ಪುಟ:ದಕ್ಷಕನ್ಯಾ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೯ ದ ಕ ಕ ನ್ಯಾ ಕೇವಲ ದೇಹಾಭಿಮಾನದಿಂದ ಆಪ್ತ ವರ್ಗದಲ್ಲಿ ಗಣಿಸುತಿದ್ದೆನೋ, ಯಾರ ಮೇಲಣ ವಿಶ್ವಾಸಕ್ಕಾಗಿ ನಾನು, ಈವರೆಗೂ ಕಂಡೂ ಕಾಣದಂತಿದ್ದು, ಇಷ್ಟರ ಅನಿಷ್ಟವನ್ನುಂಟುಮಾಡಲು ಹೇತುವಾ ದೆನೋ ಅಂತವರನ್ನೇ ಈಗ ನಾನು ನನ್ನ ಪ್ರಬಲಶತ್ರುಗಳಂತೆ ದ್ವೇಷಿಸುತ್ತಿರುವೆನು. ಇಂತಹರಲ್ಲಿ ಇನ್ನು ಕನಿಕರವೆಂಬುದು ನನ್ನ ಕನಸಿನಲ್ಲಿಯ ಬಳಿಸಾರುವಂತಿಲ್ಲ, ಇನ್ನೇನು ಹೇಳಲಿ ? ನನಗೆ ಈಗ ಬೇಕಾದುದು ಪತಿಯ ಕ್ಷೇಮವೊಂದೇ ! ಇದಕ್ಕಾಗಿ ನಾನು ನನ್ನ ಪ್ರಾಣವನ್ನಾ ದರೂ ಸಂತೋಷದಿಂದ ಸಮರ್ಪಿಸು ವೆನು, ನನ್ನಿಂದ ಮಾಡಬೇಕಾದುದೇನಿದ್ದರೂ ವಿಳಂಬಿಸದೆ, ಹಿಂದೆ ಗೆಯದೆ ಕಟ್ಟುಮಾಡು. ಕೃತಾಂತ-ಆನಂದೋದ್ರೇಕದಿಂದ ಗಂಗೆಯನ್ನೇ ನೋಡುತ್ತ-'ತಾಯಿಾ ! ಆತುರಪಡಬಾರದು, ನಿನ್ನ ಸ್ವಾಮಿಯ ಬಿಡುಗಡೆಗೆ ನೀನು ಮಾಡ ಬೇಕಾದ ಕಾರವು ಬಹು ಪ್ರಯಾಸಕರವಾದುದು, ಇದನ್ನು ನಿರ್ವಹಿಸಬೇಕಾದರೆ, ನಿನ್ನಲ್ಲಿ ಅಧಿಕ ಸಾಹಸವೂ, ದೃಢಪ್ರತಿಜ್ಞೆ ಯ, ಶ್ರಮಸಹಿಷ್ಣುತೆಯೂ ಇರಬೇಕು. ಗಂಗೆ-ಉನ್ಮಾದಿನಿಯಂತೆ ಧಿಗ್ಗನೆದ್ದು ನಿಂತು ಮಗು, ಕೃತಾಂತ ! ನನ್ನನ್ನು ಸಾಮಾನ್ಯ ಸ್ತ್ರೀಯೆಂದು ಭಾವಿಸಿದೆಯೇನು ? ಅಭಿಮಾನ, ಆಲಸ್ಯಾದಿಗಳಿಂದ ಈವರೆಗೂ ಜಡಳಾಗಿದ್ದ ನಾನು ಈಗ ಕರ್ತ ವ್ಯನಿಷ್ಠೆಯೊಂದನ್ನೇ ಹಿಡಿದಿರುವೆನು, ನನ್ನಲ್ಲಿ ಈಗ ಅಬಲಾಸ್ವಭಾ ವದ ಮಾರ್ದವವೆಳ್ಳಷ್ಟೂ ಉಳಿದಿರುವುದಿಲ್ಲ, ಕೇವಲ ಕೇಶರೋಷಗಳ ನಿಷ್ಟುರತೆಯೊಂದೇ ನನ್ನ ಸಮಸ್ತ ರೋಮಕೂಪದ ಲ್ಲಿಯ ಅಗ್ನಿ ಕಣದಂತೆ ಜ್ವಲಿಸುತ್ತಿದೆ. ಈಗ ನನ್ನನ್ನು ಪ್ರತ್ಯಕ್ಷ ದಾನವಿಯೆಂದು ಹೇಳಿದರೂ ತಪ್ಪಾಗುವಂತಿಲ್ಲ, ನಿನಗಿನ್ನು ಸಂದೇ ಹವು ಸಾಕು. ಇದೊ ನಾನು ಈಗಲೇ ಸಿದ್ಧಳಾಗಿರುವೆನು.