ಯಕ್ತ ಪಡುವುದು ಇನ್ನು ನಿಮ್ಮಿಷ್ಟವಿದ್ದಂತೆ ಮಾಡಿರಿ ; ಸಿದ್ದವಾಗಿರು ವೆವು' ಎಂದು ಸುಮ್ಮನಾದಳು.

  • ಮುಂದೆ ವಿಷಕಂಠ-ಯಮುನೆಯರಮೇಲೆ ಕಲಂಕವು ಹೊರಿ ಸಲ್ಪಟ್ಟು, ಅವರಿಬ್ಬರೂ ಜ್ಞಾನಮಂಟಪಕ್ಕೆ ಒಯ್ಯಲ್ಪಟ್ಟರೆಂದು ಬೇರೆ ಹೇಳತಕ್ಕುದಿಲ್ಲವಷ್ಟೆ, ಇರಲಿ, ಇದರ ಫಲಿತಾಂಶವನ್ನು ಮುಂದೆನೋಡುವ.'