ಪುಟ:ದಕ್ಷಕನ್ಯಾ .djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ಚತುರ್ಥ ಪರಿಚ್ಛೇದ. •••• + [ [ r +FFFEth ೦೦೦೦೦

488888:

OGA 004x? 3xy (ಭಯಪ್ರದರ್ಶನ.) {{ಾಂfದು ಗೊಲ್ಲರಪಾಳ್ಯದ ಸತ್ರವನ್ನು ನೋಡಿದರೆ, ವಿಶೇಷ ವೇನೋ ನಡೆಯುವಂತೆ ತೋರುತ್ತಿದೆ. ಸತ್ರದ ಸುತ್ತಲ ಬೈಲುನೆಲವು, ಸುಮಾರು ಅ ರೆಗೆ ಕಲ್ಲು“ಸಿ

      • ಮುಳ್ಳು-ಗರಿಕೆಗಳಿಗೂ ಅವಕಾಶವಿಲ್ಲದಂತೆ ಅಗೆದು ಸರಿ ಮಾಡಲ್ಪಟ್ಟಿದೆ. ಸತ್ರದ ಒಳಗಡೆಯಲ್ಲಿಯೂ ಹೀಗೆಯೇ ಚೊಕ್ಕಟವಾಗಿ ಕಾಣುತ್ತಿದೆ. ಆದರೆ, ಹೊರಗೆ ಒಬ್ಬ ಆಳು ತೂಕಡಿಸುತ್ತಿರುವನಲ್ಲದೆ ಮತ್ತಾರೂ ಕಾಣುತ್ತಿಲ್ಲ, ಹೀಗಿರಲು ಕಾರಣವೇನು ? ಸತ್ರವು ಅಷ್ಟೇನೂ ದೊಡ್ಡದಲ್ಲ. ಸುಮಾರು ಇನ್ನೂ ರುಮಂದಿಗಳು ಕುಳ್ಳಿರಬಹುದಾದಷ್ಟು ವಿಶಾಲವುಳ್ಳ ಒಂದೇ ಒಂದು ತೊಟ್ಟಿಯೂ, ಸುತ್ತಲೂ ನಾಲ್ಕಾರು ಕಿರು ಮನೆಗಳೂ ಇರುವುವಲ್ಲದೆ ಮತ್ತೇನೂ ಇಲ್ಲ, ಇಷ್ಟು ಚಿಕ್ಕ ಸತ್ರದಲ್ಲಿ ದೀಪಕ್ಕೂ ಅಭಾವವಾಗಿ ಅಲ್ಲಲ್ಲಿ ಒಂದೆರಡು ಸಣ್ಣ ಸಣ್ಣ ಸೊಡರುಗಳು ಮಿನುಗುತ್ತಿವೆ. ಪ್ರತಿಯೊಂದು ಬಾಗಲಲ್ಲಿಯ ತಳಿರುತೋರಣವು ಮಾತ್ರ ನಳನಳಿಸುವಂತಿದೆ. ಉಳಿದುದು ಹೇಗಾದರೂ ಇರಲಿ, ಒಳಗೇನಿರುವು ದೆಂಬುದನ್ನು ನೋಡಿದರೆ ಸಾಕು.

ಕೆಲಸಕ್ಕೆ ಬಾರದ ಸತ್ರದ ಸುದ್ದಿ ನಮಗೇಕೆಂದು ಬೇಸರಿಸಬೇಡಿರಿ; ಸುಹೈದರೇ ! ಮೆಲ್ಲನೆ ಒಳಹೊಕ್ಕು ನೋಡಿರಿ, ಎಡಗಡೆಯ ಕಿರುಮನೆ ಯೊಳಗೆ ದೀಪವುರಿಯುತ್ತಿರುವುದಲ್ಲವೇ ? ಒಳಗೆ ಯಾರಿರುವರೆಂಬುದನ್ನು ತಿಳಿಯಿರಿ, ಮಂಚದಮೇಲೆ ಯಾರೋ ಮಲಗಿರುವರಲ್ಲವೇ ? ಅಹುದು. ಮಲಗಿರುವವರು ಮತ್ತಾರೂ ಅಲ್ಲ ; ಜಮಾನಾರ್‌ ತಾರಾಪತಿ ! ಹಾ !