|| ಶ್ರೀ | ದ್ವಿತೀಯ ಪರಿಚ್ಛೇದ. ܦܣܛܢ ೧+ಂ -+++೨ ++++೨ ++++++೨ J -+++++ C++++೧ (ಪರಿಷ್ಕರಣ.) # ಅ ನಿಮ್ಮ ಸಂಘಟನೆ ' ಎಂದು ಕೂಗಿ ಕರೆದ ಗಂಗೆಯು, ++++++ ಭ್ರಾಂತಳಾಗಿ ಎದ್ದು ಕುಳಿತು, ಸುತ್ತಲೂ ನೋಡಿದಳು. "-++- ಸಾಗರವೂ ಇಲ್ಲ, ನಾವೆಯೂ ಇಲ್ಲ, ಸುಸಂಧಾದಿಗಳು ಮೊದಲೇ ಇರಲಿಲ್ಲ. ತಾನು ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವೆನೆಂಬುದು ನಿರ್ಧರವಾಯಿತು. ಹೊತ್ತು, ಆಗಲೇ ಬೆಳ ಗಾಗುತ್ತಿದ್ದಿತು. ಭ್ರಾಂತಳಾಗಿ-' ಸ್ವಪ್ನ ! ಅಯ್ಯೋ ! ನಿಜವಾಗಿಯೂ ಇದು ಸ್ವಪ್ನ !! ಹೀಗಾಯಿತೇಕೆ ?” ಎಂದು ಕೂಗುತ್ತ ಧಿಗ್ಗನೆದ್ದು ನಿಂತಳು. ನಿಂತೊಡನೆಯೇ ಇವಳ ಸೀರೆಯ ಸೆರಗಿನಿಂದ ಮಡಿಸಿದ್ದ ಪತ್ರ ವೊಂದು ಕೆಳಗೆ ಬಿದ್ದಿತು. ಗಂಗೆಯು ಕುತೂಹಲದಿಂದ ಕೈಗೆತ್ತಿ ನೋಡಿ ದಳು ; ವಿಳಾಸವು ತನ್ನದಾಗಿಯೇ ಇದ್ದಿತು. ಅಕ್ಷರವು ಮಾತ್ರ ಯಾರ ದೆಂಬುದೇ ಗೊತ್ತಾಗಲಿಲ್ಲ, ಅಲ್ಲಿಯೇ ಕುಳಿತು, ಪತ್ರವನ್ನು ತೆರೆದು ನೋಡಿ ದಳು, ಪತ್ರದ ವಿಷಯವನ್ನು ನಮ್ಮ ಸೋದರಿಯರ ಅವಗಾಹನೆಗೆಂದು ಯಥಾವತ್ತಾಗಿ ವಿವರಿಸಿರುವೆವು. (ಪತ್ರ) * ಪತಿಯುಳಿದು ಹಿತರಿಲ್ಲ, ಪತಿಯುಳಿದು ಗತಿಯಿಲ್ಲ, ಪಾತಿವ್ರ ತ್ಯಕ್ಕಣೆಯಾದ ಭೂಷಣವೇ ಇರುವುದಿಲ್ಲ, ಇದು ಸುಳ್ಳಲ್ಲ. ಪಾತಿವ್ರತ್ಯವೇ ನಮ್ಮ ಸತಿಯರ ಅನರ್ಘಾಭರಣವು, ಪತಿಸೇವೆ ಯೊಂದರಿಂದಲೇ ಇವರ ಜನ್ಮ ಸಾಫಲ್ಯವು, ಪತಿಯನ್ನು ಆಪದದಿಂದ ಪಾರುಮಾಡಬಲ್ಲವಳೇ ನಿಜವಾದ ಪತ್ನಿ ಯು. ಇದೇ ಸಿದ್ಧಾಂತವು. ಇದೇ ಸ್ತ್ರೀಧರ್ಮದ ರಹಸ್ಯ ಮಂತ್ರವು:
ಪುಟ:ದಕ್ಷಕನ್ಯಾ .djvu/೧೮೭
ಗೋಚರ