ಪುಟ:ದಕ್ಷಕನ್ಯಾ .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಸ J ಹಿತ ಷಿ ಣಿ ಚಂದ್ರಮತಿಯು, ಸೊಸೆಯು ಹೊರಡುವದನ್ನು ನೋಡಬೇಕೆಂದು ಆತುರದಿಂದ ಬಂದು ಬಾಗಲಬಳಿ ನಿಂತಳು. ಅಷ್ಟರಲ್ಲಿ ಗಂಗೆಯು ಕುಳಿತಿದ್ದ ಬಂಡಿಯು ಹೊರಟುಹೋಗಿದ್ದಿತು. ಮನೆಯಮುಂಗಡೆಯಲ್ಲಿ ಮತ್ತೊಂದು ಬಂಡಿಯ ಪೊಲೀಸರೂ ನಿಂತಿದ್ದುದನ್ನೂ, ಕೃತಾಂತನು ಅವರಿಗೆ ಕಾರ್ ಕ್ರಮವನ್ನು ತಿಳಿಸುತ್ತಿದ್ದುದನ್ನೂ ಕಂಡು ಭ್ರಾಂತಳಾಗಿ,-ತೊದಲುನಾಲಿಗೆ ಯಿಂದ ಕೇಳಿದಳು,-' ಯಾರಪ್ಪ, ನೀವು ? ಇಲ್ಲಿಗೇಕೆ ಬಂದಿರುವಿರಿ ?' ಕೃತಾಂತ' ಅಮ್ಮಾಯಿಾ ! ನಾವು ಸರ್ಕಾರದ ಕಡೆಯವರು, ತಮ್ಮ ಮಕ್ಕಳು, ರಾಜಕಾರಗೌರವದಲ್ಲಿರುವುದರಿಂದ, ಇನ್ನೂ ಒಂದೆರಡು ವಾರಗಳವರೆಗೆ ಬರುವುದಿಲ್ಲ, ಆವರೆಗೂ ಈ ಮನೆಯು ಸರ್ಕಾ ರದವರ ವಿಚಾರಣೆಗೆ ಒಳಪಟ್ಟಿರಬೇಕಾಗಿದೆ. ನಿಮ್ಮ ಸಾಮಗ್ರಿಗ ಳೊಡನೆ ನಿಮ್ಮನ್ನು ಬೇರೆ ಸ್ಥಳದಲ್ಲಿ ಬಿಡಬೇಕಾಗಿದೆ. ವಿಳಂಬಿಸದೆ ನಿಮ್ಮ ದೇವರು-ಕೃಪೆಟ್ಟಿಗೆ ಮೊದಲಾದುವುಗಳೊಡನೆ ಬಂಡಿಯಲ್ಲಿ ಕುಳಿತುಕೊಳ್ಳಬೇಕು, ತ್ವರೆಮಾಡಿರಿ, ಹೆಚ್ಚು ಹೊತ್ತು ತಡೆಯು ವಂತಿಲ್ಲ. ಚಂದ್ರಮತಿ-ಭಯದಿಂದ-' ಹಾ ! ಹಾಗೆಂದರೇನು ? ಮಗನೂ, ಮಕ್ಕ ಭೂ ಸೌಖ್ಯವಾಗಿದ್ದಾರೆಯೋ-ಇಲ್ಲವೊ ? ಬೇಗ ಹೇಳು, ನಾನು ಇನ್ನೆಲ್ಲಿಗೆ ಹೋಗಬೇಕು ?' ಕೃತಾಂತಚಿಂತಿಸಬಾರದು, ಎಲ್ಲರೂ ಸೌಖ್ಯವಾಗಿರುತ್ತಾರೆ, ನೀವು ಇನ್ನು ಸ್ವಲ್ಪ ಕಾಲ, ರಾವ್ ಬಹದೂರ್ ರಾಧಾನಾಧರಾಯರ ಮನೆಯಲ್ಲಿ ಸುಕನ್ಯಾದೇವಿಯ ಉಪಚಾರವನ್ನು ಕೈಕೊಳ್ಳುತ್ತಿರ ಬೇಕು, ಇಲ್ಲಿರಲಾಗದು. ಚಂದ್ರಮತಿಯು, ಬಗೆಗೆಟ್ಟು ಸಂದೇಹದಿಂದ ಕುದಿಯುತ್ತ, ಸಾಮಗ್ರಿಗಳೊಡನೆ ಬಂದು ಬಂಡಿಯಲ್ಲಿ ಕುಳಿತಳು, ಕೃತಾಂತನು ಪೊ ಲೀಸರ ಸಹಾಯದಿಂದ ಮನೆಯೊಳಹೊಕ್ಕು ಒಳಗಿದ್ದವರೆಲ್ಲರಿಗೂ ಕೈ