ಪುಟ:ದಕ್ಷಕನ್ಯಾ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಸ ತಿ ಹಿ ತ ಸಿ ಣಿ ಬಾಲಕ-ತಾಯಾ ! ಇದೇ ಭಗವಾಯೆ ! ಇದೇ ಮನೋಶಕ್ತಿಯ ಸ್ವಭಾವವು, ಹೀಗಾಗಬೇಕಾದುದೇ ಸಹಜಧರ್ಮವು, ಸರ್ಕಾರದ ಕಡೆಯ ಪತ್ತೇದಾರನೇ ನಾನು, ನನ್ನ ಹೆಸರು ಕೃತಾಂತನೆಂದು. ಅದಿರಲಿ ; ಪತ್ರವನ್ನು ಚೆನ್ನಾಗಿ ನೋಡಿದೆಯಲ್ಲವೆ ? ಗಂಗೆ--ನೋಡಿದುದು ಮಾತ್ರವಲ್ಲ, ಮನಸ್ಫೂ ಪರಿಷ್ಕೃತವಾಗಿದೆಯೆಂದು ಹೇಳಬಹುದು. ಸುಕುಮಾರ ! ನೀನು ಬಂದುದಾವಾಗ ? ಪತ್ರ ವನ್ನು ಹೇಗೆ ತಲಪಿಸಿದೆ ? ನಿನಗೆ ನಿಜಾಂಶವು ಗೊತ್ತಿದೆಯೇ ? ಕೃತಾಂತ (ಚಾಲಕ)-ನಾನು ಬಂದುದು, ನಿನ್ನೆ ಯ ರಾತ್ರಿಯಲ್ಲಿ. ಪತ್ರವ ನ್ನು ಮುಟ್ಟಿ ಸಿದುದೂ ಕಿಟಿಕಿಯ ಕಡೆಯಿಂದ. ನನ್ನ ಪ್ರವೇಶಕ್ಕೆ ಅವಕಾಶವಾದರೂ, ಜೋರಮಾರ್ಗದಿಂದ ಹೊರಟುಹೋದ ಯಶ ವಂತನ ಅಜಾಗರೂಕತೆಯೆಂದರೆ ಸಾಕು, ನನಗೆ ನಿಜಾಂಶವು ಆಮೂಲಾಗ್ರವಾಗಿ ಗೊತ್ತಾಗಿದೆ. ಗಂಗೆ-ಹಾಗಾದರೆ, ನೀನು ಈ ವರೆಗೂ ಇದ್ದುದೆಲ್ಲಿ ? ಮಾಡುತ್ತಿದ್ದು ದೇನು ? ಕೃತಾ೦ತ-ಕಿರುಮನೆಯ ಗೋಡೆಯ ಮರೆಯಲ್ಲಿದ್ದು, ನೀನು ಹೇಳಿ ಮಾಡಿದುದೆಲ್ಲವನ್ನೂ ಕೇಳಿ ನೋಡುತ್ತಿದ್ದೆನು. ಗಂಗೆ--ಆತುರದಿಂದ- ಆದರೆ, ನನ್ನ ಅಂತಸ್ತಾಪದ ಮೂಲವನ್ನು ತಿಳಿ ದೆಯಾ ?' ಕೃತಾಂತ-ಮೊದಲು ಸಂಶಯಿಸಿದ್ದೆನು; ಆದರೆ, ಈಗ ನಿರ್ಧರವಾಗಿ ತಿಳಿ ದುಬಂದಿದೆ. ಗಂಗೆ-ವಿಕೃತಸ್ವರದಿಂದ- ಸುಕುಮಾರ ! ನನ್ನ ಆಲಸ್ಯ-ಉದಾಸೀನಗಳೆ ಇಷ್ಟು ಅನರ್ಧಗಳಿಗೂ ಕಾರಣವೆಂದು ನನಗೆ ಬೋಧೆಯಾಗುತ್ತಿದೆ. ಇದಕ್ಕಾಗಿ ನಾನು ತಕ್ಕ ಪ್ರಾಯಶ್ಚಿತ್ರವನ್ನು ಸ್ವಲ್ಪಾವಧಿಯಲ್ಲಿ ಯೇ ಮಾಡಿಕೊಳ್ಳಬೇಕಾಗಿದೆ. ಈವರೆಗೂ ನಾನು ಯಾರನ್ನು