ಪುಟ:ದಕ್ಷಕನ್ಯಾ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bj ಕಾಲದಲ್ಲಿ ಸ್ವಯಂಕೃಷಿಯಿಂದ ಮುಂದೆ ನಿಲ್ಲುವುದರ ಪರಿಣಾಮವೇನಾಗ ಬಹುದೋ ಎಂಬ ಭೀತಿಯೊಂದು ಹುಟ್ಟಿ, ನಮ್ಮ ಧರ್ಮಬಾಂಧವರ ಹೆಸರಿನಿಂದ ಪ್ರಚಾರಕ್ಕೆ ತರಲಾಯಿತು. ಇದಕ್ಕಾಗಿ ಅನೇಕವಿಧ ಕಷ್ಟ ನಷ್ಟಗಳುಂಟಾಗಬಹುದೆಂದು ತಿಳಿದೂ, ದೇಶಹಿತಕ್ಕೂ, ಧರ್ಮಭಗಿನಿಯರ ಅಭ್ಯುದಯಕ್ಕೂ ಮಾಡುವ ಕಾಲ್ಯದಲ್ಲಿ, ಎಷ್ಟು ಕಷ್ಟವಾದರೂ ಸರಿ ಯೆಂದು ಧೈಲ್ಯ ಹೊಂದಿ, ಪ್ರಕಾಶಸ್ಥಾನದಲ್ಲಿ ನಿಲ್ಲಲೊಪ್ಪಿದ ನಮ್ಮ ಸನ್ಮಾನ ನೀಯ ಭಾತೃಗಳಾದ ಶ್ರೀಯುತ ಹನುರ್ಮಾ ಕಂಪೆನಿಯವರ ಔದಾಗ್ಯ ಗುಣವಿಶೇಷವು ಸ್ತುತ್ಯರ್ಹವಾಗಿರುವುದು. ಆದರೆ, ಸುಶೀಲಾ ಪ್ರಚಾರವಾದ ಒಂದೆರಡು ತಿಂಗಳಲ್ಲಿಯೇ, ನಮ್ಮ ದೇಶೀಯ ಸೋದರಿಯರ ಸ್ನಾಭಿಪ್ರಾಯ ಪೂರ್ವಕವಾಗಿ ನಮಗೆ ದೊರೆತ ಕೆಲವು ಸಲಹೆಗಳಿ೦ದಲೂ,-' ನಮ್ಮ ಸೋದರಿಯರ ಪರಸ್ಪರ ಸೌಜನ್ಯ ಪ್ರದರ್ಶನದ ಪತ್ರವ್ಯವಹಾರವೇ ಮೊದಲಾದ ಕಾಲೋಚಿತ ಸೂಚ ನೆಗಳಿಗೂ, ಅವರ ಅಭ್ಯುದಯಕ್ಕೂ ಹಿತೈಷಿಣಿಯು ನೆರವಾಗಿರಬೇಕಾದರೆ, ಸ್ತ್ರೀ ಕರ್ತೃತ್ವದಿಂದಲೇ ಪ್ರಚಾರಕ್ಕೆ ಬರಬೇಕಲ್ಲದೆ, ಪುರುಷಬಂಧುಗಳ ವಶ ಕ್ಕೊಪ್ಪಿಸಲ್ಪಡುವ್ರದರಿಂದ ಉದ್ದೇಶಸಿದ್ದಿಯಾಗುವ ಸಂಭವವಿಲ್ಲ' ಎಂದು ಖಂಡಿತವಾಗಿ ಹೇಳಿದ ನಮ್ಮ ಧಮ್ಮಭಾತೃವರ್ಗಿಯರಾದ ಕೆಲವು ಪಂಡಿ ತರ ಸಲಹೆಗಳಿ೦ದಲೂ ಸತೀಹಿತೈಷಿಣಿಯ ಸಮಸ್ತ ಕಾಠ್ಯಭಾಗವನ್ನೂ ಸ್ವಂತವಾಗಿ ನಡೆಯಿಸುವುದೇ ಉತ್ತಮವೆಂಬುದು, ನಮ್ಮ ಅನುಭವಕ್ಕೆ ಬಂದಿತು. ಅಲ್ಲದೆ, ಮಧುರವಾಣಿಯ ಮಾಸಪತ್ರಿಕಾ ಕಾಧ್ಯವೇ ವಿಸ್ತಾರ ವಾಗಿರುವಾಗ ಹಿತೈಷಿಣಿಯ ಕಾರವೂ ಸೇರಿದರೆ, ಪ್ರಕಾಶಕರಿಗೆ ಅಧಿಕ ಶ್ರಮವಾಗುವುದೆಂಬ ವಿಚಾರವೊಂದು ಮುಂದಾಗಿ, ಅದನ್ನು ಸ್ವಂತವಾಗಿ ನಡೆಯಿಸಲು ನಿಶ್ಚಯಿಸಿತು, ಹೀಗೆ ಅತ್ಯಲ್ಪಾವಧಿಯಲ್ಲಿಯೇ, ಕೈಕೊಂಡ ಕಾಠ್ಯಭಾಗದ ನಿರ್ದಿಷ್ಟ ಫಲವನ್ನು ಕಾಣುವುದಕ್ಕೆ ಮೊದಲೇ-ಅದನ್ನು ಬಿಟ್ಟು ಕೊಡುವ ವಿಚಾರದಲ್ಲಿ ಸಂಪೂರ್ಣ ಸಮಾಧಾನವನ್ನು ವಹಿಸಿದುದ