ಪುಟ:ದಕ್ಷಕನ್ಯಾ .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಸ ತಿ ಹಿ ತೃ ಷಿ ಣಿ ಮತ್ತೊಂದುವಿಚಾರ-ನಿನ್ನ ಸ್ವಾಮಿಯ ಜೀವಿತದಲ್ಲಿ ನಿನಗೆ ಅಭಿ ಲಾಷೆಯಿದ್ದರೆ, ಪತಿಯೇ ಜೇವನೆಸರಸ್ವನೆಂದು ನೀನು ನೆರೆನಂಬಿದ್ದರೆ ಪತಿಯ ಕ್ಷೇಮಾಭ್ಯುದಯಕ್ಕಾಗಿ ಸಿದ್ಧಳಾಗುವೆ. ಇತಿಹಿತೈಷಿ.” ಪತ್ರಾವಲೋಕನದಿಂದ ಗಂಗೆಯ ಮನಸ್ಸಿತಿಯು ಹೇಗಾಗಿ ತಿರು ಗಿರಬಹುದೆಂಬುದನ್ನು, ನಮ್ಮ ರಮಣೀಪಾರಕರ ಕೋಮಲಹೃದಯವೇ ಭಾವಿಸಿ ತಿಳಿಯಬೇಕಲ್ಲದೆ, ವಿವರಿಸಬೇಕೆಂದರೆ ನಮಗಳವಲ್ಲ. ಹೇಗೂ ಗಂ ಗೆಯು ವೀರಾಸನದಲ್ಲಿ ಕುಳಿತು, ದೈನ ಭಾವದಿಂದ ಕೈನೀಡಿ, ವಿಕೃತಕಂಠ ದಿಂದ- ಭಗವಂತ ! ಈ ದ್ರೋಹಿಯನ್ನು ದ್ಧರಿಸಲಾರೆಯಾ ? ಈ ಪಾಪಿ ಯ ದುರಭಿಮಾನದಿಂದ ಪ್ರಾಪ್ತವಾಗಿರುವ ಈ ವಿಪತ್ತನ್ನು ಪರಿಹರಿಸಲಾ ರೆಯಾ ? ಕಟಾಕ್ಷಿಸು, ದಯಾಮಯ ! ಅನುತಾಪಾಗ್ನಿಯಿಂದ ಸಂತ ಪಿಸುವ ಈ ದೀನಳನ್ನು ಕಟಾಕ್ಷ ಸು.' - ಹೀಗೆ ಹೇಳುತ್ತಿದ್ದಂತೆಯೇ ಮೈಮರೆತು, ನೆಲದಮೇಲೆ ಕವಿದು ಮಲಗಿದಳು, ಗಂಗೆಯು, ಕಾತರದಿಂದ ಕಂಗೆಟ್ಟು, ಮಲಗಿದ ಒಂದೆರಡು ನಿಮಿಷದಲ್ಲಿಯೇ ಮುಂಗಡೆಯಲ್ಲಿ ಕೋಮಲಕಂಠದಿಂದ ' ಕಾತರದಿಂದ ಕಾರೈಸಿದ್ದಿ ಯಾದೀತೇ ? ಶಾಂತಿಯಿರಲಿ-ತಾಯಾ !” ಎಂಬ ವಾಕ್ಯವು ಹೊರಟಿತು. ಗಂಗೆಯು ಬೆದರಿ, ತಲೆಯೆತ್ತಿ ನೋಡಿದಳು ; ತನ್ನ ಮುಂದೆ ವೀರಜನ ಯೋಗ್ಯವಾದ ಉಡುಪನ್ನು ಧರಿಸಿ ನಿಂತಿದ್ದ 13-14 ವರ್ಷದ ಕೋಮಲ ಬಾಲಕನನ್ನು ಕಂಡಳು ; ಕುತೂಹಲದಿಂದ ಕೇಳಿದಳು. “ ಅಯ್ಯಾ ! ನೀನಾರು ? ಇಲ್ಲಿಗೇಕೆಬಂದೆ ?' ಬಾಲಕ-ನಾನು ಜಮಾದಾರ್ ವಾಸುದೇವರಾಯರ ಬಂಧು ; ಅವರ ಆ ಕಡೆಯಿಂದ ನಿಮ್ಮಲ್ಲಿಗೆ ವರ್ತಮಾನವನ್ನು ತಂದಿರುವ ನಿಯೋಗಿ, ಗಂಗೆ--ಎದ್ದು ಕುಳಿತು ಶಠತೆಯಿಂದ ನಿಮ್ಮ ಜಮಾದಾರನಿಗೆ ನನ್ನಲ್ಲಿ ಕೆಲಸವೇನಿದೆ ??